Breaking: ತೆಲಂಗಾಣದಲ್ಲಿ ಅಮಿತ್ ಶಾ ಬೃಹತ್ ರ‍್ಯಾಲಿ
ಹೈದರಾಬಾದ್, ಆಗಸ್ಟ್ 21: ತೆಲಂಗಾಣದ ಮುನುಗೋಡೆ ಕ್ಷೇತ್ರದ ಉಪಚುನಾವಣೆ ಹಿನ್ನೆಲೆ ಭಾನುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಮುನುಗೋಡೆಯಲ್ಲಿ ಬೃಹತ್ ಮೆರವಣಿಗೆ ನಡೆಸಲಿದ್ದು, ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ತೆಲಂಗಾಣ ಜನತೆ ರಾಜ್ಯದಲ್ಲಿ ಬದಲಾವಣೆ ಬಯಸಿದ್ದಾರೆ ಎಂದರು.
"ರಾಜ್ಯದಲ್ಲಿ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ನಾವು ಕಷ್ಟಪಡುತ್ತಿದ್ದೇವೆ, ಉಪಚುನಾವಣೆಯ ಪೂರ್ವಭಾವಿಯಾಗಿ ಮುನುಗೋಡಿನಲ್ಲಿ ಅಮಿತ್ ಷಾ ರ‍್ಯಾಲಿ ಉದ್ದೇಶಿಸಿ ಮಾತನಾಡಲಿದ್ದಾರೆ. ದೊಡ್ಡ ನಾಯಕರು ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಾರೆ, ನಾವು ಖಂಡಿತವಾಗಿಯೂ ಈ ಕ್ಷೇತ್ರದಲ್ಲಿ ಗೆಲ್ಲುತ್ತೇವೆ" ಎಂದರು.

"ಜನರು ಕೆ. ಚಂದ್ರಶೇಖರ್ ಸರ್ಕಾರದ ಬಗ್ಗೆ ಅತೃಪ್ತರಾಗಿದ್ದಾರೆ. ರಾಜ್ಯದಾದ್ಯಂತ ದೌರ್ಜನ್ಯಗಳು ಮತ್ತು ಹಿಂಸಾಚಾರಗಳು ನಡೆಯುತ್ತಿವೆ. ಇಂತಹ ಅಂತಹ ವಾತಾವರಣದಲ್ಲಿ ಜನರು ಭಯಭೀತರಾಗಿದ್ದಾರೆ. ಹೀಗಾಗಿ ಅವರು ಬಿಜೆಪಿಯನ್ನು ಮಾತ್ರ ಅಧಿಕಾರಕ್ಕೆ ತರುವ ಬಯಸುತ್ತಾರೆ" ಎಂದರು.
ಇದಕ್ಕೂ ಮುನ್ನ ಬಿಜೆಪಿ ಮುಖಂಡ ಕೆ. ಲಕ್ಷ್ಮಣ್ ಕೂಡ ಅಮಿತ್ ಶಾ ರಾಜ್ಯ ಪ್ರವಾಸದ ಬಗ್ಗೆ ಮಾತನಾಡಿದ್ದಾರೆ.
