ವಧು-ವರರ ಕುಟುಂಬದ ನಡುವೆ ಮಾರಾಮಾರಿ, ಮೂವರಿಗೆ ಗಾಯ

ಸೂರ್ಯಪೇಟೆ, ನವೆಂಬರ್ 2: ವಧು-ವರರ ಕುಟುಂಬದ ನಡುವೆ ನಡೆದ ಮಾರಾಮಾರಿಯಲ್ಲಿ ಮೂವರು ಗಾಯಗೊಂಡಿರುವ ಘಟನೆ ತೆಲಂಗಾಣದ ಸೂರ್ಯಪೇಟೆಯಲ್ಲಿ ನಡದಿದೆ.

ವಧು-ವರರ ಕುಟುಂಬದ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ಉಂಟಾಗಿದೆ, ಕೋಪದಲ್ಲಿ ಪಕ್ಕದಲ್ಲಿ ಇದ್ದ ಕುರ್ಚಿಗಳನ್ನು ತೆಗೆದುಕೊಂಡು ಹೊಡೆದಾಡಿಕೊಂಡಿದ್ದಾರೆ, ಈ ವೇಳೆ ಮೂವರು ಗಾಯಗೊಂಡಿದ್ದಾರೆ.

ಸೂರ್ಯಪೇಟೆ ಜಿಲ್ಲೆಯ ಕೊಡದ ಮಂಡಲದ ಅಜಯ್ ಹಾಗೂ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಇಂದ್ರಜಾ ಎಂಬುವವರಿಗೆ ಅಕ್ಟೋಬರ್‌ 29ರಂದು ಮದುವೆ ನಿಶ್ಚಯವಾಗಿತ್ತು. ಮದುವೆ ದಿನದಂದೇ ಎರಡು ಕುಟುಂಬದ ನಡುವೆ ಜಗಳ ಆರಂಭವಾಗಿತ್ತು.

3 Injured As Bride And Grooms Families Brabble

ಮಾಹಿತಿ ದೊರೆತ ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅವರು ದೂರು ನೀಡಲು ನಿರಾಕರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+