ಹೈದರಾಬಾದ್ ನಲ್ಲಿ ಭಾರೀ ಅಗ್ನಿ ಅವಘಡ; ಏಳು ಮಂದಿ ಅಸ್ಪತ್ರೆಗೆ

ಹೈದರಾಬಾದ್, ಜನವರಿ 31: ಇಲ್ಲಿನ ನಾಮ್ ಪಲ್ಲಿ ವಸ್ತು ಪ್ರದರ್ಶನ ಮೈದಾನದಲ್ಲಿ ಬುಧವಾರ ಸಂಜೆ ಬಾರೀ ಅಗ್ನಿ ಅವಘಡ ಸಂಭವಿಸಿದ್ದು, ಏಳು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ‌ಅಗ್ನಿ ಶಾಮಕದಳದ ಹದಿಮೂರು ವಾಹನಗಳು ಬೆಂಕಿ ನಂದಿಸಲು ಯತ್ನಿಸುತ್ತಿವೆ.

ಭಯಗೊಂಡ ಜನರು ಒಟ್ಟಿಗೆ ಸುರಕ್ಷಿತ ಸ್ಥಳಕ್ಕೆ ಓಡಲು ಯತ್ನಿಸಿದ್ದರಿಂದ ಸಣ್ಣ ಪ್ರಮಾಣದ ಕಾಲ್ತುಳಿತ ಕೂಡ ಆಗಿದೆ. ಅಖಿಲ ಭಾರತ ಕೈಗಾರಿಕಾ ಪ್ರದರ್ಶನ ನಡೆಯುತ್ತಿದ್ದ ವೇಳೆ ಒಂದು ಮಳಿಗೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆ ನಂತರ ನೂರಾರು ಮಳಿಗೆಗಳಿಗೆ ಭಾರೀ ಪ್ರಮಾಣದಲ್ಲಿ ಬೆಂಕಿ ವ್ಯಾಪಿಸಿದೆ.

Hyderabad Fire Accident

ಶಾರ್ಟ್ ಸರ್ಕೀಟ್ ಅಥವಾ ಟ್ರಾನ್ಸ್ ಫಾರ್ಮರ್ ಸಿಡಿದು ಈ ರೀತಿ ಅಗ್ನಿ ಅವಘಡ ಸಂಭವಿರಬಹುದು ಎನ್ನಲಾಗುತ್ತಿದೆ. ಹೈದರಾಬಾದ್ ನಲ್ಲಿ ಕಾಂಗ್ರೆಸ್ ನ ರಾಜ್ಯ ಕಚೇರಿ ಇರುವ ಎದುರಿಗೇ ನಾಮ್ ಪಲ್ಲಿ ವಸ್ತು ಪ್ರದರ್ಶನ ಮೈದಾನ ಇದೆ. ಇಲ್ಲಿಗೆ ಅಪಾರ ಪ್ರಮಾಣದಲ್ಲಿ ಜನರು ಬರುತ್ತಾರೆ. ಅದರಲ್ಲೂ ರಜಾ ದಿನಗಳಲ್ಲಿ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+