Get Updates
Get notified of breaking news, exclusive insights, and must-see stories!

ತೆಲಂಗಾಣ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ ಅಮಿತ್ ಶಾ-ಜೂನಿಯರ್ ಎನ್‌ಟಿಆರ್ ಭೇಟಿ

ಹೈದರಾಬಾದ್, ಆಗಸ್ಟ್ 22: ಅಚ್ಚರಿಯ ಬೆಳವಣಿಗೆಯಲ್ಲಿ ಕೇಂದ್ರ ಗೃಹ ಸಚಿವ ಜೂನಿಯರ್ ಎನ್‌ಟಿಆರ್ ಅವರನ್ನು ಭೇಟಿ ಮಾಡಿದ್ದು, ತೆಲಂಗಾಣ, ಆಂಧ್ರಪ್ರದೇಶ ರಾಜ್ಯ ರಾಜಕೀಯದಲ್ಲಿ ಭಾರಿ ಕುತೂಹಲ ಮೂಡಿಸಿದೆ.

ತೆಲಂಗಾಣದಲ್ಲಿ ಭಾನುವಾರ ನಡೆದ 'ಮುನುಗೋಡು ಸಮರಭೇರಿ' ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲು ತೆಲಂಗಾಣ ರಾಜ್ಯಕ್ಕೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಟಿಡಿಪಿ ಸಂಸ್ಥಾಪಕ ಮತ್ತು ಸಂಯುಕ್ತ ಆಂಧ್ರಪ್ರದೇಶದ ಮಾಜಿ ಸಿಎಂ ದಿವಂಗತ ಎನ್‌ಟಿ ಅವರ ಮೊಮ್ಮಗ ಟಾಲಿವುಡ್ ನಟ ಜೂನಿಯರ್ ಎನ್‌ಟಿಆರ್ ಅವರನ್ನು ಭೇಟಿ ಮಾಡಿದ್ದಾರೆ. ಭಾನುವಾರ ರಾತ್ರಿ ಶಂಶಾಬಾದ್‌ನ ನೊವೊಟೆಲ್ ಹೋಟೆಲ್‌ನಲ್ಲಿ ಇಬ್ಬರೂ ಭೇಟಿಯಾಗಿದ್ದು ಸುಮಾರು 10-15 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ.

ಜೂನಿಯರ್ ಎನ್‌ಟಿಆರ್ 2009ರ ಅಸೆಂಬ್ಲಿ ಚುನಾವಣೆಯಲ್ಲಿ ಟಿಡಿಪಿ ಪರ ಪ್ರಚಾರ ಮಾಡಿದ್ದರು, ಆದರೆ ನಂತರ ರಾಜಕೀಯ ಜೀವನದಿಂದ ಹಿಂದೆ ಸರಿದ ಜೂನಿಯರ್ ಎನ್‌ಟಿಆರ್ ತಮ್ಮ ಸಿನಿಮಾ ವೃತ್ತಿಜೀವನದತ್ತ ಗಮನ ಹರಿಸಲು ಆದ್ಯತೆ ನೀಡಿದರು. ಅವರ ಚಿಕ್ಕಪ್ಪ ಮತ್ತು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರೊಂದಿಗಿನ ಅವರ ಸಂಬಂಧವು ಅಹಿತಕರವಾಗಿದೆ ಎಂದು ಹೇಳಲಾಗುತ್ತಿದೆ.

ಎನ್‌ಟಿಆರ್‌ ಅಭಿನಯಕ್ಕೆ ಅಮಿತ್ ಶಾ ಮೆಚ್ಚುಗೆ

ಎನ್‌ಟಿಆರ್‌ ಅಭಿನಯಕ್ಕೆ ಅಮಿತ್ ಶಾ ಮೆಚ್ಚುಗೆ

ಆರ್‌ಆರ್‌ಆರ್‌ ಚಿತ್ರದಲ್ಲಿ ಜೂನಿಯರ್‌ ಎನ್‌ಟಿಆರ್‌ ಅಭಿನಯವನ್ನು ಮೆಚ್ಚಿಕೊಂಡಿರುವ ಅಮಿತ್ ಶಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶಾ ತಮ್ಮ ಬಿಡುವಿಲ್ಲದ ವೇಳಾಪಟ್ಟಿಯಲ್ಲಿ ಜೂನಿಯರ್ ಎನ್‌ಟಿಆರ್‌ ಭೇಟಿ ಮಾಡಲು ಸಮಯ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಆರ್‌ಆರ್‌ಆರ್ ಆಸ್ಕರ್‌ಗೆ ನಾಮನಿರ್ದೇಶನಗೊಳ್ಳುತ್ತಿದೆ ಎಂಬ ಇತ್ತೀಚಿನ ವರದಿಗಳೂ ಇವೆ.

