ಭಾರತೀಯ ಸೇನೆಗೆ ಹೊಸ ತಂತ್ರಜ್ಞಾನದ ಸ್ವದೇಶಿ ಪಿಸ್ತೂಲ್ ಒದಗಿಸುವ ಕನಸಲ್ಲಿ ಹುಬ್ಬಳ್ಳಿ ಯುವಕ
ಹುಬ್ಬಳ್ಳಿ, ಸೆಪ್ಟೆಂಬರ್ 27 : ಅಸ್ತ್ರ ಡಿಫೆನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಮೂಲಕ ಅಂಕುಶ್ ಕೊರವಿ ಎಂಬ ಹುಬ್ಬಳ್ಳಿಯ ಯುವಕ ಸ್ವದೇಶಿ ಪಿಸ್ತೂಲ್ ಅಭಿವೃದ್ಧಿಪಡಿಸಿದ್ದಾರೆ. ಹುಬ್ಬಳ್ಳಿಯ ಕಲಘಟಗಿ ತಾಲೂಕಿನ ಕಾಡನಕೊಪ್ಪದಲ್ಲಿ ಸ್ಥಾಪಿತ ತನ್ನ ಅತ್ಯಾಧುನಿಕ ಡಿಫೆನ್ಸ್ ಆರ್ ಮತ್ತು ಡಿ ಮತ್ತು ಉತ್ಪಾದನಾ ಸೌಲಭ್ಯವನ್ನು ಶೀಘ್ರದಲ್ಲೇ ಉದ್ಘಾಟಿಸಲಾಗುವುದು ಎಂದು ಕಂಪನಿಯ ಸಿಇಓ ಆಗಿರುವ ಅಂಕುಶ ಕೊರವಿ ತಿಳಿಸಿದ್ದಾರೆ.
ಅಂಕುಶ್ ಅವರು ಆತ್ಮನಿರ್ಭರ ಭಾರತದ ಮೊದಲ ಸ್ವದೇಶಿ ಪಿಸ್ತೂಲ್ ಅನ್ನು ಹುಬ್ಬಳ್ಳಿಯಲ್ಲಿ ಅಭಿವೃದ್ಧಿ ಪಡಿಸುವ ಮೂಲಕ ಭಾರತೀಯ ಸೇನೆಗೆ, ರಾಷ್ಟ್ರದ ಸಶಸ್ತ್ರ ಪಡೆಗಳ ಹಾಗೂ ಪೊಲೀಸ್ ಇಲಾಖೆಗೆ ತಾವೇ ಸಂಶೋಧನೆ ಮಾಡಿರುವ ವಿವಿಧ ಆಯುಧಗಳನ್ನು ಒದಗಿಸುವ ಕನಸು ಕಾಣುತ್ತಿದ್ದು, ಅದನ್ನು ನನಸು ಮಾಡಿಕೊಳ್ಳುವ ನಿಟ್ಟಿನಲ್ಲಿ ಮುನ್ನಡೆಯುತ್ತಿದ್ದಾರೆ.
ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಮಾತನಾಡಿದ ಅವರು, "ಅಸ್ತ್ರ ಡಿಫೆನ್ಸ್ ಸಂಶೋಧನಾ ಸಾಮರ್ಥ್ಯಗಳನ್ನು ಗುರುತಿಸಿ, ರಕ್ಷಣಾ ಉತ್ಪಾದನಾ ಇಲಾಖೆಯ ಅಸ್ತ್ರ ಡಿಫೆನ್ಸ್‌ನ ನವೀನ ಉತ್ಪನ್ನಗಳನ್ನು ಪ್ರದರ್ಶಿಸಲು ಆಯ್ಕೆ ಮಾಡಿ ಮುಂಬರುವ ಅಂತಾರಾಷ್ಟ್ರೀಯ ರಕ್ಷಣಾ ಪ್ರದರ್ಶನ ಡೆಫ್ ಎಕ್ಸಪೋ - 2022 ಇಂಡಿಯಾ ಪೆವಿಲಿಯನ್ ನಲ್ಲಿ ಅಕ್ಟೋಬರ್ 18 ರಿಂದ 22 ರವರೆಗೆ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿದೆ. ಅಸ್ತ್ರ ಡಿಫೆನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ಗುಜರಾತಿನ ಗಾಂಧಿನಗರದಲ್ಲಿ ನಡೆಯುವ ಇವೆಂಟ್‌ನಲ್ಲಿ ಭಾಗವಹಿಸಿ ಅಂತಾರಾಷ್ಟ್ರೀಯ ಹಾಗೂ ದೇಶಿಯ ರಕ್ಷಣಾ ವಲಯಕ್ಕೆ ನನ್ನ ಸಂಶೋಧನೆಗಳನ್ನು ಪ್ರದರ್ಶಿಸುತ್ತೇನೆ," ಎಂದು ಹೇಳಿದರು.

