Get Updates
Get notified of breaking news, exclusive insights, and must-see stories!

ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಏನೇನಿರಲಿದೆ?

ಹುಬ್ಬಳ್ಳಿ, ಡಿಸೆಂಬರ್ 09 : ಕಾಂಗ್ರೆಸ್ ಪಕ್ಷವು ವಿಧಾನಸಭೆ ಚುನಾವಣೆಗೆ ಪರಿಣಾಮಕಾರಿ ಪ್ರಣಾಳಿಕೆ ತರಲು ತಯಾರಿ ನಡೆಸಿದ್ದು, ಇದಕ್ಕಾಗಿ ಕೆಲವು ಮಂದಿ ಮುಖಂಡರು ರಾಜ್ಯ ಪ್ರವಾಸ ಕೈಗೊಳ್ಳುತ್ತಿದ್ದಾರೆ.

ಈ ವಿಷಯವನ್ನು ಪ್ರಣಾಳಿಕಾ ಸಮಿತಿ ಅಧ್ಯಕ್ಷರಾಗಿರುವ ಎಂ.ವೀರಪ್ಪ ಮೋಯ್ಲಿ ಅವರು ಸ್ಪಷ್ಟಪಡಿಸಿದ್ದು. ಹುಬ್ಬಳ್ಳಿಗೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

2018 ರ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪ್ರಣಾಳಿಕೆ ತಯಾರಿ ನಡೆದಿದ್ದು, ಈ ಸಂಬಂಧ ರಾಜ್ಯ ಪ್ರವಾಸ ಕೈಗೊಂಡಿದ್ದು ಜನರ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ ಎಂದಿದ್ದಾರೆ.

Veerappa Moily is all ready to prepare Manifesto

ಈ ಭಾರಿಯ ಪ್ರಣಾಳಿಕೆಯು ರಾಜ್ಯದ ಎಲ್ಲ ಭಾಗಗಳ ಜನಗಳನ್ನೂ ಗಮನದಲ್ಲಿಟ್ಟುಕೊಂಡು ಮಾಡಲಾಗುತ್ತಿದ್ದು, ಜೀವನ ಮೌಲ್ಯ ಸುಧಾರಣೆ, ಬಡತನ ನಿವಾರಣೆ, ಗ್ರಾಮೋದ್ಧಾರಗಳು ಪ್ರಣಾಳಿಕೆಯ ಪ್ರಮುಖ ವಿಷಯಗಳಾಗಿರುತ್ತವೆ ಎಂದು ಅವರು ಹೇಳಿದ್ದಾರೆ.

ಮೊದಲಿಗೆ ಪ್ರಣಾಳಿಕೆಯ ಕಡರು ಸಿದ್ದಪಡಿಸಿ ಜನವರಿ 15ಕ್ಕೆ ಕೆಪಿಸಿಸಿ ಅಧ್ಯಕ್ಷರಿಗೆ ಹಾಗೂ ಮುಖ್ಯಮಂತ್ರಿಗೆ ಸಲ್ಲಿಸಿ ಒಪ್ಪಿಗೆ ಪಡೆಯಲಾಗುತ್ತದೆ, ಆ ನಂತರ ಪ್ರಣಾಳಿಕೆ ಘೋಷಣೆ ಆಗಲಿದೆ ಎಂದು ಅವರು ಹೇಳಿದ್ದಾರೆ.

ಸಿದ್ದರಾಮಯ್ಯ ಅವರು ಜನಪರ ಕಾರ್ಯಗಳೇ ಕಾಂಗ್ರೆಸ್ ಗೆ ಚುನಾವಣೆಯಲ್ಲಿ ಬಲವಾಗಲಿದೆ ಹಾಗಾಗಿ ಅವರ ಅಭಿವೃದ್ಧಿ ಕಾರ್ಯಗಳನ್ನು ಪ್ರತಿಫಲಿಸುವಂತಹಾ ಹಾಗೂ ಅದಕ್ಕೆ ಪೂರಕವಾದ ಅಂಶಗಳುಳ್ಳ ಪ್ರಣಾಳಿಕೆಯನ್ನು ಈ ಬಾರಿ ರಾಜ್ಯದ ಜನತೆ ನೋಡಲಿದ್ದಾರೆ ಎಂದು ಅವರು ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+