ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುತ್ತೈದೆಯರಿಗೆ ಉಡಿ ತುಂಬುವ ವಿಶಿಷ್ಟ ಕಾರ್ಯಕ್ರಮ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಆಗಸ್ಟ್, 10: ಅತ್ಯಂತ ಜಾಗೃತ ಸ್ಥಳ ಎಂದೇ ಹೆಸರಾದ ಹಳೇ ಹುಬ್ಬಳ್ಳಿಯ ವೀರಭದ್ರೇಶ್ವರ ದೇವಸ್ಥಾನದಲ್ಲಿ ಬುಧವಾರ ವಿಶಿಷ್ಟ ಕಾರ್ಯಕ್ರಮ ಆಯೋಜಿಸಲಾಗಿತ್ತು. 3,500 ಮುತ್ತೈದೆಯರಿಗೆ ಉಡಿ ತುಂಬಲಾಯಿತು. ಇದೇ ವೇಳೆ ಕೋಟಿ ಬಿಲ್ವಾರ್ಚನೆ ಕೂಡ ನಡೆಯಿತು.

ಇಂಥ ಅದ್ಭುತವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿದವರು ಇಂಚಲದ ಶಿವಾನಂದ ಭಾರತಿ ಸ್ವಾಮೀಜಿ ಹಾಗೂ ಭಾವೈಕ್ಯ ಮಠ ಎಂದೇ ಹೆಸರಾಗಲು ಕಾರಣರಾದ ಶಿರಹಟ್ಟಿ ಫಕೀರ ಸಿದ್ಧರಾಮ ಸ್ವಾಮೀಜಿ.

Unique program on women, Hubballi

ಒಂದೇ ಸ್ಥಳದಲ್ಲಿ ಇಷ್ಟು ಸಂಖ್ಯೆಯ ಮಹಿಳೆಯರಿಗೆ ಉಡಿ ತುಂಬುವಂಥ ಕಾರ್ಯಕ್ರಮ ವೀಕ್ಷಿಸುವುದಕ್ಕೆ ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು. ಇದೇ ವೇಳೆ ದಂಪತಿಗಳು ಶ್ರದ್ಧಾ-ಭಕ್ತಿಯಿಂದ ಕೋಟಿ ಬಿಲ್ವಾರ್ಚನೆ ಕೂಡ ನೆರವೇರಿಸಿದರು.

.ದೇವಸ್ಥಾನದಲ್ಲಿನ ವೀರಭದ್ರೇಶ್ವರ ಮೂರ್ತಿಗೆ ವಿಶಿಷ್ಟ ಅಲಂಕಾರ ಮಾಡಲಾಗಿತ್ತು. ಚಂದ್ರಶೇಖರ ಮಟ್ಟಿ, ಎಸ್.ಎಂ.ರುದ್ರಯ್ಯ, ಬಸವರಾಜ ಚಿಕ್ಕಮಠ, ಚನ್ನಬಸಪ್ಪ ಮಂಟೂರ ಮತ್ತಿತರ ಭಕ್ತವೃಂದ ಪಾಲ್ಗೊಂಡಿದ್ದರು.

English summary
Unique program on women and koti bilwarchane organised at Veerabhadreshwara temple in Old Hubballi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X