ಹೈದರಾಬಾದ್: ಕ್ರೇನ್ ಮುರಿದು ಕೆಳಕ್ಕೆ ಬಿದ್ದ ವಿಮಾನ

Subscribe to Oneindia Kannada

ಹೈದರಾಬಾದ್, ಏಪ್ರಿಲ್, 10: ಹೈದರಾಬಾದ್ ನಲ್ಲಿ ಭಾನುವಾರ ವಿಮಾನ ಹೊತ್ತೊಯ್ಯುತ್ತಿದ್ದ ಕ್ರೇನ್ ಮುರಿದು ಅವಘಡ ಸಂಭವಿಸಿದೆ. ಚಾಲನೆಯಲ್ಲಿಲ್ಲದ ವಿಮಾನವನ್ನು ಮೇಲೆಕ್ಕೆ ಏತ್ತಿ ಕೊಂಡೊಯ್ಯುತ್ತಿದ್ದ ಕ್ರೇನ್ ಮುರಿದು ಹತ್ತಿರದ ಕಂಪೌಂಡ್ ಮೇಲೆ ಬಿದ್ದಿದೆ.

ಹೈದರಾಬಾದ್ ವಿಮಾನ ನಿಲ್ದಾಣದ ಸಮೀಪ ಭಾನುವಾರ ಬೆಳಗ್ಗೆ ವಿಮಾನವನ್ನು ಮೇಲೆ ಏತ್ತುತ್ತಿದ್ದ ಕ್ರೇನ್ ಮುರಿದೆದೆ. ವಿಮಾನ ಬೀಳುವ ಸ್ಥಳದಲ್ಲಿ ಯಾರೂ ಇಲ್ಲದ ಕಾರಣ ಅಪಾಯ ಸಂಭವಿಸಿಲ್ಲ.[ಕೇರಳ ಪಟಾಕಿ ಅವಘಡದ ಕರಾಳ ಚಿತ್ರಗಳು]

hyderabad

ಹೈದರಾಬಾದ್ ವಿಮಾನ ನಿಲ್ದಾಣದಿಂದ 2 ಕಿಮೀ ದೂರದಲ್ಲಿರುವ ತರಬೇತಿ ನೀಡುವ ಸ್ಥಳಕ್ಕೆ ಕ್ರೇನ್ ಬಳಸಿ ವಿಮಾನವನ್ನು ಸಾಗಿಸಲಾಗುತ್ತಿತ್ತು. ಟ್ರಕ್‍ನಲ್ಲಿ ರಸ್ತೆ ಮೇಲೆ ಸಾಗಿಸಲು ಸಿಬ್ಬಂದಿ ಮುಂದಾಗಿದ್ದ ವೇಳೆ ಅವಘಡ ಸಂಭವಿಸಿದೆ.[ಕೇರಳದಲ್ಲಿ ಪಟಾಕಿ ಸಿಡಿದು ಭಾರೀ ಅಗ್ನಿ ದುರಂತ, 109 ಸಾವು]

ಏರ್ ಇಂಡಿಯಾ ತನ್ನ ಪೈಲೆಟ್, ಇಂಜಿನಿಯರ್ ಮತ್ತು ಭದ್ರತಾ ಸಿಬ್ಬಂದಿಗೆ ತರಬೇತಿ ನೀಡಲು ಈ ವಿಮಾನವನ್ನು ಬಳಸಲು ಮುಂದಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A crane carrying an old defunct Air India aircraft crashed on the boundary wall of a private property near Begumpet Airport in Hyderabad early Sunday morning. Both crane and the aircraft were damaged in the incident, which took place around 6.30 am when Air India officials were transporting the defunct Airbus A320 aircraft from the Begumpet Airport hangar to their nearby training academy. No casualty has been reported so far.
Please Wait while comments are loading...