ಮದುವೆಗಾಗಿ ಸಾಮೂಹಿಕ ರಜೆ ಹಾಕಿದ ಆಂಧ್ರದ 100 ಶಾಸಕರು

Posted By:
Subscribe to Oneindia Kannada

ಹೈದರಾಬಾದ್, ನವೆಂಬರ್ 24: ಆಂಧ್ರಪ್ರದೇಶದ ನೂರಕ್ಕೂ ಹೆಚ್ಚು ಶಾಸಕರು ಒಟ್ಟಿಗೇ ರಜೆ ಕೇಳಿದ್ದಾರೆ! ಕಾರಣ ಏನು ಗೊತ್ತಾ? 'ಮದುವೆ ಮನೆಗೆ ಹೋಗೋಕೆ! '

ಅಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿದ್ದರೆ, ಇಲ್ಲಿ ಅಂಬರೀಶ್...

ಹೌದು, ತೆಲಗು ದೇಶಂ ಪಕ್ಷದದ ನೂರಕ್ಕೂ ಹೆಚ್ಚು ಶಾಸಕರು ಸ್ಪೀಕರ್ ಕೊಡೆಲಾ ಶಿವಪ್ರಸಾದ್ ರಾವ್ ಅವರಿಗೆ ಬರೆದ ಪತ್ರದಲ್ಲಿ ತಮಗೆ ಎರಡು ದಿನ ರಜೆ ನೀಡುವಂತೆ ಕೇಳಿದ್ದಾರೆ.

100 Andhra MLAs granted mass leave to attend a wedding!

ಆಂಧ್ರದ ಒಟ್ಟು 176 ಶಾಸಕರಲ್ಲಿ 67 ಶಾಸಕರು ವಿಪಕ್ಷ ವೈಎಸ್ ಆರ್ ಕಾಂಗ್ರೆಸ್ಸಿನವರು. ಅವರು ಸಂಪೂರ್ಣ ಅಧಿವೇಶನವನ್ನು ಬಹಿಷ್ಕರಿಸಿರುವುದರಿಂದ ಉಳಿದವರಷ್ಟೇ ಅಧಿವೇಶನದಲ್ಲಿ ಭಾಗವಹಿಸುತ್ತಿದ್ದರು. ಆದರೆ ಇದೀಗ ನೂರಕ್ಕೂ ಹೆಚ್ಚು ಶಾಸಕರು ಸಾಮೂಹಿಕ ರಜೆ ಕೇಳಿರುವುದಸ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
More than 100 members of Andrapradesh legislative assembly have granted mass leave to attend a marriage!

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