ಮೂರು ವಿಶಿಷ್ಟವಾದ ಆ್ಯಕ್ಷನ್ ಮೆಕ್ಯಾನಿಸಂ ಹೊಂದಿರುವ ಪಿಸ್ತೂಲ್
ಪಿಸ್ತೂಲ್ ಪೊಲೀಸ್ ಪಡೆಗಳ ಪ್ರಾಥಮಿಕ ಅಸ್ತ್ರ ಮತ್ತು ಸಶಸ್ತ್ರ ಪಡೆಗಳ ವೈಯಕ್ತಿಕ ರಕ್ಷಣಾ ಅಸ್ತ್ರವಾಗಿದೆ. ಅದಕ್ಕಾಗಿಯೇ ಅಸ್ತ್ರ ಡಿಫೆನ್ಸ್ ಕಂಪನಿ 'ಅಟಲ್' ಎನ್ನುವ ಹೆಸರಿನ ಪಿಸ್ತೂಲ್ ಅಭಿವೃದ್ಧಿ ಪಡಿಸಿ ಬಿಡುಗಡೆ ಮಾಡುತ್ತಿದೆ. ಈ ಪಿಸ್ತೂಲ್ ಮೂರು ವಿಶಿಷ್ಟವಾದ ಆ್ಯಕ್ಷನ್ ಮೆಕ್ಯಾನಿಸಂ ಹೊಂದಿರುವುದರಿಂದ ಡ್ಯೂಟಿ ಸಮಯದಲ್ಲಿ ಚಲನೆಯಲ್ಲಿ ಮತ್ತು ಮರೆಮಾಚಿ ಬಳಸಲು ಸಹಕಾರಿಯಾಗಿದೆ. ಇದು ವಿಶ್ವದ ಅತ್ಯಂತ ಸುರಕ್ಷಿತ ಹಾಗೂ ಸುಲಭವಾಗಿ ಕ್ಯಾರಿ ಮಾಡಬಹುದಾದ ಪಿಸ್ತೂಲ್ ಎಂದು ಅಂಕುಶ್ ಮಾಹಿತಿ ನೀಡಿದ್ದಾರೆ.

ಹಗುರವಾದ ಪಿಸ್ತೂಲ್
ಇನ್ನು ಈ ಪಿಸ್ತೂಲ್‌ಅನ್ನ ಭಾರತೀಯ ಬಳಕೆದಾರರ ಮತ್ತು ಭಾರತೀಯ ನೈಸರ್ಗಿಕ ಪರಿಸ್ಥಿತಿಗಳಿಗೆ ಹೊಂದುವಂತೆ ವಿನ್ಯಾಸ ಮಾಡಲಾಗಿದೆ. ಮಿಶ್ರಲೋಹದ ಉಕ್ಕಿನ ಸ್ಲೈಡ್ ಮತ್ತು ಪಾಲಿಮರ್ ಫ್ರೇಮ್ ಬಳಸಿರುವುದರಿಂದ ಪಿಸ್ತೂಲ್ ತುಂಬಾ ಹಗುರವಾಗಿದೆ. ಇದು ಮೂರು ಮ್ಯಾಗಜೀನ್ ಸಾಮರ್ಥ್ಯದ ಆಯ್ಕೆಗಳನ್ನು ಒಳಗೊಂಡಿದೆ. 15,17 ಮತ್ತು 21 ಸುತ್ತುಗಳ ಸಾಮರ್ಥ್ಯ ಹೊಂದಿದೆ.

