ಸಮೀಕ್ಷೆಗಳ ಸಮೀಕ್ಷೆ: ತೆಲಂಗಾಣದಲ್ಲಿ ಚಂದ್ರಶೇಖರ್ ರಾವ್ ಹವಾ ತಡೆಯುವವರಿಲ್ಲ
ಹೈದರಾಬಾದ್, ಡಿಸೆಂಬರ್ 7: ವಿಧಾನಸಭೆ ಅವಧಿ ಪೂರ್ಣಗೊಳ್ಳಲು ಇನ್ನೂ ಹಲವು ತಿಂಗಳು ಬಾಕಿ ಇರುವ ಮುನ್ನವೇ ಚುನಾವಣೆಗೆ ಮುಂದಾದ ತೆಲಂಗಾಣ ಆಡಳಿತಾರೂಢ ಟಿಆರ್ ಎಸ್, ಈ ಭಾರಿ ಭರ್ಜರಿ ಫಲಿತಾಂಶ ಪಡೆದುಕೊಳ್ಳಲಿದೆ ಎಂದು ವಿವಿಧ ಸಮೀಕ್ಷೆಗಳು ಹೇಳಿವೆ.
ಸಮೀಕ್ಷೆಗಳನ್ನು ಆಧರಿಸಿದ ಸಮೀಕ್ಷಾ ವರದಿ ಕೂಡ ತೆಲಂಗಾಣದಲ್ಲಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ಅವರ ನೇತೃತ್ವದ ತೆಲಂಗಾಣ ರಾಷ್ಟ್ರೀಯ ಸಮಿತಿ ಸರಳ ಬಹುಮತಕ್ಕಿಂತಲೂ ದೊಡ್ಡ ಸಾಧನೆ ಮಾಡಲಿದೆ ಎಂದು ಭವಿಷ್ಯ ನುಡಿದಿದೆ.
ಇದರಿಂದ ರಾಜ್ಯದಲ್ಲಿ ಯಾವುದೇ ಪಕ್ಷಗಳ ಬೆಂಬಲವಿಲ್ಲದೆ, ಟಿಆರ್ ಎಸ್ ಸತತ ಎರಡನೆಯ ಸಲ ಅಧಿಕಾರದ ಗದ್ದುಗೆ ಏರಲಿದೆ.

ಸಮೀಕ್ಷೆಗಳಿಂದ ಬಹಿರಂಗವಾದ ಅಂದಾಜು ಸೀಟುಗಳ ಆಧಾರದಲ್ಲಿ ನಡೆದ ಸಮೀಕ್ಷೆ ಅನ್ವಯ ಟಿಆರ್ ಎಸ್ 66 ಕ್ಷೇತ್ರಗಳಲ್ಲಿ ಜಯಗಳಿಸಲಿದೆ. ಕಳೆದ ಚುನಾವಣೆಯಲ್ಲಿ ಟಿಆರ್ ಎಸ್ 63 ಸೀಟುಗಳನ್ನು ಗೆದ್ದು ಸರಳ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತ್ತು.
ಕಾಂಗ್ರೆಸ್ ಮತ್ತು ಟಿಡಿಪಿ ಮೈತ್ರಿಕೂಟ 39 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಲಿವೆ. ಬಿಜೆಪಿ 5 ಸ್ಥಾನಗಳನ್ನು ಗೆಲ್ಲಲು ಯಶಸ್ವಿಯಾಗಲಿದೆ. ಮತ್ತು ಇತರೆ ಪಕ್ಷಗಳು 9 ಸೀಟುಗಳಲ್ಲಿ ಜಯಗಳಿಸಲಿದೆ.












Click it and Unblock the Notifications