ಹುಬ್ಬಳ್ಳಿಯಲ್ಲಿ ಬಾಬಾ ರಾಮದೇವ್ ಸುದ್ದಿಗೋಷ್ಠಿ ಮಾಡಿದ್ದು ಏನಕ್ಕೆ?
ಹುಬ್ಬಳ್ಳಿ, ಜನವರಿ 29: ಜನವರಿ 30 ರಿಂದ ಫೆ 3 ರವರೆಗೆ ಹುಬ್ಬಳ್ಳಿಯ ಗದಗ ರಸ್ತೆಯ ರೈಲು ಮೈದಾನದಲ್ಲಿ ಬೃಹತ ಯೋಗ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಯೋಗಗುರು ಬಾಬಾ ರಾಮದೇವ್ ತಿಳಿಸಿದರು.
ಬುಧವಾರ ಹುಬ್ಬಳ್ಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಪ್ರತಿಯೊಂದು ರೋಗದಿಂದ ಮುಕ್ತಿ ಹೊಂದಲು ಯೋಗ ಸೂಕ್ತವಾದ ಮಾರ್ಗವಾಗಿದೆ. ಯೋಗಕ್ಕೆ ಯಾವುದೇ ಜಾತಿ ಮತ ಭೇದವಿಲ್ಲ. ಪ್ರತಿಯೊಬ್ಬರು ಕೂಡ ಯೋಗವನ್ನು ಮಾಡುವ ಮೂಲಕ ರೋಗ ಮುಕ್ತ ಜೀವನ ನಡೆಸಬಹುದು'' ಎಂದರು.
''ಎಲ್ಲ ಜಾತಿ ಧರ್ಮದವರಿಗೆ ನಾವು ಆರೋಗ್ಯ ಭಾಗ್ಯ ನೀಡಿದ್ದೇವೆ. ಕೋಟ್ಯಂತರ ಜನ ನಮ್ಮಿಂದ ಎಲ್ಲವನ್ನೂ ಕಲಿತಿದ್ದಾರೆ ಎಂದ ಅವರು, ರಕ್ತದೊತ್ತಡ, ಮಧುಮೇಹ ಸೇರಿದಂತೆ ಅನೇಕ ಖಾಯಿಲೆ ಹೋಗಿಸಿದ್ದೇವೆ.ವಿಶ್ವದಲ್ಲಿ ಅತಿ ದೊಡ್ಡ ರೋಗಗಳು ಕಡಿಮೆ ಆಮ್ಲಜನಕ ರವಾನೆಯಿಂದ ಬರುತ್ತಿದ್ದು, ಇದಕ್ಕಾಗಿ ವಿದೇಶಿ ವೈದ್ಯರಿಗೆ ನೊಬೆಲ್ ಪ್ರಶಸ್ತಿ ನೀಡಲಾಗಿದೆ'' ಎಂದರು.

ಹುಬ್ಬಳ್ಳಿಯ ಗದಗ ರಸ್ತೆಯ ರೈಲು ಮೈದಾನದಲ್ಲಿ ನಡೆಯುವ ಬೃಹತ ಯೋಗ ಶಿಬಿರದಲ್ಲಿ ಹೆಚ್ಚು ಜನ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು. ಉದ್ಯಮಿ ಆನಂದ ಸಂಕೇಶ್ವರ ಹಾಗೂ ಪತಂಜಲಿ ಯೋಗ ಪೀಠದ ಕರ್ನಾಟಕ ಪ್ರಭಾರಿ ಭವ್ವರಲಾಲ್ ಆರ್ಯ ಇದ್ದರು.












Click it and Unblock the Notifications