• search
  • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ಲಸಿಕೆ ತಯಾರಕ ಭಾರತ್ ಬಯೋಟೆಕ್ ಘಟಕಕ್ಕೆ ಭದ್ರತೆ

|
Google Oneindia Kannada News

ಹೈದರಾಬಾದ್, ಜೂನ್ 09: ದೇಶದ ಪ್ರಮುಖ ಕೊರೊನಾ ಲಸಿಕೆ ತಯಾರಕ ಸಂಸ್ಥೆಗಳಲ್ಲಿ ಒಂದಾದ ಭಾರತ್ ಬಯೋಟೆಕ್‌ನ ಹೈದರಾಬಾದ್ ಘಟಕಕ್ಕೆ ಕೇಂದ್ರ ಸರ್ಕಾರ ಸಶಸ್ತ್ರ ಸಿಐಎಸ್‌ಎಫ್‌ ಕಮಾಂಡೊಗಳ ಭದ್ರತೆ ನೀಡಿರುವುದಾಗಿ ಅಧೀಕೃತ ಮೂಲಗಳು ತಿಳಿಸಿವೆ.

ತೆಲಂಗಾಣ ರಾಜಧಾನಿ ಶಮೀರ್‌ಪೇಟ್‌ನಲ್ಲಿನ ಕಂಪನಿಯ ನೋಂದಾಯಿತ ಕಚೇರಿ ಹಾಗೂ ಸ್ಥಾವರವನ್ನು ಅರೆಸೈನಿಕ ಪಡೆಯ 64 ಸಶಸ್ತ್ರ ಸಿಬ್ಬಂದಿ ನಿಯೋಜಿಸಿದ್ದು, ಭದ್ರತೆ ನೀಡಿರುವುದಾಗಿ ತಿಳಿದುಬಂದಿದೆ. ಭಾರತ್ ಬಯೋಟೆಕ್ ಘಟಕಕ್ಕೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ನಿಯೋಜನೆ ಸಂಬಂಧ ಪ್ರಸ್ತಾವಕ್ಕೆ ಈಚೆಗೆ ಕೇಂದ್ರ ಸಚಿವಾಲಯ ಒಪ್ಪಿಗೆ ನೀಡಿತ್ತು. ಇದೀಗ ಭದ್ರತೆ ನೀಡಿರುವುದಾಗಿ ತಿಳಿದುಬಂದಿದೆ.

ಖಾಸಗಿ ಆಸ್ಪತ್ರೆಗಳಿಗೆ ಲಸಿಕೆ ಬೆಲೆ ಪರಿಷ್ಕರಿಸಿದ ಕೇಂದ್ರ; ಯಾವ್ಯಾವ ಲಸಿಕೆಗೆ ಎಷ್ಟು ಬೆಲೆ?ಖಾಸಗಿ ಆಸ್ಪತ್ರೆಗಳಿಗೆ ಲಸಿಕೆ ಬೆಲೆ ಪರಿಷ್ಕರಿಸಿದ ಕೇಂದ್ರ; ಯಾವ್ಯಾವ ಲಸಿಕೆಗೆ ಎಷ್ಟು ಬೆಲೆ?

ದೇಶದ ವೈದ್ಯಕೀಯ ಹಾಗೂ ಆರೋಗ್ಯ ಸುರಕ್ಷತೆ ದೃಷ್ಟಿಯಿಂದ ಈ ಸಂಸ್ಥೆಗೆ ಭದ್ರತೆ ನೀಡುವುದು ಪ್ರಮುಖವಾಗಿದೆ. ಸಂಸ್ಥೆಗೆ ಭಯೋತ್ಪಾದಕಾ ಬೆದರಿಕೆಯ ಸಾಧ್ಯತೆಗಳಿವೆ. ಹೀಗಾಗಿ ಹೈದರಾಬಾದ್‌ನಲ್ಲಿ ಭಾರತ್ ಬಯೋಟೆಕ್‌ ಘಟಕಕ್ಕೆ ಭದ್ರತೆ ಒದಗಿಸುವ ಕಾರ್ಯವನ್ನು ಸಿಐಎಸ್‌ಎಫ್‌ಗೆ ವಹಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜೂನ್ 14ರಂದು ಇನ್ನಷ್ಟು ಸಿಬ್ಬಂದಿ ಭದ್ರತೆ ನೀಡಲು ಜೊತೆಯಾಗುವರು ಎಂದು ಸಿಐಎಸ್‌ಎಫ್ ಸಬ್ ಇನ್‌ಸ್ಪೆಕ್ಟರ್ ಜನರಲ್ ಹಾಗೂ ಮುಖ್ಯ ವಕ್ತಾರ ಅನಿಲ್ ಪಾಂಡೆ ತಿಳಿಸಿದ್ದಾರೆ.

English summary
The Centre has accorded a security cover of armed CISF commandos for the Hyderabad premises of Bharat Biotech, one of the major COVID-19 vaccine manufacturers in the country,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X