ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಗನ್ ರೆಡ್ಡಿಗೆ ಮತ್ತೆ ಹೊಡೆತ ಇನ್ನಷ್ಟು ಆಸ್ತಿ ಜಪ್ತಿ

By Mahesh
|
Google Oneindia Kannada News

ಹೈದರಾಬಾದ್, ಡಿ.16: ಅಕ್ರಮ ಆಸ್ತಿ ಪ್ರಕರಣ ಆರೋಪ ಹೊತ್ತಿರುವ ವೈಎಸ್ಸಾರ್ ಕಾಂಗ್ರೆಸ್ ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ ಅವರಿಗೆ ಜಾರಿ ನಿರ್ದೇಶನಾಲಯ ತಂಡ ಮತ್ತೊಮ್ಮೆ ಶಾಕ್ ನೀಡಿದೆ.

ಜಗನ್ ಮೋಹನ್ ರೆಡ್ಡಿ ಅವರಿಗೆ ಸೇರಿರುವ ಸಾಕ್ಷಿ, ಜನನಿ ಇನ್ಫಾಸ್ಟ್ರಕ್ಚರ್ ಸಂಸ್ಥೆ ಹಾಗೂ ಜಗತಿ ಪಬ್ಲಿಕೇಷನ್ಸ್ ಗೆ ಸೇರಿರುವ 47 ಕೋಟಿ ರು ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ. ಖಮ್ಮಂ, ವಾರಂಗಲ್, ಕೃಷ್ಣಾ, ಕರೀಂನಗರ, ಮೆಹಬೂಬ್ ನಗರ ಹಾಗೂ ಚಿತ್ತೂರು ಜಿಲ್ಲೆಗಳಲ್ಲಿರುವ ಜಗನ್ ಅವರ ಒಡೆತನದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದುಕೊಂಡಿದೆ.

ಇನ್ಮುಂದೆ ಜಗನ್ ಅವರು ಈ ಆಸ್ತಿ ಮಾರಾಟ ಹಾಗೂ ಬೋಗ್ಯಕ್ಕೆ ಬಿಡುವಂತಿಲ್ಲ. ಅದರೆ, ಅಲ್ಲಿನ ಸಂಸ್ಥೆಗಳಲ್ಲಿರುವ ಉದ್ಯೋಗಿಗಳು ಎಂದಿನಂತೆ ಕಾರ್ಯನಿರ್ವಹಿಸಬಹುದಾಗಿದೆ. [ಜಗನ್ ರೆಡ್ಡಿ ವಿರುದ್ಧ 11ನೇ ಚಾರ್ಜ್ ಶೀಟ್ ಸಲ್ಲಿಕೆ]

ED attaches Jagan Mohan Reddy's properties worth Rs 47 crore

ರಾಜಶೇಖರ್ ರೆಡ್ಡಿ ಆರಂಭಿಸಿದ 'ಇಂದು ಕೈಗಾರಿಕಾ ಕಾರಿಡಾರ್' ಯೋಜನೆ ಒಂದು ಬಿಟ್ಟು ಉಳಿದಂತೆ ಜಗನ್ ಕಂಪನಿಗಳಿಗೆ ಸಂಬಂಧಿಸಿದ ಯೋಜನೆಗಳ ಬಗ್ಗೆ ಯಾವುದೇ ತನಿಖೆ ನಡೆಸುವ ಸಾಧ್ಯತೆ ಕಮ್ಮಿಯಾಗಿದೆ. ಈಗ ಜಾರಿ ನಿರ್ದೇಶನಾಲಯ ಹಾಗೂ ಆದಾಯ ತೆರಿಗೆ ಇಲಾಖೆ ಮಾತ್ರ ತನಿಖೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ ಆದರೆ, ಸಿಬಿಐ ಮತ್ತೊಮ್ಮೆ ಚಾರ್ಜ್ ಶೀಟ್(ನಂ.11) ಹಾಕುವ ಮೂಲಕ ಬಿಸಿ ಮುಟ್ಟಿಸಿದೆ.

ಈಗ 10 ಕಂಪನಿಗಳ ಪೈಕಿ 8 ಕಂಪನಿಗಳು ಜಾರಿ ನಿರ್ದೇಶನಾಲಯ ಹಾಗೂ ಆದಾಯ ತೆರಿಗೆ ಇಲಾಖೆ ತನಿಖೆ ಭೀತಿ ಎದುರಿಸುತ್ತಿವೆ. ಸಂಡೂರು ಪವರ್ ಕಂಪನಿ, ಕಾರ್ಮೆಲ್ ಏಷ್ಯಾ ಹೋಲ್ಡಿಂಗ್ಸ್, ಪಿವಿಪಿ ಬಿಸಿನೆಸ್ ವೆಂಚರ್ಸ್, ಜುಬುಲಿ ಮೀಡಿಯಾ ಕಮ್ಯೂನಿಕೇಷನ್ಸ್, ಕ್ಲಾಸಿಕ್ ರಿಯಾಲ್ಟಿ, ಬ್ರಹ್ಮಣಿ ಇನ್ಫ್ರಾಟೆಕ್, ಆರ್ ಆರ್ ಗ್ಲೋಬಲ್ ಎಂಟರ್ ಪ್ರೈಸಸ್ ಹಾಗೂ ಸರಸ್ವತಿ ಪವರ್ ಮತ್ತು ಇಂಡಸ್ಟ್ರೀಸ್ ಸಂಸ್ಥೆ ವಿರುದ್ಧ ಯಾವುದೇ ಸಾಕ್ಷಿ ಆಧಾರ ಸಿಗದ ಕಾರಣ ಸಿಬಿಐ ತನ್ನ ತನಿಖೆ ಮುಕ್ತಾಯಗೊಳಿಸಿದೆ.

English summary
In a major set back to the YSR Congress Chief Jagan Mohan Reddy, the Enforcement Directorate on Monday attached properties belonging to Sakshi, Janani Infrastructure and Jagati publications, worth Rs 47 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X