• search
  • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಭಾರತದಲ್ಲಿ ರಷ್ಯಾದ ಸ್ಪುಟ್ನಿಕ್ ಲಸಿಕೆ ಪ್ರಯೋಗ ಪ್ರಾರಂಭ: ಡಾ. ರೆಡ್ಡೀಸ್ ಘೋಷಣೆ

|

ಹೈದರಾಬಾದ್, ಡಿಸೆಂಬರ್ 2: ಭಾರತದಲ್ಲಿ ರಷ್ಯಾದ ಸ್ಪುಟ್ನಿಕ್ V ಲಸಿಕೆಯ ಪ್ರಯೋಗ ಶುರುವಾಗಿದೆ. ಹೈದರಾಬಾದ್‌ನ ಡಾ. ರೆಡ್ಡೀಸ್ ಲ್ಯಾಬೋರೇಟರೀಸ್ ಮತ್ತು ರಷ್ಯಾದ ನೇರ ಹೂಡಿಕೆ ನಿಧಿ (ಆರ್‌ಡಿಐಎಫ್) ಕೋವಿಡ್ 19 ಲಸಿಕೆ ಸ್ಪುಟ್ನಿಕ್‌ನ 2 ಮತ್ತು 3ನೇ ಹಂತದ ಪ್ರಯೋಗವನ್ನು ಆರಂಭಿಸುತ್ತಿರುವುದಾಗಿ ಮಂಗಳವಾರ ಪ್ರಕಟಿಸಿವೆ. ಲಸಿಕೆಯ ಪ್ರಯೋಗಕ್ಕೆ ಹಿಮಾಚಲ ಪ್ರದೇಶದಲ್ಲಿರುವ ಕೇಂದ್ರ ಔ‍ಷಧಗಳ ಪ್ರಯೋಗಾಲಯ ಅಗತ್ಯ ಅನುಮೋದನೆ ನೀಡಿದೆ.

ಇದು ಬಹುಕೇಂದ್ರಿತ ಮತ್ತು ಯಾದೃಚ್ಛಿಕ ನಿಯಂತ್ರಿತ ಅಧ್ಯಯನವಾಗಿರಲಿದೆ. ಇದು ಸುರಕ್ಷತೆ ಮತ್ತು ಪ್ರತಿರೋಧಕ ಶಕ್ತಿಯ ಅಧ್ಯಯನಗಳನ್ನು ಒಳಗೊಂಡಿರಲಿದೆ. ಜೆಎಸ್ಎಸ್ ವೈದ್ಯಕೀಯ ಸಂಶೋಧನೆಯು ಇದರ ಕ್ಲಿನಿಕಲ್ ಸಂಶೋಧನಾ ಸಹಭಾಗಿಯಾಗಿ ಪ್ರಯೋಗಗಳನ್ನು ನಡೆಸಲಿದೆ ಎಂದು ರೆಡ್ಡೀಸ್ ಲ್ಯಾಬೋರೇಟರೀಸ್‌ನ ಪತ್ರಿಕಾ ಹೇಳಿಕೆ ತಿಳಿಸಿದೆ.

2020ರೊಳಗೆ ಯುರೋಪಿನಲ್ಲಿ ಕೊರೊನಾವೈರಸ್ ಲಸಿಕೆ ಬಿಡುಗಡೆ?

ಇದರ ಜತೆಗೆ ಡಾ. ರೆಡ್ಡೀಸ್, ಜೈವಿಕ ತಂತ್ರಜ್ಞಾನ ಇಲಾಖೆಯ ಜೈವಿಕ ತಂತ್ರಜ್ಞಾನ ಕೈಗಾರಿಕಾ ಸಂಶೋಧನಾ ಸಹಾಯಕ ಮಂಡಳಿಯೊಂದಿಗೆ (ಬಿಐಆರ್‌ಎಸಿ) ಸಹಭಾಗಿತ್ವ ಹೊಂದಿದ್ದು, ಸೂಕ್ತ ಸಲಹೆಗಳ ಬೆಂಬಲ ಪಡೆಯಲಿದೆ. ಹಾಗೆಯೇ ಬಿಐಆರ್‌ಎಸಿಯ ಕ್ಲಿನಿಕಲ್ ಪರೀಕ್ಷಾ ಕೇಂದ್ರಗಳನ್ನು ಲಸಿಕೆ ಪ್ರಯೋಗಕ್ಕೆ ಬಳಸಿಕೊಳ್ಳಲಿದೆ.

ಸೆಪ್ಟೆಂಬರ್ ತಿಂಗಳಲ್ಲಿ ರಷ್ಯಾದ ನೇರ ಬಂಡವಾಳ ಹೂಡಿಕೆ ನಿಧಿ ಮತ್ತು ಡಾ. ರೆಡ್ಡೀಸ್ ಲ್ಯಾಬೋರೇಟರೀಸ್ ಭಾರತದಲ್ಲಿ ಸ್ಪುಟ್ನಿಕ್ ಲಸಿಕೆಯ ತಯಾರಿಕೆ, ಪ್ರಯೋಗ ಮತ್ತು ಹಂಚಿಕೆಗೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಂಡಿದ್ದವು. ಅಲ್ಲದೆ, ಭಾರತದಲ್ಲಿ ಮೊದಲ 100 ಮಿಲಿಯನ್ ಲಸಿಕೆಗಳ ಹಂಚಿಕೆಯ ಹಕ್ಕನ್ನು ರೆಡ್ಡೀಸ್ ಪಡೆದುಕೊಂಡಿತ್ತು.

ಸೆರಮ್ ಲಸಿಕೆ ಪ್ರಯೋಗ ನಿಲ್ಲಿಸಲು ಕಾರಣವೇ ಇಲ್ಲ: ಕೇಂದ್ರ ಸರ್ಕಾರ

ಇತ್ತೀಚೆಗೆ ಆರ್‌ಡಿಐಎಫ್ ತನ್ನ ಕ್ಲಿನಿಕಲ್ ಪ್ರಯೋಗದ ದತ್ತಾಂಶಗಳ ಎರಡನೆಯ ಮಧ್ಯಂತರ ವಿಶ್ಲೇಷಣೆಯನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ಲಸಿಕೆಯು ಮೊದಲ ಡೋಸ್ ನೀಡಿದ 28 ದಿನಗಳ ಬಳಿಕ ಶೇ 91.4ರಷ್ಟು ಪರಿಣಾಮಕಾರಿ ಮತ್ತು 42 ದಿನಗಳ ಬಳಿಕ ಶೇ 95ರಷ್ಟು ಪರಿಣಾಮಕಾರಿ ಎಂದು ತಿಳಿಸಿತ್ತು.

English summary
Dr Reddy's laboratories and Russian Direct Investment Fund announced start of clinical trials for Sputnik V vaccine in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X