ರಾಜೀವ್ ಚಂದ್ರಶೇಖರ್ ಆಯ್ಕೆ ಸಂತಸ ತಂದಿದೆ: ವಿಜಯ ಸಂಕೇಶ್ವರ್
ಹುಬ್ಬಳ್ಳಿ, ಮಾರ್ಚ್ 13: ಬಿಜೆಪಿಯಿಂದ ರಾಜ್ಯಸಭಾ ಟಿಕೆಟ್ ಆಕಾಂಕ್ಷಿಯಾಗಿದ್ದ ವಿಆರ್ ಎಲ್ ಸಮೂಹ ಸಂಸ್ಥೆಯ ಸಂಸ್ಥಾಪಕ ವಿಜಯ ಸಂಕೇಶ್ವರ್ ಹುಬ್ಬಳ್ಳಿಯಲ್ಲಿ ಪತ್ರಿಕಾ ಗೋಷ್ಠಿ ನಡೆಸುತ್ತಿದ್ದಾರೆ.
ವಿಜಯ ಸಂಕೇಶ್ವರ್ ಅವರು ಬಿಜೆಪಿಯಿಂದ ರಾಜ್ಯಸಭಾ ಟಿಕೆಟ್ ಆಕಾಂಕ್ಷಿ ಆಗಿದ್ದರು. ಆದರೆ ಕೊನೆಯ ಕ್ಷಣದಲ್ಲಿ ರಾಜ್ಯಸಭಾ ಟಿಕೆಟ್ ಅನ್ನು ರಾಜೀವ್ ಚಂದ್ರಶೇಖರ್ ಅವರಿಗೆ ನೀಡಲಾಗಿತ್ತು. ರಾಜೀವ್ ಅವರಿಗೆ ಟಿಕೆಟ್ ನೀಡಿದ ಬೆನ್ನಲ್ಲೆ ವಿಜಯ ಸಂಕೇಶ್ವರ್ ಅವರು ಸುದ್ದಿಗೋಷ್ಠಿ ಕರೆದಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು.
59 ರಾಜ್ಯಸಭಾ ಸೀಟುಗಳಿಗೆ ಮಾ.23 ರಂದು ಮತದಾನ ನಡೆಯಲಿದೆ. ಕರ್ನಾಟಕ ಬಿಜೆಪಿಯಿಂದ ವಿಜಯ ಸಂಕೇಶ್ವರ್ ಪ್ರಬಲ ಟಿಕೇಟ್ ಆಕಾಂಕ್ಷಿಯಾಗಿದ್ದರು. ಆದರೆ ಬಿಜೆಪಿ ಉದ್ಯಮಿ ರಾಜೀವ್ ಚಂದ್ರಶೇಖರ್ ಅವರನ್ನು ತನ್ನ ಅಭ್ಯರ್ಥಿಯನ್ನಾಗಿ ಘೋಷಿಸಿದ್ದರಿಂದ ಅವರಿಗೆ ಟಿಕೇಟ್ ಕೈತಪ್ಪಿದೆ. ಕನ್ನಡಿಗರಿಗೇ ಟಿಕೇಟ್ ನೀಡಬಹುದಿತ್ತು ಎಂಬ ಮಾತು ಹಲವೆಡೆಯಿಂದ ಕೇಳಿಬರುತ್ತಿದೆ.

ವಿಜಯ ಸಂಕೇಶ್ವರ್ ಅವರು ಬಿಜೆಪಿ ತ್ಯಜಿಸುತ್ತಾರೆ ಎಂಬ ಊಹಾಪೋಹಗಳಿಗೆ ಅವರು ತೆರೆ ಎಳೆದಿದ್ದಾರೆ. ಸಂಕೇಶ್ವರ್ ಅವರು ಬಿಜೆಪಿಯೊಂದಿಗೇ ಮುಂದುವರೆಯಲಿದ್ದಾರೆ.
ರಾಜ್ಯಸಭಾ ಚುನಾವಣೆ ಟಿಕೆಟ್‌ಗೆ ನಾನು ಅರ್ಜಿ ಹಾಕಿಲ್ಲ ಹಾಗಾಗಿ ನನಗೆ ಅಸಮಾಧಾನ ಆಗಿಲ್ಲ, ರಾಜೀವ್ ಚಂದ್ರಶೇಖರ್ ಅವರು ರಾಜ್ಯಸಭೆಗೆ ಆಯ್ಕೆ ಆಗಿರುವುದು ಸಂತೋಷವಾಗಿದೆ.
ಬಿಜೆಪಿ ಜೊತೆಗೇ ಇರುವ ಸುಳಿವು ಕೊಡುತ್ತಿರುವ ವಿಜಯ ಸಂಕೇಶ್ವರ್, ಬಿಜೆಪಿಗೆ ಗುಡ್‌ಬೈ ಇಲ್ಲ. ಮೋದಿ ಹಾಗೂ ಯಡಿಯೂರಪ್ಪ ಅವರನ್ನು ಹೊಗಳುತ್ತಿರುವ ವಿಜಯ ಸಂಕೇಶ್ವರ.
ಕಾಂಗ್ರೆಸ್ ಹಠಾವೊ ಅಭಿಯಾನದಲ್ಲಿ ಗಂಭೀರವಾಗಿ ತೊಡಗಿಕೊಳ್ಳಲಿದ್ದೇನೆ, ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು, ಹಾಗೂ ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡುವುದಕ್ಕೆ ನಾನು ಕಾರ್ಯ ಮಾಡುತ್ತೇನೆ.
ರಾಜೀವ್ ಚಂದ್ರಶೇಖರ್ ಅವರ ಕರ್ನಾಟಕಕ್ಕೆ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ. ಅವರ ತಂದೆಯವರು ಆರ್‌ಎಸ್‌ಎಸ್ ಮತ್ತು ಜನಸಂಘಕ್ಕಾಗಿ ದುಡಿದಿದ್ದಾರೆ.
ನಾನು ರಾಜ್ಯಸಭಾ ಟಿಕೆಟ್ ಕೇಳಿರಲಿಲ್ಲ, ಆದರೆ ಯಡಿಯೂರಪ್ಪ ಅವರೇ ಪ್ರೊಫೈಲ್ ಕೊಡಲು ಹೇಳಿದ್ದರು.
ನಿಮ್ಮದು ಮತ್ತು ರಾಜೀವ್ ಚಂದ್ರಶೇಖರ್ ಅವರ ಹೆಸರು ಶಾರ್ಟ್ ಲಿಸ್ಟ್ ಆಗಿದೆ ಎಂದು ಜಗದೀಶ್ ಶೆಟ್ಟರ್ ಅವರೂ ಕೂಡಾ ಹೇಳಿದ್ದರು.











Click it and Unblock the Notifications