ನಂದಮೂರಿ ಹರಿಕೃಷ್ಣ ನಿಧನ: ನಲ್ಗೊಂಡ ಠಾಣೆಯಲ್ಲಿ FIR ದಾಖಲು
ಹೈದರಾಬಾದ್, ಆಗಸ್ಟ್ 30: ಖ್ಯಾತ ನಟ, ರಾಜಕಾರಣಿ ನಂದಮೂರಿ ಹರಿಕೃಷ್ಣ ಅವರನ್ನು ಬಲಿತೆಗೆದುಕೊಂಡ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ನಲ್ಗೊಂಡ ಠಾಣೆಯ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.
ಅತಿ ವೇಗದ ಚಾಲನೆಯೇ ನಂದಮೂರಿ ಹರಿಕೃಷ್ಣ ಅವರ ದುರಂತ ಸಾವಿಗೆ ಕಾರಣ ಎಂದು ಕಾರಿನಲ್ಲಿ ಅವರೊಂದಿಗಿದ್ದ ರವಿ, ಶಿವಾಜಿ ಅವರ ಹೇಳಿಕೆಯನ್ನು ಆಧರಿಸಿ ಐಪಿಸಿ(ಭಾರತೀಯ ದಂಡ ಸಂಹಿತೆ) ಸೆಕ್ಷನ್ 304(A), 337 ಅಡಿಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ.
61 ವರ್ಷ ವಯಸ್ಸಿನ ನಂದಮೂರಿ ಹರಿಕೃಷ್ಣ ಅವರು ಆಂಧ್ರಪ್ರದೇಶದ ನ್ಲಗೊಂಡ ಬಳಿಯ ಅನ್ನೆಪರ್ತಿ ಎಂಬಲ್ಲಿ ಸಂಭವಿಸಿದ ಅಪಘಾತದಲ್ಲಿ ದುರ್ಮರಣಕ್ಕೀಡಾದರು. ವೇಗವಾಗಿ ವಾಹನ ಚಲಾಯಿಸುತ್ತಿದ್ದ ಕಾರಣ, ಕಾರು ರಸ್ತೆ ಡಿವೈಡರ್ ಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿತ್ತು. ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರತ್ಯಕ್ಷದರ್ಶಿಗಳಾದ ರವಿ ಮತ್ತು ಶಿವಾಜಿ ಅವರ ಹೇಳಿಕೆಯನ್ನು ಆಧರಿಸಿ ಪ್ರಕರಣ ದಾಖಲಿಸಲಾಗಿದೆ.

ಹರಿಕೃಷ್ಣ ಅವರ ಅಂತ್ಯ ಸಂಸ್ಕಾರ ಇಂದು ನಡೆಯಲಿದ್ದು, ಅವರ ಮನೆಯ ಮುಂದೆ ಈಗಾಗಲೇ ಅಭಿಮಾನಿಗಳು, ಬಂಧುಗಳು ನೆರೆದಿದ್ದಾರೆ. ಹರಿಕೃಷ್ಣ ಅವರ ನಿಧನಕ್ಕೆ ಹಲವು ಖ್ಯಾತ ನಟರು, ರಾಜಜಕಾರನಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.












Click it and Unblock the Notifications