ಆಂಧ್ರಪ್ರದೇಶದ ಹೊಸ ರಾಜಧಾನಿಗೆ ಹೆಸರು ಸಿಕ್ತು!
ಹೈದರಾಬಾದ್, ಮಾ.23: ಅಖಂಡ ಆಂಧ್ರಪ್ರದೇಶ ಒಡೆದು ತೆಲಂಗಾಣ ಹಾಗೂ ಆಂಧ್ರಪ್ರದೇಶವಾದ ಮೇಲೂ ಹೈದರಾಬಾದ್ ಎರಡು ರಾಜ್ಯಕ್ಕೂ ರಾಜಧಾನಿಯಾಗಿ ಮುಂದುವರೆದಿದೆ. ಆದರೆ, ಆಂಧ್ರಪ್ರದೇಶಕ್ಕೆ ಹೊಸ ರಾಜಧಾನಿ ನಿರ್ಮಾಣವಾಗುತ್ತಿರುವ ವಿಷಯ ಎಲ್ಲರಿಗೂ ತಿಳಿದಿದೆ. ಈ ಉದ್ದೇಶಿತ ಹೊಸ ರಾಜಧಾನಿಗೆ 'ಅಮರಾವತಿ' ಎಂದು ಹೆಸರಿಡಲು ಚಂದ್ರಬಾಬು ನಾಯ್ಡು ಸರ್ಕಾರ ತೀರ್ಮಾನಿಸಿದೆ.
ವಿಜಯವಾಡ-ಗುಂಟೂರು ಮಧ್ಯಭಾಗದಲ್ಲಿ ನಿರ್ಮಾಣವಾಗಿರುವ ರಾಜಧಾನಿಗೆ 'ಅಮರಾವತಿ' ಎಂದು ನಾಮಕಾರಣ ಮಾಡಲು ಸಿದ್ಧತೆ ನಡೆದಿದೆ. ಕೃಷ್ಣಾ ನದಿ ಪ್ರಾಂತ್ಯದ ಇತಿಹಾಸ ಪ್ರಸಿದ್ಧ ಬೌದ್ಧ ತಾಣದ ಹೆಸರು 'ಅಮರಾವತಿ' ಯನ್ನು ರಾಜಧಾನಿಗೆ ಇಡಲಾಗುತ್ತದೆ.

ಚಂದ್ರಬಾಬು ನಾಯ್ಡು ಸರ್ಕಾರ ಈಗಾಗಲೇ ಹೊಸ ರಾಜಧಾನಿ ನಿರ್ಮಾಣಕ್ಕಾಗಿ ಭೂಸ್ವಾದೀನ ಪ್ರಕ್ರಿಯೆ ನಡೆಸಿದೆ. ಸುಮಾರು 33,000 ಎಕರೆ ಭೂಮಿಯನ್ನು ಸರ್ಕಾರ ಪಡೆದುಕೊಂಡಿದೆ.
ಸಿಂಗಪುರ ಮೂಲದ ಸಂಸ್ಥೆಯೊಂದು ಆಂಧ್ರಪ್ರದೇಶದ ಹೊಸ ರಾಜಧಾನಿ ನಿರ್ಮಾಣ ಕಾರ್ಯದ ಹೊಣೆ ಹೊತ್ತಿದೆ. ಈ ವರ್ಷದ ಮೇ-ಜೂನ್ ತಿಂಗಳಲ್ಲಿ ರಾಜಧಾನಿ ಹೇಗಿರಲಿದೆ ಎಂಬ ಒಂದು ಚಿತ್ರಣ ಸಿಗಲಿದೆ.












Click it and Unblock the Notifications