ಮೋದಿ-ನೆಹರೂ ಹೋಲಿಕೆ ಅಸಾಧ್ಯ: ಸಿದ್ದರಾಮಯ್ಯಗೆ ಪ್ರಹ್ಲಾದ್ ಜೋಶಿ ತಿರುಗೇಟು
ಹುಬ್ಬಳ್ಳಿ,ಮೇ 27: ನಾವು ಯಾವತ್ತಿಗೂ ನೆಹರುರನ್ನು ಮೋದಿಯವರ ಜೊತೆ ಕಂಪೇರ್ ಮಾಡೇ ಇಲ್ಲ, ಮೋದಿ ಮೋದಿಯೇ, ನೆಹರು ನೆಹರುನೇ ಎಂದು ಹೇಳುವ ಮೂಲಕ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಾಂಗ್ರೆಸ್‌ನ ಸಿದ್ಧರಾಮಯ್ಯಗೆ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಜವಾಹಾರ್ ಲಾಲ್ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಸಿದ್ದರಾಮಯ್ಯ, ನೆಹರುಗು ನರೇಂದ್ರ ಮೋದಿಗೂ ಹೋಲಿಕೆ ಮಾಡುವುದು ಸರಿಯಲ್ಲ, ಅವರಿಬ್ಬರ ನಡುವೆ ಆಕಾಶ ಭೂಮಿಯಷ್ಟು ನಡುವಿನ ಅಂತರವಿದೆ ಎಂದು ಹೇಳಿದ್ದರು.
ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ವೈಚಾರಿಕತೆ ಇರುವ ನಾಯಕ. ಸಾಕಷ್ಟು ಬಜೆಟ್ ಮಂಡಿಸಿದವರು, ಅವರ ವೈಚಾರಿಕತೆ ಅವರಿಗೆ ಇರಲಿ. ರಾಹುಲ್ ಗಾಂಧಿ ಮೆಚ್ಚಿಸಲು ಈ ರೀತಿ ಮಾತನಾಡುವುದು ಸರಿಯಲ್ಲ, ಈ ದೇಶದಲ್ಲಿ ಹೆಡ್ಗೆವಾರ್ ಆರ್‌ಎಸ್ಎಸ್ ಸ್ಥಾಪಿಸಿದ್ದು, ಅವರೊಬ್ಬ ದೇಶದ ಅಪ್ರತಿಮ ನಾಯಕ. ಮುಸ್ಲಿಂ ತುಷ್ಟಿಕರಣಕ್ಕೋಸ್ಕರ ಬಾಯಿಗೆ ಬಂದ ಹಾಗೆ ಸಿದ್ದರಾಮಯ್ಯ ಹೇಳಿಕೆ ನೀಡುತ್ತಿದ್ದಾರೆ ಎಂದು ಹೇಳುವ ಮೂಲಕ ಆರ್‌ಎಸ್‌ಎಸ್‌ನವರು ನಮ್ಮ ದೇಶದವರಲ್ಲ ಎನ್ನುವ ಸಿದ್ದರಾಮಯ್ಯ ಹೇಳಿಕೆ ತೀರುಗೇಟು ನೀಡಿದರು.

ಸಿದ್ದರಾಮಯ್ಯ ಮೊದಲು ಹೆಡ್ಗೇವಾರ್ ಯಾರು? ಏನು ಮಾಡಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳಲಿ. ಎಲ್ಲ ತಿಳಿದುಕೊಂಡೂ ಮಾತನಾಡಿದರೆ ಅದು ತಪ್ಪು, ಅವರು ಸೇವಾದಳದಲ್ಲಿದ್ದವರು ಎನ್ನುವುದು ಗೊತ್ತಿಲ್ವಾ, ಅವರೊಬ್ಬರು ಅಪ್ರತಿಮ ದೇಶಭಕ್ತರು. ಸಿದ್ದರಾಮಯ್ಯಗೆ ಆರ್‌ಎಸ್‌ಎಸ್ ಬಗ್ಗೆ ಗೊತ್ತಿಲ್ಲ ಅಂದರೆ ಅವರ ಮೇಲೆ ಅನುಕಂಪವಿದೆ ಎಂದು ಲೇವಡಿ ಮಾಡಿದರು.
