ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಹೆಜ್ಜೆ ಗುರುತು ಸಿಕ್ಕಿದೆ; ಖುಷ್ಬೂ

|
Google Oneindia Kannada News

ಹೈದರಾಬಾದ್, ಡಿಸೆಂಬರ್ 04: ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ (ಜಿಎಚ್‍ಎಂಸಿ) ಚುನಾವಣೆಯಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಬ್ಯಾಲೆಟ್ ಪೇಪರ್ ಮೂಲಕ ನಡೆದ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಮುಂದುವರೆದಿದೆ.

150 ವಾರ್ಡ್‌ಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಬಗ್ಗೆ ಹಲವಾರು ಬಿಜೆಪಿ ನಾಯಕರು ಟ್ವೀಟ್ ಮಾಡಿದ್ದಾರೆ. ಜಿಎಚ್‌ಎಂಸಿ ಚುನಾವಣೆಯಲ್ಲಿ ತೆಲಂಗಾಣದ ಟಿಆರ್‌ಎಸ್ ಮತ್ತು ಬಿಜೆಪಿಯ ಪ್ರತಿಷ್ಠೆ ಅಡಗಿದೆ.

ಜಿಎಚ್‌ಎಂಸಿ ಚುನಾವಣೆ; ಪ್ರಚಾರ ಮಾಡಿದವರು ಐಸೋಲೇಷನ್‌ಗೆ!ಜಿಎಚ್‌ಎಂಸಿ ಚುನಾವಣೆ; ಪ್ರಚಾರ ಮಾಡಿದವರು ಐಸೋಲೇಷನ್‌ಗೆ!

ನಟಿ, ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಚುನಾವಣೆ ಫಲಿತಾಂಶದ ಬಗ್ಗೆ ಟ್ವೀಟ್ ಮಾಡಿದ್ದಾರೆ. "ಹೈದರಾಬಾದ್‌ನಲ್ಲಿ ಬಿಜೆಪಿಯ ಮುನ್ನಡೆಯಿಂದಾಗಿ ಪಕ್ಷಕ್ಕೆ ದಕ್ಷಿಣ ಭಾರತದಲ್ಲಿ ಹೆಜ್ಜೆ ಗುರುತು ಸಿಕ್ಕಿದೆ" ಎಂದು ಹೇಳಿದ್ದಾರೆ.

ಜಿಎಚ್‌ಎಂಸಿ ಚುನಾವಣೆ ಟಿಆರ್‌ಎಸ್‌ಗೆ ಸ್ಪಷ್ಟ ಸಂದೇಶ! ಜಿಎಚ್‌ಎಂಸಿ ಚುನಾವಣೆ ಟಿಆರ್‌ಎಸ್‌ಗೆ ಸ್ಪಷ್ಟ ಸಂದೇಶ!

ಮತ ಎಣಿಕೆ ಪ್ರಕ್ರಿಯೆ ಮುಂದುವರೆದಿದೆ. ಬಿಜೆಪಿ 85, ಟಿಆರ್‌ಎಸ್ 29, ಎಐಎಂಐಎಂ 17 ಮತ್ತು ಕಾಂಗ್ರೆಸ್ 2 ಸ್ಥಾನದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಬ್ಯಾಲೆಟ್ ಪೇಪರ್ ಮೂಲಕ ಮತದಾನ ನಡೆದಿದ್ದರಿಂದ ಫಲಿತಾಂಶ ಪ್ರಕಟವಾಗುವಾಗ ಸಂಜೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಜಿಎಚ್‌ಎಂಸಿ ಚುನಾವಣೆ ಬ್ಯಾಲೆಟ್ ಪೇಪರ್‌ನಲ್ಲಿ ಏಕೆ? ಜಿಎಚ್‌ಎಂಸಿ ಚುನಾವಣೆ ಬ್ಯಾಲೆಟ್ ಪೇಪರ್‌ನಲ್ಲಿ ಏಕೆ?

ಬಿಜೆಪಿ ನಾಯಕಿ ಟ್ವೀಟ್

"ಹೈದರಾಬಾದ್‌ನ ಗೆಲುವು ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಹೆಜ್ಜೆ ಗುರುತು ನೀಡಿದೆ. ನಾನು ನಿಮಗೆ ಭರವಸೆ ಕೊಡುತ್ತೇನೆ. ತಮಿಳುನಾಡು ದೂರವಿಲ್ಲ. 2021ರ ಚುನಾವಣೆಯಲ್ಲಿ ತಮಿಳುನಾಡಿಗೆ ನಾವು ಅದ್ದೂರಿಯಾಗಿ ಪವೇಶ ಮಾಡಲಿದ್ದೇವೆ. ನರೇಂದ್ರ ಮೋದಿ ಅವರ ಮೇಲೆ ನಂಬಿಕೆ ಇಡಿ" ಎಂದು ಖೂಷ್ಬೂ ಟ್ವೀಟ್ ಮಾಡಿದ್ದಾರೆ.

ಧನ್ಯವಾದಗಳು ಹೈದರಾಬಾದ್

"ಜಿಎಚ್‌ಎಂಸಿಯ ಚುನಾವಣೆ ಫಲಿತಾಂಶ ಜನರಿಗೆ ಏನು ಬೇಕು ಎಂಬುದನ್ನು ಹೇಳಿದೆ. ನಾವು ಏನನ್ನೂ ಹೇಳುವುದಿಲ್ಲ. ಬಿಜೆಪಿ ಮತ್ತು ನರೇಂದ್ರ ಮೋದಿ ಅವರ ಮೇಲೆ ಸಂಪೂರ್ಣ ನಂಬಿಕೆ ಇಟ್ಟಿದ್ದಾರೆ. ಧನ್ಯವಾದಗಳು ಹೈದರಾಬಾದ್" ಎಂದು ಖುಷ್ಬೂ ಟ್ವೀಟ್ ಮಾಡಿದ್ದಾರೆ.

ಬಿ. ಎಲ್. ಸಂತೋಷ್ ಟ್ವೀಟ್

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌ ಸಂತೋಷ್ ಅವರು ಸಹ ಜಿಎಚ್‌ಎಂಸಿ ಚುನಾವಣೆ ಫಲಿತಾಂಶದ ಕುರಿತು ಟ್ವೀಟ್ ಮಾಡಿದ್ದಾರೆ.

ವೈ. ಸತ್ಯಕುಮಾರ್ ಟ್ವೀಟ್

ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ವೈ. ಸತ್ಯಕುಮಾರ್ ಅವರು ಸಹ ಹೈದರಾಬಾದ್ ಚುನಾವಣೆ ಫಲಿತಾಂಶ ಕುರಿತು ಟ್ವೀಟ್ ಮಾಡಿದ್ದಾರೆ.

English summary
BJP performance in Hyderabad shows the party has found its foothold in south India. We will make a grand entry into Tamil Nadu tweeted actres turned politician Khushbu Sundar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X