ಹೈದರಾಬಾದಿನಲ್ಲಿ 81.44 ಲಕ್ಷ ಮೌಲ್ಯದ 814 ಕೆಜಿ ಗಾಂಜಾ ವಶ

Posted By:
Subscribe to Oneindia Kannada

ಹೈದರಾಬಾದ್, ಡಿಸೆಂಬರ್ 25: ಹೊಸವರ್ಷಕ್ಕಾಗಿ ಸಾಗಿಸುತ್ತಿದ್ದರು ಎನ್ನಲಾದ ರು 81.44 ಲಕ್ಷ ಮೌಲ್ಯದ 814ಕೆಜಿ ಗಾಂಜಾವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಹೈದರಾಬಾದಿನ ಶಂಶಾಬಾದಿನಲ್ಲಿ ವಶಪಡಿಕೊಂಡಿದ್ದಾರೆ.

ಹೊಸ ವರ್ಷಾಚರಣೆ ಸಂದರ್ಭದಲ್ಲಿ ನಗರಕ್ಕೆ ಗಾಂಜಾ ಬರುತ್ತದೆ ಎಂಬ ಖಚಿತ ಮಾಹಿತಿ ಆಧಾರದ ಮೇಲೆ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಶಂಶಾಬಾದಿನ ಫಾರಂ ಹೌಸ್ ಬಳಿ ಛತ್ತೀಸ್ ಗಢದ ಲಾರಿಯೊಂದನ್ನು ವಶಪಡಿಸಿಕೊಂಡರು. ಆದರೆ ಫಾರಂ ಹೌಸಿನಲ್ಲಿ ಮೊದಲೇ ಟವೇರಾ ಕಾರೊಂದು ಇತ್ತು ಅದರಲ್ಲಿ ಗಾಂಜಾವನ್ನು ಇರಿಸಲಾಗಿತ್ತು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.[ಮಾದಕ ವಸ್ತು ಜಾಲ ಪತ್ತೆ: 57 ಕೆಜಿ ಗಾಂಜಾ ವಶ]

ಇನ್ನು ಈ ಬಗ್ಗೆ ಮಾತನಾಡಿರುವ ಗುಪಚರ ಅಧಿಕಾರಿಗಳಿಗೆ ಲಾರಿಯಲ್ಲಿ 270 ಪ್ಯಾಕೇಟ್, 20 ಪ್ಯಾಕೇಟ್ ಟವೇರಾ ಗಾಡಿಯಲ್ಲಿ ಹಾಗೂ 60ಕ್ಕೂ ಹೆಚ್ಚು ಪ್ಯಾಕೇಟ್ ಗಳು ಫಾರಂ ಹೌಸಿನ ರೂಮಿನಲ್ಲಿ ಸಿಕ್ಕಿದ್ದು ಇವೆಲ್ಲಾ ಉತ್ತಮ ಗುಣಮಟ್ಟದ ಗಾಂಜಾ ಎಂದು ತಿಳಿಸಿದರು. ಇವೆಲ್ಲಾ ಪ್ಯಾಕೇಟ್ ಗಳು ಸೇರಿ ಒಟ್ಟು 814 ಕೆಜಿ ಇದರ ಮಾರುಕಟ್ಟೆ ಮೌಲ್ಯ ಒಟ್ಟು ರು 81.44 ಲಕ್ಷ ವಾಗಿದ್ದು, ಮಾಹಿತಿಯ ಪ್ರಕಾರ ಈ ಎಲ್ಲ ಮಾಲು ಆಂಧ್ರ- ಒಡಿಸ್ಸಾ ಮೂಲದಿಂದ ನಗರಕ್ಕೆ ಬಂದಿರಬಹುದು ಎಂದು ಅಧಿಕಾರಿಗಳು ತಿಳಿಸಿದರು.

DRI officials seize 814 kgs of ganja in Hyderabad

ವಿಷಯ ತಿಳಿದ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಸ್ಥಳಕ್ಕೆ ಅಬಕಾರಿ ಮತ್ತು ನಿಷೇಧ ಇಲಾಖೆ ಆಗಮಿಸಿದ್ದು ಗಾಂಜಾ ಮಾರಾಟ ಜಾಲದ ಮೇಲೆ ಕಣ್ಣಿಟ್ಟಿರುವುದಾಗಿ ತಿಳಿಸಿದೆ.[ಹುಬ್ಬಳ್ಳಿಯಲ್ಲಿ ಗಾಂಜಾ ಸ್ಪಾಟ್, ಆರಕ್ಷಕರ ಭಯವೇ ಇಲ್ಲ]

ನಗರಕ್ಕೆ ಹೆಚ್ಚು ಗಾಂಜಾ ಸರಬರಾಜಾಗುತ್ತಿರುವುದು ಧೂಲ್ ಪೇಟೆಯಿಂದ ಹೀಗಾಗಿ ಗಾಂಜಾ ಆಮದಾಗುತ್ತಿರುವುದರ ಮೇಲೆ ಕಣ್ಣಿರಿಸಲಾಗಿದೆ. ಇಲ್ಲಿನ ವಿಶಾಖ ಎಜೆನ್ಸಿ ಪ್ರದೇಶದಲ್ಲಿ ಹಲವು ಮನೆಗಳಲ್ಲಿ ಗಾಂಜಾವನ್ನು ಸಂಗ್ರಹಿಸಲಾಗಿದೆ ಎಂಬ ಮಾಹಿತಿಯಿದೆ ಎಂದು ಸಹಾಯಕ ಅಬಕಾರಿ ಅಧೀಕ್ಷಕ ಎನ್.ಅಂಜಿ ರೆಡ್ಡಿ ತಿಳಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Directorate of Revenue Intelligence (DRI) on Sunday seized 814 kgs of marijuana in Hyderabad, which was reportedly being transported for New Year celebrations in the city.
Please Wait while comments are loading...