ಬಿಜೆಪಿ ಮೂಲಗಳ ಪ್ರಕಾರ, ಅಮಿತ್ ಶಾ ಮತ್ತು ಜೂನಿಯರ್ ಎನ್‌ಟಿಆರ್ ನಡುವಿನ ಅನೌಪಚಾರಿಕ ಖಾಸಗಿ ಭೇಟಿಯಲ್ಲಿ ಆರ್‌ಆರ್‌ಆರ್ ಯಶಸ್ಸಿನ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

ರಾಜಕೀಯ ಉದ್ದೇಶಕ್ಕಾಗಿ ಜೂನಿಯರ್ ಎನ್‌ಟಿಆರ್ ಭೇಟಿ?

ರಾಜಕೀಯ ಉದ್ದೇಶಕ್ಕಾಗಿ ಜೂನಿಯರ್ ಎನ್‌ಟಿಆರ್ ಭೇಟಿ?

ಚಲನಚಿತ್ರದ ನಿರ್ದೇಶಕ ಎಸ್‌ಎಸ್ ರಾಜಮೌಳಿ ಅವರ ತಂದೆ ಎಸ್‌ಎಸ್ ವಿಜಯೇಂದ್ರ ಪ್ರಸಾದ್ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದರೂ ಅವರನ್ನು ಬಿಟ್ಟು, ಜೂನಿಯರ್ ಎನ್‌ಟಿಆರ್ ಭೇಟಿ ಮಾಡಿರುವುದು ಹಾಗೂ 15 ನಿಮಿಷಗಳ ಕಾಲ ಚರ್ಚೆ ನಡೆಸಿರುವುದು ರಾಜಕೀಯ ವಿಚಾರದ ಬಗ್ಗೆ ಊಹಾಪೋಹಗಳಿಗೆ ಕಾರಣವಾಗಿದೆ.

ಜೂನಿಯರ್ ಎನ್‌ಟಿಆರ್‌ಗೆ ಎರಡೂ ತೆಲುಗು ರಾಜ್ಯಗಳಲ್ಲಿ ಅಸಂಖ್ಯ ಅಭಿಮಾನಿಗಳು ಇರುವುದರಿಂದ, ತೆಲಂಗಾಣದಲ್ಲಿ ಕಮ್ಮಾ ಜಾತಿಯ ವೋಟ್ ಬ್ಯಾಂಕ್ ಅನ್ನು ಸೆಳೆಯಲು ಬಿಜೆಪಿ ಜೂನಿಯರ್ ಎನ್‌ಟಿಆರ್ ಅವರ ಮೊರೆ ಹೋಗುತ್ತಿದೆಯಾ ಎನ್ನುವ ಅನುಮಾನಗಳು ರಾಜಕೀಯ ವಲಯದಲ್ಲಿ ದಟ್ಟವಾಗಿದೆ.

ಸಿನಿಮಾ ಸ್ಟಾರ್ ಜೊತೆ ಬಿಜೆಪಿ ರಾಜಕೀಯ ನಂಟು

ಸಿನಿಮಾ ಸ್ಟಾರ್ ಜೊತೆ ಬಿಜೆಪಿ ರಾಜಕೀಯ ನಂಟು

ಬಿಜೆಪಿಯು ಸಿನಿಮಾ ನಟ ನಟಿಯರನ್ನು ತಮ್ಮ ಪಕ್ಷದ ವ್ಯವಹಾರಗಳಲ್ಲಿ ಮತ್ತು ರಾಜಕೀಯ ಪ್ರಚಾರಗಳಲ್ಲಿ ಬಳಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ನಟಿ ವಿಜಯಶಾಂತಿ, ಹಾಸ್ಯನಟ ಮತ್ತು ಮಾಜಿ ಶಾಸಕ ಬಾಬು ಮೋಹನ್, ಹಿರಿಯ ನಟಿ ಗೌತಮಿ, ಮಾಜಿ ಸಂಸದ ಮತ್ತು ಹಿರಿಯ ಟಾಲಿವುಡ್ ನಟ ಕೃಷ್ಣಂ ರಾಜು ಬಿಜೆಪಿ ಪಕ್ಷಕ್ಕಾಗಿ ಈ ಹಿಂದೆ ಕೆಲಸ ಮಾಡಿದ್ದಾರೆ.

