ಡ್ರಗ್ ಕೇಸ್ : ನಟಿ ಕಾಜಲ್ ಅವರ ಮ್ಯಾನೇಜರ್ ಬಂಧನ

Posted By:
Subscribe to Oneindia Kannada

ಹೈದರಾಬಾದ್, ಜುಲೈ 24: ಹೈದರಾಬಾದಿನ ಡ್ರಗ್ಸ್ ಹಗರಣಕ್ಕೆ ಸಂಬಂಧಿಸಿದಂತೆ ಅಬಕಾರಿ ಇಲಾಖೆಯ ವಿಶೇಷ ತನಿಖಾ ತಂಡ ತನ್ನ ತನಿಖೆಯನ್ನು ಚುರುಕುಗೊಳಿಸಿದೆ. 12ಕ್ಕೂ ಅಧಿಕ ಸೆಲೆಬ್ರಿಟಿಗಳಿಗೆ ನೋಟಿಸ್ ಜಾರಿ ಮಾಡಿ, ವಿಚಾರಣೆ ಆರಂಭಿಸಿರುವ ಬೆನ್ನಲ್ಲೇ ಮೊದಲ ಬಂಧನವಾಗಿರುವ ಸುದ್ದಿ ಬಂದಿದೆ.

ನಟಿ ಕಾಜಲ್ ಅಗರವಾಲ್ ಅವರ ಮ್ಯಾನೇಜರ್ ರೊನ್ಸನ್ ಜೋಸೆಫ್ ಎಂಬುವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ರೊನ್ಸನ್ ಜೋಸೆಫ್ ಮನೆಯಲ್ಲಿ ಗಾಂಜಾ ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ ಎನ್ನಲಾಗಿದೆ. ನಟಿ ಲಾವಣ್ಯ ತ್ರಿಪಾಠಿ, ರಾಶಿ ಖನ್ನಾ ಸೇರಿದಂತೆ ಹಲವಾರು ಸೆಲೆಬ್ರಿಟಿಗಳ ಮ್ಯಾನೇಜರ್ ಆಗಿದ್ದ ರೋನ್ಸನ್, ಟಾಲಿವುಡ್ ನಲ್ಲಿ ಚಿರಪರಿಚಿತ.

Drug Scandal : Actress Kajal Agarwal's Manager Arrested

ಸದ್ಯ ನೋಟಿಸ್ ನೀಡಿದ ಸೆಲೆಬ್ರಿಟಿಗಳ ಪೈಕಿ ಇಬ್ಬರು ಮಹಿಳೆಯರಿದ್ದು, ಜುಲೈ 19 ರಿಂದ 27ರ ತನಕ ವಿಚಾರಣೆ ಜಾರಿಯಲ್ಲಿರಲಿದೆ. ವಿಚಾರಣೆಗೆ ಹಾಜರಾದಾಗ ಮಾತ್ರ ಯಾರಿಗೆ ನೋಟಿಸ್ ನೀಡಲಾಗಿದೆ ಎಂಬ ಸತ್ಯ ತಿಳಿಯಲಿದೆ ಮತ್ತು ವಿಚಾರಣೆಯನ್ನು ಸಂಪೂರ್ಣವಾಗಿ ವಿಡಿಯೋ ರೆಕಾರ್ಡ್ ಮಾಡಿಕೊಳ್ಳಲಾಗುತ್ತಿದೆ.

ಈ ಡ್ರಗ್ಸ್ ದಂಧೆಯ ಪ್ರಮುಖ ಆರೋಪಿ ಕಲ್ವಿನ್ ಮ್ಯಾಸ್ಕರೆನ್ಹಸ್ ನೀಡಿರುವ ಮಾಹಿತಿಯಂತೆ ಚಿತ್ರರಂಗದ ಅನೇಕ ಮಂದಿ ಈತನ ಗ್ರಾಹಕರಾಗಿದ್ದಾರೆ. ಈತನ ಬಳಿ ಹಲವಾರು ಸಿಮ್ ಕಾರ್ಡ್ ಗಳಿದ್ದು, 1,500ಕ್ಕೂ ಅಧಿಕ ನಂಬರ್ ಗಳಿವೆ. ಇವುಗಳಲ್ಲಿ ಹಲವಾರು ಸೆಲೆಬ್ರಿಟಿಗಳ ಸಂಪರ್ಕ ಸಂಖ್ಯೆಗಳಿವೆ.

IPL 2017: Eliminator : Kolkata vs Hyderabad Match To Prediction And Preview

ತೆಲುಗು ನಟ ಪಲ್ಲಪೊಲ್ಲು ನವದೀಪ್, ತರುಣ್ ಕುಮಾರ್, ಪಿ ಸುಬ್ಬರಾಜು, ನಟಿ ಚಾರ್ಮಿ ಕೌರ್ ಹಾಗೂ ಮುಮೈತ್ ಖಾನ್ ಸೇರಿದಂತೆ ಹಲವರಿಗೆ ನೋಟಿಸ್ ಜಾರಿಯಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The SIT investigating the drug racket in Hyderabad made its first arrest from the entertainment industry on Monday. Ronson Joseph, manager for many popular Tollywood and Bollywood celebrities, including actress Kajal Agarwal
Please Wait while comments are loading...