ಬಾಬರ್-ಔರಂಗಜೇಬ್ ಮತ್ತು ನಿಜಾಮ ಈ ದೇಶದಲ್ಲಿ ಉಳಿಯುವುದಿಲ್ಲ: ಅಸ್ಸಾಂ ಸಿಎಂ
ಹೈದರಾಬಾದ್ ಜನವರಿ 9: 'ಹೈದರಾಬಾದ್‌ನಿಂದ ನಿಜಾಮ್ ಮತ್ತು ಓವೈಸಿ ಹೆಸರು ಅಳಿಸಿ ಹೋಗುವ ದಿನ ದೂರವಿಲ್ಲ' ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
ಭಾನುವಾರ ತೆಲಂಗಾಣದ ವಾರಂಗಲ್‌ನ ಕಾರ್ಯಕ್ರಮಮೊಂದರಲ್ಲಿ ಮಾತನಾಡಿದ ಅವರು, 'ದೇಶದಲ್ಲಿ ಯಾವ ರೀತಿ ಆರ್ಟಿಕಲ್ 370 ತೆಗೆದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆರಂಭವಾಗಿದೆಯೋ ಅದೇ ರೀತಿ ತೆಲಂಗಾಣದಲ್ಲೂ ನಿಜಾಮ, ಓವೈಸಿ ಹೆಸರು ಅಳಿಸಿ ಹೋಗುವ ದಿನ ದೂರವಿಲ್ಲ' ಎಂದರು.
#WATCH | The way Article 370 was scrapped, Ram Mandir's construction began...here also Nizam's name, Owaisi's name will be written off...that day is not very far: Assam CM Himanta Biswa Sarma in Warangal, Telangana pic.twitter.com/RfaI5sMicZ
— ANI (@ANI) January 9, 2022
ಸಭೆ ಮುಗಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಹಿಮಂತ ಬಿಸ್ವಾ ಶರ್ಮಾ ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿದರು. "ಬಾಬರ್, ಔರಂಗಜೇಬ್ ಮತ್ತು ನಿಜಾಮ್ ಹೆಚ್ಚು ಕಾಲ ಉಳಿಯಲು ಸಾಧ್ಯವಿಲ್ಲ ಎಂದು ಭಾರತದ ಇತಿಹಾಸ ಹೇಳುತ್ತದೆ. ನಿಜಾಮರ ಪರಂಪರೆ ಸಂಪೂರ್ಣವಾಗಿ ನಾಶವಾಗುತ್ತದೆ ಮತ್ತು ಭಾರತೀಯ ನಾಗರಿಕತೆಯ ಆಧಾರದ ಮೇಲೆ ಹೊಸ ಸಂಸ್ಕೃತಿ ಹೊರಹೊಮ್ಮುತ್ತದೆ ಎಂದು ನನಗೆ ಖಾತ್ರಿಯಿದೆ" ಎಂದು ಹೇಳಿದ್ದಾರೆ. ಹೈದರಾಬಾದ್ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಈ ಹೇಳಿಕೆಯನ್ನು ನೀಡಿದ್ದಾರೆ.

ಹಿಮಂತ ಬಿಸ್ವಾ ಶರ್ಮಾ ಅವರು ಭಾನುವಾರ ಹೈದರಾಬಾದ್ ವಿಮಾನ ನಿಲ್ದಾಣವನ್ನು ತಲುಪಿದಾಗ ಅವರನ್ನು ಬಿಜೆಪಿ ತೆಲಂಗಾಣ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ ಸ್ವಾಗತಿಸಿದರು. ಈ ಬಗ್ಗೆ ಹಿಮಂತ ಶರ್ಮಾ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.
ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್‌ಕುಮಾರ್, ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಹಿಮಂತ ಬಿಸ್ವ ಶರ್ಮಾ ಅವರನ್ನು ಕಂಡ ಕಾರ್ಯಕರ್ತರು ಭಾರತ್ ಮಾತಾ ಕಿ ಜೈ ಎಂಬ ಘೋಷಣೆಗಳನ್ನು ಕೂಗಿದರು.












Click it and Unblock the Notifications