ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಧ್ರದಲ್ಲಿ ಭಾರಿ ಪಟಾಕಿ ದುರಂತ, 15 ಸಾವು

By Mahesh
|
Google Oneindia Kannada News

ಹೈದರಾಬಾದ್, ಅ.20: ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಸೋಮವಾರ ಭಾರಿ ಪಟಾಕಿ ದುರಂತ ಸಂಭವಿಸಿದೆ. ದೀಪಾವಳಿ ಮುನ್ನ ಸುಮಾರು 15 ಮನೆಯ ದೀಪ ಆರಿ ಹೋಗಿದೆ. ಪಟಾಕಿ ಉತ್ಪಾದನಾ ಘಟಕದಲ್ಲಿ ನಡೆದ ಅಗ್ನಿ ಆಕಸ್ಮಿಕದಲ್ಲಿ 15 ಮಂದಿ ಸಾವನ್ನಪ್ಪಿದ್ದಾರೆ.

ಕಾಕಿನಾಡದ ಉಪ್ಪಡ ಕೊತ್ತಪಲ್ಲಿಯಲ್ಲಿರುವ ಪಟಾಕಿ ತಯಾರಿಕಾ ಕಾರ್ಖಾನೆಯೊಂದರಲ್ಲಿ ಬೆಂಕಿ ಅಪಘಾತ ಸಂಭವಿಸಿದ್ದು, ಈ ದುರಂತದಲ್ಲಿ 15 ಮಂದಿ ಸಜೀವ ದಹನವಾಗಿದ್ದಾರೆ. 11 ಮಂದಿಗೆ ತೀವ್ರತರವಾಗಿ ಸುಟ್ಟಗಾಯಗಳಾಗಿವೆ. ಇವರಲ್ಲಿ 5 ಮಂದಿಗೆ ಶೇ 80 ರಷ್ಟು ದೇಹ ಸುಟ್ಟು ಹೋಗಿದ್ದು ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಹೆಚ್ಚುವರಿ ಡಿಜಿಪಿ(ಕಾನೂನು ಮತ್ತು ಸುವ್ಯವಸ್ಥೆ) ಆರ್ ಪಿ ಠಾಕೂರ್ ಹೇಳಿದ್ದಾರೆ.

ಪಟಾಕಿ ತಯಾರಿಕಾ ಕಾರ್ಖಾನೆಯಲ್ಲಿ ಕಡಿಮೆ ದರದಲ್ಲಿ ಪಟಾಕಿ ಸಿಗುವ ಆಸೆಯಿಂದ ಬಂದಿದ್ದ ಗ್ರಾಹಕರು ಅಗ್ನಿಗೆ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಈ ದುರಂತದಲ್ಲಿ 15 ಜನ ಸ್ಥಳದಲ್ಲೇ ಬೆಂಕಿಗೆ ಆಹುತಿಯಾಗಿ ಸಾವನ್ನಪ್ಪಿದರೆ, 11 ಮಂದಿಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Fire at cracker factory in East Godavari in Andhra Pradesh; 15 dead, 11 injured

ಘಟನಾ ಸ್ಥಳಕ್ಕೆ ಅಗ್ನಿಶಾಮಕಗಳು ದೌಡಾಯಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಪೊಲೀಸರು ಸಹ ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ. ಘಟನೆ ಬಗ್ಗೆ ದುಃಖ ವ್ಯಕ್ತಪಡಿಸಿರುವ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಜಿಲ್ಲಾಧಿಕಾರಿ ನೀತು ಪ್ರಸಾದ್ ಅವರಿಗೆ ತಕ್ಷಣವೇ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ಅವಲೋಕಿಸುವಂತೆ ಸೂಚಿಸಿದ್ದಾರೆ.

ಕಾರ್ಖಾನೆಯಲ್ಲಿ ಅಪಾರ ಮಟ್ಟದಲ್ಲಿ ಪಟಾಕಿ ತಯಾರಿಕಾ ರಾಸಾಯನಿಕಗಳು ಇರುವುದರಿಂದ ಕಾರ್ಖಾನೆ ಹೊತ್ತಿ ಉರಿಯುತ್ತಿದೆ. ಘಟನೆಗೆ ಕಾರಣ ಏನು ಎಂಬುದು ಇನ್ನೂ ತಿಳಿದು ಬಂದಿಲ್ಲ. ಸದ್ಯಕ್ಕೆ ಬೆಂಕಿ ನಂದಿಸುವ ಕಾರ್ಯ ಸಾಗಿದೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗಬಹುದು. ಮೃತರಲ್ಲಿ ಮಹಿಳೆಯರು ಹಾಗೂ ಮಕ್ಕಳು ಅಧಿಕವಾಗಿದ್ದಾರೆ ಎಂದು ಎಸ್ ಐ ಸನ್ಯಾಸಿ ನಾಯ್ಡು ಹೇಳಿದ್ದಾರೆ.

English summary
At least Fifteen persons were charred to death and 11 others suffered serious burn injuries in a mishap at a firecracker manufacturing facility in U Kotthapalli police station limits of East Godavari district in Andhra Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X