ಭಾರತೀಯ ಜನತಾ ಪಾರ್ಟಿ ವಿಶ್ವದಲ್ಲೇ 4ನೇ ಭ್ರಷ್ಟ ಪಕ್ಷವಂತೆ!
ಬೆಂಗಳೂರು, ಆಗಸ್ಟ್ 11: ಇಡೀ ಪ್ರಪಂಚದಲ್ಲಿರುವ ಎಲ್ಲಾ ದೇಶಗಳ ರಾಜಕೀಯ ಪಕ್ಷಗಳಲ್ಲಿ ಭಾರತೀಯ ಜನತಾ ಪಾರ್ಟಿಯು 4ನೇ ಅತಿ ಭ್ರಷ್ಟ ಪಕ್ಷವೆಂದು ಹೈದರಾಬಾದ್ ನ ಪತ್ರಿಕೆಯೊಂದು ವರದಿ ಮಾಡಿದೆ.
ಖ್ಯಾತ ಸುದ್ದಿ ಸಂಸ್ಥೆ ಸಿಎನ್ಎನ್ ನ ಸಮೀಕ್ಷಾ ವರದಿಯೆಂದು ಪ್ರಕಟಿಸಿಲಾಗಿದ್ದ ಈ ಸುದ್ದಿಯನ್ನು ಸಿಎನ್ಎನ್ ಸುದ್ದಿ ಸಂಸ್ಥೆಯೇ ಅಲ್ಲಗಳೆದಿದೆ.

ಅಂದಹಾಗೆ, ಇಂಥದ್ದೊಂದು ಸುದ್ದಿಯನ್ನು ಪ್ರಕಟಿಸಿದ್ದು, 'ದ ಸಿಯಾಸಟ್ ಡೈಲಿ' ಎಂಬ ಪತ್ರಿಕೆ. ಈ ಪತ್ರಿಕೆಯಲ್ಲಿ ಇತ್ತೀಚೆಗೆ ಬಂದಿರುವ ವರದಿಯೊಂದರ ಪ್ರಕಾರ, ಪಾಕಿಸ್ತಾನದ 'ಪಾಕಿಸ್ತಾನ ಮುಸ್ಲಿಂ ಲೀಗ್' ಪಕ್ಷವು ಜಗತ್ತಿನ ಅತಿ ಭ್ರಷ್ಟ ಪಕ್ಷವಾಗಿ ಹೊರಹೊಮ್ಮಿದ್ದು ಭ್ರಷ್ಟ ಪಕ್ಷಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ.
ಇನ್ನು, ಉಗಾಂಡದ 'ನ್ಯಾಷನಲ್ ರೆಸಿಸ್ಟನ್ಸ್ ಮೂವ್ ಮೆಂಟ್' ಪಕ್ಷವು ದ್ವಿತೀಯ ಸ್ಥಾನ, ಕ್ಯೂಬಾದ 'ಪ್ರೊಗ್ರೆಸ್ಸಿವ್ ಆ್ಯಕ್ಷನ್ ಪಾರ್ಟಿ'ಯು ಮೂರನೇ ಸ್ಥಾನದಲ್ಲಿದೆ. ಇದರ ನಂತರದ ಸ್ಥಾನದಲ್ಲಿ 'ಭಾರತೀಯ ಜನತಾ ಪಾರ್ಟಿ' ಇದೆ.
ಅಂದಹಾಗೆ, ಈ ಪತ್ರಿಕೆ ಸುಮ್ಮನೇ ಈ ಸುದ್ದಿಯನ್ನು ಪ್ರಕಟಿಸಿಲ್ಲ. ತನ್ನ ವರದಿಗೆ ಖ್ಯಾತ ಸುದ್ದಿಸಂಸ್ಥೆ ಸಿಎನ್ಎನ್ ನಡೆಸಿರುವ ಸಮೀಕ್ಷೆ ವರದಿಯೇ ಕಾರಣ ಎಂದು ಹೇಳಿದೆ. ಇದಕ್ಕೆ ಪೂರಕವಾಗಿ, ಸಿಎನ್ಎನ್ ಸುದ್ದಿಸಂಸ್ಥೆಯ ಚಿಹ್ನೆ ಇರುವ ಇನ್ಫೋ ಗ್ರಾಫಿಕ್ಸ್ ಅನ್ನೂ ಅದು ವರದಿಯ ಜತೆಯಲ್ಲಿ ಪ್ರಕಟಿಸಿದೆ.
ಇದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಈ ವಿಚಾರ ಕೊನೆಗೆ ಸಿಎನ್ಎನ್ ಗೂ ಗೊತ್ತಾಗಿ, ಅದು ಈ ಸುದ್ದಿ ಸುಳ್ಳೆಂದು ಸ್ಪಷ್ಟನೆ ನೀಡಿದೆ.
ಆದರೆ, ಇನ್ನೊಂದು ಮಜಾ ಏನು ಗೊತ್ತಾ? ಇದೇ ವರ್ಷ, ಇದೇ ಪತ್ರಿಕೆ ಇಂಥದ್ದೇ ಸುದ್ದಿಯೊಂದನ್ನು ವರದಿ ಮಾಡಿತ್ತು. ಇದರಲ್ಲಿ ಭಾರತೀಯ ಕಾಂಗ್ರೆಸ್ ಪಕ್ಷವು ಜಗತ್ತಿನ 4ನೇ ಭ್ರಷ್ಟ ಪಕ್ಷವೆಂದು ಹೇಳಲಾಗಿತ್ತು.












Click it and Unblock the Notifications