ಈ ಹಿಂದೆ ಕಾಂಗ್ರೆಸ್ ಪಠ್ಯಪುಸ್ತಕದಲ್ಲಿ ಕಮ್ಯುನಿಷ್ಠರ ವಿಚಾರಧಾರೆ ಹಾಕಿದ್ದರು. ಸಿದ್ದರಾಮಯ್ಯ ತಾವೊಬ್ಬರೇ ತಜ್ಞರು ಅಂದುಕೊಂಡಿದ್ದಾರೆ. ಅದನ್ನ ಬಿಟ್ಟು ಹೊರಗಡೆ ಬರಬೇಕು. ಪ್ರಧಾನಿಯನ್ನ ಕೂಡ ಬಾಯಿಗೆ ಬಂದಾಗೇ ಬೈದಿದ್ದರು. ಕೆಲ ಗದ್ಯವನ್ನ ಇವರೇ ತೆಗೆದು, ಇವರೇ ಡ್ರಾಮ ಮಾಡುತ್ತಿದ್ದಾರೆ.
ಸಿದ್ದರಾಮಯ್ಯನವರೇ ಜನ ನಿಮ್ಮನ್ನ ತಿರಸ್ಕರಿಸಿದ್ದಾರೆ. ಯುಪಿನಲ್ಲಿ 388 ಕ್ಷೇತ್ರದ ನಿಮ್ಮ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಜನ ನಿಮ್ಮನ್ನ ಮೂಲೆಗೆ ತಳ್ಳಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ಸಿದ್ದರಾಮಯ್ಯ ಮತ್ತೆ ಸಿಎಂ ಆಗಲ್ಲ
ಗುರುವಾರ ಧಾರವಾಡದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಜೋಶಿ, ಅಲ್ಲು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದರು. ಕಾಂಗ್ರೆಸ್ ಸಿದ್ದರಾಮಯ್ಯನವರೇ ನಿಮ್ಮನ್ನು ಕಾಂಗ್ರೆಸ್ ಎರಡನೇ ಬಾರಿ ಮುಖ್ಯಮಂತ್ರಿಯನ್ನಾಗಿ ಮಾಡಲ್ಲ. ನೀವು ರಾಹುಲ್ ಗಾಂಧಿ ಮುಂದೆ ಕೈಕಟ್ಟಿ ನಿಲ್ಲುತ್ತೀರಿ. ನಾಣು ನಿಮಗೆ ಪ್ರಶ್ನೆ ಮಾಡುತ್ತೇನೆ, 58 ವರ್ಷಗಳಲ್ಲಿ ಅಧಿಕಾರ ನಡೆಸಿರುವ ನೀವು, ಭಗತ್ ಸಿಂಗ್ , ಸುಭಾಷ್ ಚಂದ್ರಬೋಷ್ ಹೆಸರನ್ನು ಎಷ್ಟು ಯೋಜನೆಗಳಿಗೆ ಇರಿಸಿದ್ದೀರಿ ಎಂಬುದನ್ನು ತಿಳಿಸಿ, ದೆಹಲಿಯೊಂದರಲ್ಲೇ 298 ಯೋಜನೆಗಳಿಗೆ ಇಂದಿರಾ ಗಾಂಧಿ, ನೆಹರೂ, ರಾಜೀವ್ ಗಾಂಧಿ ಹೆಸರನ್ನು ಇಟ್ಟಿದ್ದೀರಿ ಎಂದು ಟೀಕಿಸಿದ್ದರು
(ಒನ್ಇಂಡಿಯಾ ಸುದ್ದಿ)












Click it and Unblock the Notifications