ಆರ್ ಜೆ ಸಂಧ್ಯಾ ಸಾವಿಗೆ ಕಾರಣನಾದ ಆರ್ಮಿ ಆಫೀಸರ್ ಸೆರೆ
ಹೈದರಾಬಾದಿನ ರೇಡಿಯೋ ಚಾರ್ಮಿನಾರ್ ನಲ್ಲಿ ಆರ್ ಜೆ ಆಗಿದ್ದ ಸಂಧ್ಯಾ ಅವರ ಆತ್ಮಹತ್ಯೆ ಪ್ರಕರಣರ ಆರೋಪಿ ಸಂಧ್ಯಾ ಅವರ ಪತಿ ಆರ್ಮಿ ಆಫೀಸರ್ ವೈಭವ್ ಅವರನ್ನು ಕೊನೆಗೂ ಬಂಧಿಸಲಾಗಿದೆ.
ಹೈದರಾಬಾದ್, ಮೇ 04: ಹೈದರಾಬಾದಿನ ರೇಡಿಯೋ ಚಾರ್ಮಿನಾರ್ ನಲ್ಲಿ ಆರ್ ಜೆ ಆಗಿದ್ದ ಸಂಧ್ಯಾ ಅವರ ಆತ್ಮಹತ್ಯೆ ಪ್ರಕರಣರ ಆರೋಪಿ ಸಂಧ್ಯಾ ಅವರ ಪತಿ ಆರ್ಮಿ ಆಫೀಸರ್ ವೈಭವ್ ಅವರನ್ನು ಕೊನೆಗೂ ಬಂಧಿಸಲಾಗಿದೆ.
ತನ್ನ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಕೇಳಿ ಬಂದ ಕೂಡಲೇ ಆಸ್ಪತ್ರೆ ಸೇರಿದ್ದ ಆರ್ಮಿ ಮೇಜರ್ ವೈಭವ್ ರನ್ನು ಬಂಧಿಸಿದ ಪೊಲೀಸರು, ನ್ಯಾಯಾಲಯದ ಮುಂದೆ ಗುರುವಾರದಂದು ಹಾಜರುಪಡಿಸಿದ್ದಾರೆ. ವಿಶಾಲ್ ಅವರನ್ನು 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಈ ಸಂಬಂಧ ವಿಚಾರಣೆ ಮುಂದುವರಿದಿದೆ.[ಆರ್ ಜೆ ಸಂಧ್ಯಾ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು]

ಏಪ್ರಿಲ್ 18 ರಂದು ತಮ್ಮ ಮನೆಯಲ್ಲಿ ರೇಡಿಯೋ ಜಾಕಿ ಸಂಧ್ಯಾ ಸಿಂಗ್ ನೇಣಿಗೆ ಶರಣಾಗಿದ್ದರು. ತಾನು ಮಲಗಿದ್ದ ವೇಳೆ ಪತ್ನಿ ಸಂಧ್ಯಾ ನೇಣಿಗೆ ಶರಣಾಗಿದ್ದಾಳೆ ಎಂದು ವಿಶಾಲ್ ಹೇಳಿಕೆ ನೀಡಿದ್ದರು. ಆದರೆ, ವರದಕ್ಷಿಣೆ ಕಿರುಕುಳದಿಂದ ತಮ್ಮ ಮಗಳು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಸಂಧ್ಯಾ ಅವರ ತಂಗಿ ಹಾಗೂ ಪೋಷಕರು ದೂರು ನೀಡಿದ್ದರು.
54ನೇ ಇನ್ಫ್ರಾಂಟ್ರಿಯ ಮೇಜರ್ ವಿಶಾಲ್ ವೈಭವ್ ವಿರುದ್ದ ಐಪಿಸಿ ಸೆಕ್ಷನ್ 304ಬಿ ಅನ್ವಯ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಉತ್ತರಪ್ರದೇಶ ಮೂಲದ ಸಂಧ್ಯಾ ಹಾಗು ವಿಶಾಲ್ ಅವರು 2015ರಲ್ಲಿ ಮದುವೆಯಾಗಿದ್ದರು. ಮದುವೆ ಸಂದರ್ಭದಲ್ಲಿ ವಿಶಾಲ್ ಅವರು ವರದಕ್ಷಿಣೆಗೆ ಬೇಡಿಕೆ ಇಟ್ಟಿರಲಿಲ್ಲ. ಆದರೆ, ಹೈದರಾಬಾದಿನ ದಂಡು ಪ್ರದೇಶದಲ್ಲಿ ನೆಲೆಸಿದ ಮೇಲೆ ಸಂಧ್ಯಾ ಅವರಿಗೆ ಕಿರುಕುಳ ನೀಡಿದ್ದು ಕಂಡು ಬಂದಿದೆ. ವಿಶಾಲ್ ಅವರ ತನಿಖೆಗೆ ಸಹಕರಿಸುವುದಾಗಿ ಆರ್ಮಿ ಭರವಸೆ ನೀಡಿದೆ ಎಂದು ಹೈದರಾಬಾದ್ ಪೊಲೀಸರು ತಿಳಿಸಿದ್ದಾರೆ.












Click it and Unblock the Notifications