ಹೈದರಾಬಾದ್‌ನಲ್ಲಿ ನಾಲ್ವರು ಹುಜಿ ಉಗ್ರರ ಬಂಧನ
ಹೈದರಾಬಾದ್, ಆಗಸ್ಟ್ 14 : ಹೈದರಾಬಾದ್ ಪೊಲೀಸರು ನಿಷೇಧಿತ ಹುಜಿ ಉಗ್ರಗಾಮಿ ಸಂಘಟನೆಯ ನಾಲ್ವರು ಸದಸ್ಯರನ್ನು ಶುಕ್ರವಾರ ಬಂಧಿಸಿದ್ದಾರೆ. ಬಂಧಿತರ ಪೈಕಿ ಒಬ್ಬರು ಪಾಕಿಸ್ತಾನದವರು ಎಂದು ತಿಳಿದುಬಂದಿದ್ದು, ತನಿಖೆ ಮುಂದುವರೆದಿದೆ.
ಮಯನ್ಮಾರ್‌ನಿಂದ ಆಗಮಿಸಿದ್ದ ನಾಲ್ವರನ್ನು ಹೈದರಾಬಾದ್ ಪೊಲೀಸರು ಶುಕ್ರವಾರ ನಗರದಲ್ಲಿ ಬಂಧಿಸಿದ್ದಾರೆ. ಲಷ್ಕರ್ ಎ ತೋಯ್ಬಾ ಸಂಘಟನೆಯ ಸಹೋದರ ಸಂಘಟನೆಯಾದ ಹರ್ಕತ್-ಉಲ್-ಜಿಹಾದ್-ಅಲ್-ಇಸ್ಲಾಮಿ (ಹುಜಿ) ಸಂಘಟನೆ ಬಾಂಗ್ಲಾದೇಶದ್ದಾಗಿದ್ದು, ಅದನ್ನು ನಿಷೇಧಿಸಲಾಗಿದೆ.[ಪತ್ರಕರ್ತರ ಕೊಲೆಗೆ ಸಂಚು ಹಾಕಿದ್ದ ಹುಜಿ ಉಗ್ರ ಸೆರೆ]

ಬಂಧಿತ ನಾಲ್ವರ ಪೈಕಿ ಮಹಮ್ಮದ್ ನಜೀರ್ ಎಂಬುವವನು ಪಾಕಿಸ್ತಾನಕ್ಕೆ ಸೇರಿದವನಾಗಿದ್ದರೆ, ಮತ್ತೊಬ್ಬ ಮಯನ್ಮಾರ್‌ನವನಾಗಿದ್ದಾನೆ. ಉಳಿದ ಇಬ್ಬರು ಬಾಂಗ್ಲಾದೇಶವರಾಗಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. [ಅಸ್ಸಾಂನಲ್ಲಿ ಭಯೋತ್ಪಾದಕ ದಾಳಿ ಸಂಚು ವಿಫಲ]
ನಿಷೇಧಿತ ಹುಜಿ ಸಂಘಟನೆಗೆ ಸೇರಿದ ಇವರು ಹೈದರಾಬಾದ್‌ನಲ್ಲಿ ಅಕ್ರಮವಾಗಿ ವಾಸ ಮಾಡುತ್ತಿದ್ದರೆ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಾಂಗ್ಲಾ ಮತ್ತು ಮಯನ್ಮಾರ್‌ಗೆ ಸೇರಿದವರು ಹೈದರಾಬಾದ್‌ನಲ್ಲಿ ವಾಸಮಾಡುತ್ತಿದ್ದರು ಎಂದು ತಿಳಿದುಬಂದಿದ್ದು, ಅವರ ಬಳಿ ಸೂಕ್ತವಾದ ವಿಳಾಸದ ದಾಖಲೆಗಳು ಪತ್ತೆಯಾಗಿಲ್ಲ.
ಸ್ವಾತಂತ್ರ ದಿನಾಚರಣೆ ಹಿನ್ನಲೆಯಲ್ಲಿ ಹೈದರಾಬಾದ್‌ನಲ್ಲಿ ಕಟ್ಟೆಚ್ಚರ ಘೋಷಣೆ ಮಾಡಲಾಗಿದೆ. ಬಂಧಿತ ಮೊಹಮ್ಮದ್ ನಜೀರ್‌ನಿಂದ ಮಹತ್ವದ ದಾಖಲೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದ್ದು, ತನಿಖೆ ಮುಂದುವರೆದಿದೆ.












Click it and Unblock the Notifications