ಭಾರತ್ ಬಯೋಟೆಕ್ ಕೊವ್ಯಾಕ್ಸಿನ್ ಬಳಕೆ ಯಾವಾಗ?
ಹೈದರಾಬಾದ್, ಡಿ. 10: ''ವಿಶ್ವದಲ್ಲಿ ತಯಾರಾಗುವ ಒಟ್ಟು ಲಸಿಕೆಗಳಲ್ಲಿ ಶೇ.30ರಷ್ಟು ಹೈದರಾಬಾದಿನಲ್ಲಿ ತಯಾರಾಗುತ್ತಿವೆ'' ಎಂದು ತೆಲಂಗಾಣ ಆರೋಗ್ಯ ಇಲಾಖೆ ಘೋಷಿಸಿರುವ ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ಬಳಕೆ ಯಾವಾಗಿನಿಂದ ಶುರುವಾಗಲಿದೆ ಎಂಬ ಪ್ರಶ್ನೆಗೆ ಸಂಸ್ಥೆಯ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಸುಚಿತ್ರಾ ಎ ಉತ್ತರಿಸಿದ್ದಾರೆ.
ಹೈದರಾಬಾದ್‌ನಲ್ಲಿರುವ ಭಾರತ್ ಬಯೋಟೆಕ್ ಹಾಗೂ ಬಯೋಲಾಜಿಕಲ್ ಇ ಲಿಮಿಟೆಡ್ ಕೊವ್ಯಾಕ್ಸಿನ್ ಲಸಿಕೆ ಪ್ರಯೋಗಾಲಯಕ್ಕೆ 64 ದೇಶಗಳ 70ಕ್ಕೂ ಹೆಚ್ಚು ಪ್ರತಿನಿಧಿಗಳ ನಿಯೋಗ ಭೇಟಿ ನೀಡಿ ತೆರಳಿದ ಬಳಿಕ ಸುಚಿತ್ರಾ ಮಾತನಾಡಿದರು.
"ಸುರಕ್ಷತೆ ಹಾಗೂ ಸಮಗ್ರ ಪರೀಕ್ಷಾ ಅಂಕಿ ಅಂಶದ ಲೆಕ್ಕಾಚಾರದಂತೆ ಕೊವ್ಯಾಕ್ಸಿನ್ 2021ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ಮಾರುಕಟ್ಟೆಗೆ ಲಭ್ಯವಾಗಲಿದೆ. ಕೇಂದ್ರ ಸರ್ಕಾರದ ನಿಯಮಾವಳಿ, ಯೋಜನೆ ಅನುಗುಣವಾಗಿ ವಿವಿಧ ಹಂತಗಳಲ್ಲಿ ಪ್ರಯೋಗ ನಡೆಸಲಾಗಿದ್ದು, ಫಲಿತಾಂಶ ಫಲಕಾರಿಯಾಗಿದೆ'' ಎಂದು ಸುಚಿತ್ರಾ ಎಲ್ಲಾ ಹೇಳಿದರು.

ಇದು ಭಾರತದಿಂದ ಮಾತ್ರ ಸಾಧ್ಯ
ಆಸ್ಟ್ರೇಲಿಯಾದ ರಾಯಭಾರಿ ಬ್ಯಾರಿ ಓ ಫರೆಲ್ ಅವರು ಭಾರತ್ ಬಯೋಟೆಕ್ ಭೇಟಿ ಬಳಿಕ ಮಾತನಾಡಿ, ಫಾರ್ಮಾಸ್ಯೂಟಿಕಲ್ ಸಂಶೋಧನೆ ಹಾಗೂ ಉತ್ಪಾದನೆ ಪ್ರಗತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಭಾರತದಲ್ಲಿ ನೊವೆಲ್ ವ್ಯಾಕ್ಸಿನಾಲಜಿಯಲ್ಲಿ ಕೊವ್ಯಾಕ್ಸಿನ್ ಹೊಸ ಮೈಲಿಗಲ್ಲಾಗಲಿದೆ. ಈ ಪ್ರಮಾಣ ಬೃಹತ್ ಉತ್ಪಾದನೆ ಹಾಗೂ ಪೂರೈಕೆ ಭಾರತದಿಂದ ಮಾತ್ರ ಸಾಧ್ಯ ಎಂದು ಹೊಗಳಿದರು.
ಇದರ ಬೆನ್ನಲ್ಲೇ ತುರ್ತು ಪರಿಸ್ಥಿತಿಯಲ್ಲಿ ಕೊವ್ಯಾಕ್ಸಿನ್ ಪ್ರಯೋಗಕ್ಕೆ ಡ್ರಗ್ಸ್ ಕಂಟ್ರೋಲರ್ (ಡಿಸಿಜಿಐ)ನಿಂದ ಭಾರತ್ ಬಯೋಟೆಕ್ ಸಂಸ್ಥೆಗೆ ಅನುಮತಿ ಸಿಕ್ಕಿದೆ. ಕೊವ್ಯಾಕ್ಸಿನ್ ಮೂರನೇ ಹಂತರ ಕ್ಲಿನಿಕಲ್ ಟ್ರಯಲ್ ನಲ್ಲಿದೆ. ಮೊದಲೆರಡು ಹಂತದ ಟ್ರಯಲ್ ಗೆ ಒಳಪಟ್ಟವರ ಸಮಗ್ರ ಅಂಕಿ ಅಂಶ ಇನ್ನೂ ಸಾರ್ವಜನಿಕವಾಗಿ ಸಂಸ್ಥೆ ಪ್ರಕಟಿಸಿಲ್ಲ. ಆದರೂ, ಡಿಸಿಜಿಐ ಅನುಮತಿ ನೀಡಿರುವುದು ಹಲವರ ಹುಬ್ಬೇರಿಸಿದೆ.












Click it and Unblock the Notifications