ಭಾನುವಾರ ಸಂಜೆ ಮುನುಗೋಡಿನಲ್ಲಿ ನಡೆದ ಸಾರ್ವಜನಿಕ ಸಭೆಯ ಮುಕ್ತಾಯದ ನಂತರ ಅಮಿತ್ ಶಾ ಮಾಧ್ಯಮ ಉದ್ಯಮಿ ಚೆರುಕುರಿ ರಾಮೋಜಿ ರಾವ್‌ರನ್ನು ಭೇಟಿ ಮಾಡಿದರು ಮತ್ತು ರಾಮೋಜಿ ಫಿಲ್ಮ್ ಸಿಟಿಯಲ್ಲಿ 20 ನಿಮಿಷಗಳ ಕಾಲ ಅವರೊಂದಿಗೆ ಖಾಸಗಿಯಾಗಿ ಮಾತುಕತೆ ನಡೆಸಿದರು. ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಖಾತೆ ಸಚಿವ ಜಿ ಕಿಶನ್ ರೆಡ್ಡಿ ಮತ್ತು ಇತರ ಮುಖಂಡರು ಅವರೊಂದಿಗೆ ಉಪಸ್ಥಿತರಿದ್ದರೂ, ಇಬ್ಬರ ನಡುವೆ ಖಾಸಗಿಯಾಗಿ ಸಭೆ ನಡೆಯಿತು. ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಹಾಜರಿದ್ದರು ಎಂಬುದನ್ನು ಬಿಜೆಪಿ ನಾಯಕರು ಖಚಿತಪಡಿಸಿಲ್ಲ ಹಾಗೂ ಅದನ್ನು ನಿರಾಕರಿಸಿಯೂ ಇಲ್ಲ.

ಸಮಾವೇಶದಲ್ಲಿ ಸವಿಸ್ತಾರ ಭಾಷಣ ಮಾಡದ ಅಮಿತ್ ಶಾ

ಸಮಾವೇಶದಲ್ಲಿ ಸವಿಸ್ತಾರ ಭಾಷಣ ಮಾಡದ ಅಮಿತ್ ಶಾ

ಮುನುಗೋಡು ಮಾಜಿ ಶಾಸಕ ಕೋಮಟಿರೆಡ್ಡಿ ರಾಜಗೋಪಾಲ್ ರೆಡ್ಡಿ ಅವರನ್ನು ಹೊರತುಪಡಿಸಿದರೆ ಸಾರ್ವಜನಿಕ ಸಭೆಯಲ್ಲಿ ರಾಜ್ಯದ ಯಾವೊಬ್ಬ ನಾಯಕರೂ ಸವಿಸ್ತಾರವಾಗಿ ಭಾಷಣ ಮಾಡಲಿಲ್ಲ. ವಾಸ್ತವವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್, ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಜಿ. ಕಿಶನ್ ರೆಡ್ಡಿ ಮತ್ತು ರಾಜ್ಯಸಭಾ ಸಂಸದ ಡಾ. ಕೆ. ಲಕ್ಷ್ಮಣ್ ತಮ್ಮ ಭಾಷಣವನ್ನು ಕೇವಲ ಒಂದೆರಡು ನಿಮಿಷಕ್ಕೆ ಸೀಮಿತಗೊಳಿಸಿದ್ದರು. ಅಲ್ಲಿಂದ ರಾಮೋಜಿ ಫಿಲ್ಮ್ ಸಿಟಿಗೆ ತೆರಳಬೇಕಿದ್ದ ಅಮಿತ್ ಶಾ ಕೂಡ ನಿರೀಕ್ಷೆಯಷ್ಟು ಭಾಷಣ ಮಾಡಲಿಲ್ಲ.

ಭಾನುವಾರ ಮಧ್ಯಾಹ್ನ ಬೇಗಂಪೇಟೆ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅಮಿತ್ ಶಾ, ಸಿಕಂದರಾಬಾದ್‌ನ ಪ್ರಸಿದ್ಧ ಉಜ್ಜೈನಿ ಮಹಾಂಕಾಳಿ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು, ನಂತರ ಅವರು ನೇರವಾಗಿ ಸಿಕಂದರಾಬಾದ್‌ನ ಸಾಂಬಮೂರ್ತಿ ನಗರ ಪ್ರದೇಶದಲ್ಲಿರುವ ಬಿಜೆಪಿಯ ಎಸ್‌ಸಿ ಮೋರ್ಚಾ ಕಾರ್ಯಕರ್ತ ಎನ್. ಸತ್ಯನಾರಾಯಣ ಮನೆಗೆ ತೆರಳಿದರು. ದೆಹಲಿಗೆ ಹಿಂತಿರುಗುವ ಮೊದಲು, ಅಮಿತ್ ಶಾ ಪಕ್ಷದ ಆಯ್ದ ನಾಯಕರೊಂದಿಗೆ ಸಭೆ ನಡೆಸಿದರು ಮತ್ತು ಪಕ್ಷದಲ್ಲಿ ಭವಿಷ್ಯದಲ್ಲಿ ಆಗಬೇಕಾದ ಕೆಲಸಗಳ ಬಗ್ಗೆ ನಿರ್ದೇಶನ ನೀಡಿದರು ಎಂದು ಹೇಳಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+