'ಮುನುಗೋಡೆ ಉಪಚುನಾವಣೆಯಿಂದ ತೆಲಂಗಾಣ ರಾಜಕೀಯ ಬದಲಾಗಲಿದೆ. ಜನರು ಈಗೀನ ಸರಕಾರದ ಬಗ್ಗೆ ಬೇಸರಗೊಂಡಿದ್ದಾರೆ. ತೆಲಂಗಾಣ ಬದಲಾಗಬೇಕೆಂದು ಬಯಸುತ್ತಿದ್ದಾರೆ. ಈ ಬದಲಾವಣೆ ಬಿಜೆಪಿಯಿಂದ ಮಾತ್ರ ಸಾಧಿಸಲು ಸಾಧ್ಯ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
"ಜನರು ಈ ಮೊದಲು ಕಾಂಗ್ರೆಸ್ ಪರ್ಯಾಯ ಎಂದು ನಂಬಿದ್ದರು, ಆದರೆ ಈಗ ಎಲ್ಲಾ ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್ ಅನ್ನು ವಿರೋಧಿಸಲು ಬಿಜೆಪಿಯೊಂದಿಗೆ ಒಂದಾಗಿವೆ. ತೆಲಂಗಾಣದ ಜನರು ಬಿಜೆಪಿಯೊಂದಿಗಿದ್ದಾರೆ. ರಾಜ್ಯದ ಜನರ ಸಹಾಯದಿಂದ ನಾವು ಪರ್ಯಾಯವಾಗಿ ಮತ್ತು ತೆಲಂಗಾಣದಲ್ಲಿ ಸರ್ಕಾರ ರಚಿಸಲಿದ್ದೇವೆ" ಎಂದು ಲಕ್ಷ್ಮಣ್ ಹೇಳಿದರು.
ಇತ್ತ, ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಶನಿವಾರದಂದು ಮುನುಗೋಡೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಪ್ರಚಾರವನ್ನು ಪ್ರಾರಂಭಿಸಿದೆ. ಮುಖ್ಯಮಂತ್ರಿ ಕೆಸಿಆರ್ ಕೂಡ ಕ್ಷೇತ್ರದಲ್ಲಿ ಸಾರ್ವಜನಿಕ ರ ಸಮಾವೇಶ ನಡೆಸಿದ್ದು, ಈ ವೇಳೆ ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
"ಕಳೆದ ಎಂಟು ವರ್ಷಗಳ ಮೋದಿ ಸರ್ಕಾರದ ಅವಧಿಯಲ್ಲಿ ಸಮಾಜದ ಯಾವುದೇ ವರ್ಗಕ್ಕೆ ಪ್ರಯೋಜನವಾಗಿಲ್ಲ, ಕೇಂದ್ರ ಕೃಷಿ ಭೂಮಿಗೆ ವಿದ್ಯುತ್ ಮೀಟರ್ ಅಳವಡಿಸಲು ಬಯಸಿದೆ. ಆದರೆ, ನಾವದನ್ನು ಮಾಡುವುದಿಲ್ಲ. ಮುನುಗೋಡೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆದ್ದರೆ, ಅವರು ರೈತರ ಜಮೀನುಗಳಿಗೆ ವಿದ್ಯುತ್ ಮೀಟರ್ ಅಳವಡಿಸುತ್ತಾರೆ. ಆದರೆ ನಾನು ಅವರ ವಿರುದ್ಧ ಹೋರಾಡುತ್ತಿದ್ದೇನೆ" ಎಂದು ಕೆಸಿಆರ್ ಹೇಳಿದ್ದಾರೆ.
ಏಕನಾಥ್ ಶಿಂಧೆ ಅವರನ್ನು ಇಲ್ಲಿಗೆ ಕರೆತಂದು ನಮ್ಮ ಸರ್ಕಾರ ಪತನ ಮಾಡುವುದಾಗಿ ಬಿಜೆಪಿ ಹೇಳುತ್ತಿದೆ. ನನ್ನ ವಿರುದ್ಧ ಇಡಿ ಕೇಸ್ ಹಾಕುತ್ತೇವೆ ಎಂದರು. ನಿಮಗೆ ಏನು ಬೇಕೋ ಅದನ್ನು ಮಾಡಿ ಎಂದು ನಾನು ಹೇಳಿದ್ದೇನೆ. ತಪ್ಪು ಮಾಡುವ ಜನರು ಇಡಿಯಿಂದ ಗಾಬರಿಗೊಳ್ಳುತ್ತಾರೆ ಎಂದು ಕೇಂದ್ರದ ವಿರುದ್ಧ ಕಿಡಿ ಕಾರಿದ್ದರು.












Click it and Unblock the Notifications