ತಿರುಪತಿ ದೇವಾಲಯದಲ್ಲಿ ವಜ್ರ ಖಚಿತ 3 ಕಿರೀಟ ಕಳ್ಳತನ
ಹೈದರಾಬಾದ್, ಫೆಬ್ರವರಿ 03 : ತಿರುಪತಿಯ ಶ್ರೀ ಗೋವಿಂದರಾಜಸ್ವಾಮಿ ದೇವಾಲಯದಲ್ಲಿ ಮೂರು ವಜ್ರ ಖಚಿತ ಚಿನ್ನದ ಕಿರೀಟಗಳು ನಾಪತ್ತೆಯಾಗಿವೆ. ತಿರುಪತಿ ಈಸ್ಟ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದೆ.
ತಿರುಪತಿ ತಿರುಮಲ ದೇವಸ್ಥಾನಂ (ಟಿಟಿಡಿ) ಅಧೀನಕ್ಕೆ ಈ ದೇವಾಲಯ ಬರುತ್ತದೆ. ಶನಿವಾರ ಸಂಜೆ 5.45ಕ್ಕೆ ಅರ್ಚಕರು ದೇವಾಲಯದ ಬಾಗಿಲು ತೆರೆದಾಗ ಕಿರೀಟಗಳು ನಾಪತ್ತೆಯಾದ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ದೇವಾಲಯದ ಪೂಜಾ ಕಾರ್ಯಗಳು ಹಾಗೂ ಭಕ್ತರ ದರ್ಶನದ ಬಳಿಕ ಸಂಜೆ 5 ಗಂಟೆಗೆ ದೇವಸ್ಥಾನದ ಬಾಗಿಲು ಹಾಕಲಾಗಿತ್ತು. 45 ನಿಮಿಷಗಳ ಬಳಿಕ ಮತ್ತೆ ಪೂಜೆಗಾಗಿ ದೇವಾಲಯದ ಬಾಗಿಲು ತೆರೆದಾಗ ಮೂರು ಕಿರೀಟಗಳು ನಾಪತ್ತೆಯಾಗಿರುವುದು ತಿಳಿದಿದೆ.

ಉತ್ಸವದ ಸಂದರ್ಭದಲ್ಲಿ ಬಳಕೆ ಮಾಡುತ್ತಿದ್ದ ಮೂರು ವಜ್ರ ಖಚಿತ ಚಿನ್ನದ ಕಿರೀಟಗಳು ನಾಪತ್ತೆಯಾಗಿವೆ. ದೇವಾಲಯದ ಸಿಸಿಟವಿಯಲ್ಲಿ ಕಳ್ಳತನದ ದೃಶ್ಯ ಸೆರೆಯಾಗಿರುವ ಸಾಧ್ಯತೆ ಇದೆ. ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಮೂರು ಕಿರೀಟಗಳು ಸೇರಿ 1 ಕೆಜಿ 300 ಗ್ರಾಂ ತೂಕವಿದ್ದವು ಎಂದು ತಿಳಿದುಬಂದಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ತನಿಖೆಗಾಗಿ 6 ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ.












Click it and Unblock the Notifications