ಭಾರತೀಯ ಸೇನೆಗೆ ಪಿಸ್ತೂಲ್ ಒದಗಿಸುವ ಕನಸು
ಈಗಾಗಲೇ ಭಾರತೀಯ ಸೇನೆಯಲ್ಲಿ ಹಳೆಯ ಕಾಲದ ಎರಡನೇ ವಿಶ್ವಯುದ್ಧದ ಯುಗದ ಬಂದೂಕುಗಳು ಬಳಕೆಯಲ್ಲಿದ್ದು, ಇಷ್ಟರವರೆಗೂ ಭಾರತದಲ್ಲಿ ಯಾವುದೇ ಆಧುನಿಕ ಸ್ವದೇಶಿ ಪಿಸ್ತೂಲ್ ಇರಲಿಲ್ಲ. ಅದನ್ನು ಗಮನದಲ್ಲಿ ಇಟ್ಟುಕೊಂಡು ಈ ಪಿಸ್ತೂಲ್ ಆವಿಷ್ಕರಿಸಲಾಗಿದೆ. ಇಂಜಿನಿಯರಿಂಗ್ ವಿದ್ಯಾರ್ಥಿ ಆಗಿದ್ದಾಗಲೇ ಇಂತಹದೊಂದು ಕಾರ್ಯಕ್ಕೆ ಮುಂದಾಗಿರುವ ಅಂಕುಶ್ ಹೊಸ ತಂತ್ರಜ್ಞಾನದ ಸ್ವದೇಶಿ ಪಿಸ್ತೂಲ್ ಒದಗಿಸುವ ಜೊತೆಗೆ ಇದನ್ನ ಭಾರತೀಯ ಸೇನೆಗೆ ಒದಗಿಸುವ ಕೊಡುವ ಕನಸು ಕಾಣುತ್ತಿದ್ದಾರೆ.

ಸ್ವದೇಶಿ ಬಿಡಿ ಭಾಗಗಳ ಬಳಕೆ
ಅಂಕುಶ್ ತಯಾರಿಸಿರುವ ಪಿಸ್ತೂಲ್ಗಳಲ್ಲಿ ಪ್ರತಿಯೊಂದು ಬಿಡಿಭಾಗವೂ ವಿದೇಶದಿಂದ ತರಿಸಿದ್ದಲ್ಲ. ಎಲ್ಲವೂ ಭಾರತದಲ್ಲಿ ತಯಾರಿಸಿದ ವಸ್ತುಗಳಾಗಿವೆ. ಮಿಲಿಟರಿ ಮತ್ತು ಪೋಲಿಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮತ್ತು ಅನುಭವಿ ಅಧಿಕಾರಿಗಳ ಮಾರ್ಗದರ್ಶನ ಪಡೆದು ಸ್ಥಳೀಯವಾಗಿ ವಿನ್ಯಾಸಗೊಳಿಸಿ ತಯಾರಿಸಿರುವ ಈ ಅಟಲ್ ಮಾಡ್ಯುಲರ್ ಪಿಸ್ತೂಲ್ ಅನ್ನ ನಮ್ಮ ಸೈನಿಕರಿಗೆ, ಸಶಸ್ತ್ರ ಪಡೆಗಳಿಗೆ ಅಸ್ತ್ರ ಡಿಫೆನ್ಸ್ ಕಂಪನಿ ಅರ್ಪಿಸುತ್ತದೆ ಎಂದು ಅಂಕುಶ್ ಕೊರವಿ ಹೇಳಿದ್ದಾರೆ.
ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದಾಗಲೇ ಇಂತಹ ಕಾರ್ಯಕ್ಕೆ ಮುಂದಾಗಿದ್ದಾರೆ. ಒಟ್ಟಿನಲ್ಲಿ ಹುಬ್ಬಳ್ಳಿಯ ಸಾಧಕನ ಪರಿಶ್ರಮ ಮುಂದಿನ ದಿನಗಳಲ್ಲಿ ಸೇನೆಯ ಬತ್ತಳಿಕೆಯನ್ನು ಸೇರುವುದು ವಿಶೇಷವಾಗಿದೆ. ಈ ಮೂಲಕ ವಾಣಿಜ್ಯನಗರಿ ಹುಬ್ಬಳ್ಳಿಯ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಲಿದ್ದಾನೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications