Video: ನಡುರಸ್ತೆಯಲ್ಲೇ ವೃದ್ಧ ಅತ್ತೆಯ ಮೇಲೆ ಸೊಸೆ ಹಲ್ಲೆ

ಹೈದ್ರಾಬಾದ್, ಅಕ್ಟೋಬರ್.10: ತೆಲಂಗಾಣದಲ್ಲಿ ನಡೆದಿರುವ ಇದೊಂದು ಘಟನೆಯನ್ನು ನೋಡುತ್ತಿದ್ದರೆ ಮಾನವೀಯತೆಯೇ ಕಳೆದು ಹೋಗಿದೆಯಾ ಎನ್ನುವ ಅನುಮಾನ ಹುಟ್ಟಿಕೊಳ್ಳುತ್ತದೆ. ವೃದ್ಧ ಅತ್ತೆಯ ಮೇಲೆ ಸೊಸೆ ನಡೆಸಿದ ಹಲ್ಲೆಯ ದೃಶ್ಯ ಕರುಳು ಹಿಂಡುವಂತಿದೆ.

ಕೌಟುಂಬಿಕ ಕಲಹದ ಹಿನ್ನೆಲೆ 55 ವರ್ಷದ ತಸ್ನೀಮ್ ಸುಲ್ತಾನ್ ಮೇಲೆ ಸೊಸೆ ಉಜ್ಮಾ ಬೇಗಮ್ ಎಂಬುವವರು ನಡುರಸ್ತೆಯಲ್ಲೇ ಹಲ್ಲೆ ನಡೆಸಿದ್ದಾರೆ. ಹೈದ್ರಾಬಾದ್ ಮಲ್ಲೇಪಲ್ಲಿ ಎಂಬಲ್ಲಿ ನಡೆದ ಘಟನೆಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.

ಕಳೆದ ಗುರುವಾರ ಹುಮಾಯೂನ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ವೃದ್ಧ ಅತ್ತೆ ಮೇಲೆ ಸೊಸೆ ಮತ್ತು ಮಗಳು ಹಲ್ಲೆ ನಡೆಸುತ್ತಿರುವುದನ್ನು ಪುಟ್ಟ ಮಗುವೊಂದು ಅಲ್ಲಿ ಮೊಬೈಲ್ ನಲ್ಲಿ ಸೆರೆ ಹಿಡಿಯುತ್ತಿರುವ ದೃಶ್ಯ ಕೂಡಾ ಸಿಸಿ ಕ್ಯಾಮರಾದಲ್ಲಿದೆ. ಈ ಸಿಸಿ ಕ್ಯಾಮರಾ ದೃಶ್ಯಾವಳಿ ವೈರಲ್ ಆಗುತ್ತಿದ್ದಂತೆ ಪ್ರಕರಣವು ಬೆಳಕಿಗೆ ಬಂದಿದೆ.

CCTV: 55-Years-Old Woman Thrashed By Daughter-In-Law In Hyderabad

ಸೊಸೆ ವಿರುದ್ಧ ಪ್ರಕರಣ ದಾಖಲು:

ತಸ್ನೀಮ್ ಸುಲ್ತಾನ್ ಮೇಲೆ ಹಲ್ಲೆ ನಡೆಸಿದ ಸೊಸೆ ಉಜ್ಮಾ ಬೇಗಮ್ ಮತ್ತು ಮಗಳು ಆಸಿಫಾ ಬೇಗಮ್ ವಿರುದ್ಧ ಪೊಲೀಸರು ಪ್ರಕರಣವನ್ನು ದಾಖಿಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ಅದೇ ಕಟ್ಟಡದಲ್ಲಿ ವಾಸವಾಗಿದ್ದ ಸಂಬಂಧಿಕರು ಮನೆಯ ವಿದ್ಯುತ್ ಮತ್ತು ನೀರಿನ ಸಂಪರ್ಕವನ್ನು ಕಡಿತಗೊಳಿಸಿದ್ದಕ್ಕೆ ವೃದ್ಧೆ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಕಾರಣ ಏನೂ ಇದ್ದರೂ ವೃದ್ಧೆಯ ಮೇಲೆ ಕ್ರೌರ್ಯ ಮೆರೆದಿರುವ ಸೊಸೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+