ಸರಸವಾಡುತ್ತಿದ್ದ ಪತ್ನಿಯನ್ನು ರೆಡ್ ಹ್ಯಾಂಡಾಗಿ ಹಿಡಿದ ಟೆಕ್ಕಿ

ಹೈದರಾಬಾದ್, ಫೆಬ್ರವರಿ 22 : ಒಬ್ಬ ಮೂವತ್ತೈದು ವರ್ಷದ ಸಬ್ ಇನ್‌ಸ್ಪೆಕ್ಟರ್, ಆತನಿಗೆ ಓರ್ವ ಹೆಂಡತಿ, ಇಬ್ಬರು ಮುದ್ದಾದ ಮಕ್ಕಳು. ಇನ್ನೊಬ್ಬಳು ಇಪ್ಪತ್ತೇಳು ವರ್ಷದ ಸುಂದರ ಗೃಹಿಣಿ, ಗಂಡ ಸಾಫ್ಟ್ ವೇರ್ ಇಂಜಿನಿಯರ್, ಅವರಿಗೆ 6 ವರ್ಷದ ಒಬ್ಬ ಮುದ್ದಾದ ಮಗ.

ಬೇರೆ ಬೇರೆ ಕುಟುಂಬದ ಇವರಿಬ್ಬರ ನಡುವೆ ಅದೇನು ಕನೆಕ್ಷನ್ನು? ಅಲ್ಲೇ ಇರುವುದು ಸ್ವಾರಸ್ಯಕರ ವಿಷಯ! ಇಬ್ಬರಿಗೂ ಫೇಸ್ ಬುಕ್ಕಿನಲ್ಲಿ ಚಾಟ್ ಮಾಡುವ ಹುಚ್ಚು, ಇತರ ಎಲ್ಲರಿಗೂ ಇರುವಂತೆ. ಆದರೆ, ಇಬ್ಬರ ನಡುವಿನ ಆ ಹುಚ್ಚು ಸ್ನೇಹಕ್ಕೆ ತಿರುಗಿ, ಸ್ನೇಹ ಪ್ರೇಮಕ್ಕೆ ತಿರುಗಿ, ಪ್ರೇಮ ಕಾಮಕ್ಕೆ ತಿರುಗಿದಾಗ ಇಬ್ಬರು ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.

Extramarital affair : Techie catches wife with sub inspector

ಇಬ್ಬರು ಆ ಗೃಹಿಣಿಯ ಮನೆಯಲ್ಲಿ ಚಿನ್ನಾಟವಾಡುತ್ತಿದ್ದಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದು ಮಹಿಳೆಯ ಗಂಡನಿಗೆ, ಅರ್ಥಾತ್ ಸಾಫ್ಟ್ ವೇರ್ ಇಂಜಿನಿಯರ್‌ಗೆ. ಈಗ ಹಾಲು ಜೇನಿನಂತಿದ್ದ ಇಬ್ಬರ ಕುಟುಂಬದಲ್ಲಿ ಹುಳಿ ಹಿಂಡಿದಂತಾಗಿದೆ.

ಆಗಿದ್ದೇನೆಂದರೆ, ಸಬ್ ಇನ್‌ಸ್ಪೆಕ್ಟರ್ ಮತ್ತು ಮಹಿಳೆ ಫೇಸ್ ಬುಕ್ಕಿನಲ್ಲಿ ಎಂಟು ತಿಂಗಳ ಹಿಂದೆ ಸ್ನೇಹಿತರಾಗಿದ್ದಾರೆ. ಅದು ದಿನದಿನಕ್ಕೆ ಗಾಢವಾಗುತ್ತ ದೈಹಿಕ ಸಂಪರ್ಕದವರೆಗೆ ಬಂದು ನಿಂತಿದೆ. ಟೆಕ್ಕಿಗೆ ತನ್ನ ಹೆಂಡತಿಯ ನಡವಳಿಕೆಗಳ ಬಗ್ಗೆ ಏಕೋ ಅನುಮಾನ ಮೂಡಲು ಆರಂಭಿಸಿದೆ.

ಆರಕ್ಷಕ ತನ್ನ ಮನೆಗೆ ಬಂದು ಕಾಲ ಕಳೆಯುತ್ತಿದ್ದಾನೆ ಎಂಬ ಅನುಮಾನ ಮೂಡಿದೆ. ಅಲ್ಲದೆ, ಆಕೆ ಆತನೊಂದಿಗೆ ಫೋನಿನಲ್ಲಿ ಗಂಟೆಗಟ್ಟಲೆ ಹರಟುತ್ತಿದ್ದಾಳೆ ಎಂಬುದೂ ಗೊತ್ತಾಗಿದೆ. ಆಗ ಆತ ಏನು ಮಾಡಿದ್ದಾನೆಂದರೆ, ಇನ್ನು ಮೂರು ದಿನ ನಾನು ಊರಿನಲ್ಲಿರುವುದಿಲ್ಲ ಎಂದು ಹೇಳಿ ಸೂಟ್ ಕೇಸ್ ತೆಗೆದುಕೊಂಡು ಹೊರಟಿದ್ದಾನೆ.

ವೈದ್ಯ ಹೇಳಿದ್ದು ಹಾಲು ಅನ್ನ, ರೋಗಿ ಬಯಸಿದ್ದೂ ಹಾಲು ಅನ್ನ. ಮಗ ಶಾಲೆಗೆ ಹೋದ ತಕ್ಷಣ ಪೊಲೀಸಪ್ಪನಿಗೆ ಫೋನ್ ಹೋಗಿದೆ. ಆತ ಇಲ್ಲಿಗೆ ಹಾಜರ್. ಆತ ಬಂದರೆ ನನಗೆ ತಿಳಿಸೆಂದು ವಾಚ್ ಮನ್‌ಗೆ ಟೆಕ್ಕಿ ಮೊದಲೇ ಹೇಳಿಟ್ಟಿದ್ದ. ಇಂಥ ಅವಕಾಶಕ್ಕಾಗಿ ಹೊಂಚು ಹಾಕಿ ಕುಳಿತಿದ್ದ ಟೆಕ್ಕಿ, ಪೊಲೀಸಪ್ಪ ಬರುತ್ತಲೇ ಮನೆಗೆ ವಾಪಸ್ ಆಗಿದ್ದಾರೆ.

ಇನ್ನೇನು? ಪೊಲೀಸಪ್ಪ ಮತ್ತು ಟೆಕ್ಕಿನ ಪತ್ನಿ ಶಯನಗೃಹದಲ್ಲಿ ಸರಸವಾಡುತ್ತಿದ್ದ ಸಮಯದಲ್ಲಿ ಟೆಕ್ಕಿಗೆ ಸಿಕ್ಕಿಬಿದ್ದಿದ್ದಾರೆ. ಈ ಘಟನೆ ನಡೆದಿದ್ದು ಹೈದರಾಬಾದ್ ನಲ್ಲಿ. ಸಬ್ ಇನ್‌ಸ್ಪೆಕ್ಟರ್ ಹೆಸರು ಟಿ ವಿಜಯ್ ಕುಮಾರ್ ಅಂತ. ಯಾಕೆ ಬೇಕಿತ್ತು ಫೇಸ್ ಬುಕ್ ಸಹವಾಸ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+