ಪಾಕ್ ಆಕ್ರಮಿತ ಕಾಶ್ಮೀರ ಕಾಂಗ್ರೆಸ್‌ನ ಕೊಡುಗೆ-ಶೋಭಾ ಕರದ್ಲಾಂಜೆ

ಹುಬ್ಬಳ್ಳಿ, ಅಕ್ಟೋಬರ್‌ 22 : ಎಐಸಿಸಿ ವರಿಷ್ಠ ರಾಹುಲ್ ಗಾಂಧಿ ಭಾರತ ಜೋಡೋ ಪಾದಯಾತ್ರೆ ಮಾಡುವುದು ಭಾರತದ ಒಳಗೆ ಅಲ್ಲ. ಭಾರತದ ಗಡಿಯಲ್ಲಿ ರಾಹುಲ್ ಗಾಂಧಿ ಪಾದಯಾತ್ರೆ ಮಾಡಲಿ. ಆಗ ದೇಶಕ್ಕಾಗಿ ರಾಹುಲ್ ಗಾಂಧಿ ಏನು ಮಾಡಿದ್ದಾರೆ ಅಂತಾ ಗೊತ್ತಾಗುತ್ತದೆ ಎಂದು ಕೇಂದ್ರ ಸಚಿವೆ ಶೋಭಾ ಕರದ್ಲಾಂಜೆ ಕಾಂಗ್ರೆಸ್‌ ಪಾದಯಾತ್ರೆ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಪಾದಯಾತ್ರೆ ಒಂದು ಅಣುಕು ಮಾತ್ರ. ಪಾಕ್ ಆಕ್ರಮಿತ ಕಾಶ್ಮೀರ ಕಾಂಗ್ರೆಸ್‌ನ ಕೊಡುಗೆ. ಕಾಂಗ್ರೆಸ್ ಆಡಳಿತದಲ್ಲಿ ಏ‌ನೆಲ್ಲಾ ಮಾಡಲಾಯಿತು ಎಂಬುದು ಗೊತ್ತಿದೆ. ಭಾರತದ ವಿಭಜನೆಗೆ ಕಾಂಗ್ರೆಸ್‌ಯೇ ಕಾರಣ. ರಾಹುಲ್ ಗಾಂಧಿ ಪಾಕ್ ಆಕ್ರಮಿತ ಜಾಗವನ್ನು ಭಾರತಕ್ಕೆ ಜೋಡಿಸಬೇಕಾಗಿದೆ. ಹಿಮಾಲಯದಿಂದ ಬಿಟ್ಟು ಹೋದ ಜಾಗವನ್ನು ಮೊದಲು ಭಾರತಕ್ಕೆ ಜೋಡಿಸಲಿ ಎಂದು ಕಾಂಗ್ರೆಸ್‌ ವಿರುದ್ಧ ಲೇವಡಿ ಮಾಡಿದರು.

ಮಾತು ಮುಂದುವರಿಸಿದ ಶೋಭಾ ಕರದ್ಲಾಂಜೆ, ಭಾರತದ ಬಹುಭಾಗ ಚೀನಾ, ಪಾಕಿಸ್ತಾನ ಸೇರಿದಂತೆ ಬೇರೆ ಬೇರೆ ಕಡೆ ಹರಿದು ಹಂಚಿ ಹೋಗಲು ಕಾಂಗ್ರೆಸ್ ಪಕ್ಷವೇ ಕಾರಣ. ಹಿಮಾಲಯದ ಬಹುಭಾಗವನ್ನು ಅಂದು ನೆಹರು ಕಾಲದಲ್ಲಿ ಚೀನಾಗೆ ಬಿಟ್ಟು ಕೊಟ್ಟರು. ಇದು ಕಾಂಗ್ರೆಸ್ ಮಾಡಿರುವ ಬೃಹತ್ ಕಾರ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

Union Minister Shobha Karandlaje Sarcasm On Congress Bharat Jodo Yatra At Hubballi

ರೈತರಿಗೆ ಕೇಂದ್ರ ಸರ್ಕಾರ ನೀಡಿರುವ ಅನುದಾನಗಳ ಬಗ್ಗೆ ಮಾತನಾಡಿದ ಅವರು, ಪ್ರಧಾನ ಮಂತ್ರಿ ಸಮ್ಮಾನ ಯೋಜನೆ ಅಡಿಯಲ್ಲಿ 11 ಕೋಟಿ ರೈತರಿಗೆ 2 ಲಕ್ಷ 20 ಲಕ್ಷ ಸಾವಿರ ಕೋಟಿ 12 ಕಂತುಗಳಲ್ಲಿ ರೈತರ ಖಾತೆಗೆ ನೇರವಾಗಿ ಹಣ ಸಂದಾಯ ಮಾಡಿದ್ದಾರೆ. ಇತ್ತೀಚಿಗೆ ದೆಹಲಿಯಲ್ಲಿ ನಡೆದ ರೈತರ ಸಮಾವೇಶದಲ್ಲಿ 12ನೇ ಕಂತಿನ 16 ಸಾವಿರ ಕೋಟಿ ಹಣ ಹಾಕಿದ್ದಾರೆ. ಬೆಳೆ ವಿಮೆಯನ್ನು ನಮ್ಮ ಸರ್ಕಾರದಲ್ಲಿ ಸುಲಭದಲ್ಲಿ ಸಿಗುವಂತೆ ಮಾಡಲಾಗಿದೆ ಎಂದರು.

ಇನ್ನು ನಮ್ಮ ದೇಶದಲ್ಲಿ ಈಗ ಹೆಚ್ಚುವರಿಯಾಗಿ ಆಹಾರ ಧಾನ್ಯ, ತರಕಾರಿಗಳನ್ನು ಬೆಳೆಯುತ್ತಿದ್ದೇವೆ. ದೇಶದ 135 ಕೋಟಿ ಜನಕ್ಕೆ ಸಾಕಾಗುವಷ್ಟು ಆಹಾರ ಧಾನ್ಯ ಬೆಳೆಯಲಾಗುತ್ತದೆ. ಒಂದು ಎಫ್‌ಎಓ ಗಳಿಗೆ, ಎಗ್ತಿ ಸ್ಟಾಟ್ರ್ ಆಪ್, ಎಗ್ರೋಪ್ರೋಸಿಸ್‌ಗೆ, ಇಂಡಸ್ಟ್ರೀಯಲ್‌ಗೆ ಹೆಚ್ಚು ಆದ್ಯತೆ ಕೊಡಲಾಗುತ್ತದೆ. ನಮ್ಮ ದೇಶದ ರೈತರು ಬೆಳೆಯುವ ಆಹಾರ ಧಾನ್ಯ ಹಾಗೂ ತರಕಾರಿ, ಹಣ್ಷು ಹಂಪಲುಗಳನ್ನು ವಿದೇಶಿಗಳಿಗೆ ರಪ್ತು ಮಾಡುವತ್ತಾ ಒತ್ತು ನೀಡಲಾಗುತ್ತದೆ. ಬೇರೆ ಬೇರೆ ದೇಶಗಳಿಗೆ ನಮ್ಮ ಹಣ್ಣು ಹಂಪಲು ರಪ್ತಾಗಬೇಕು .ಈ ನಿಟ್ಟಿನಲ್ಲಿ ಬೇರೆ ಬೇರೆ ದೇಶಗಳ ಕೃಷಿ ಸಾಧಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುತ್ತದೆ. 2023 ರಲ್ಲಿ ಅಂತಾರಾಷ್ಟ್ರೀಯ ಮಿಲ್ಲರ್ ನಡೆಸಲು ಅವಕಾಶ ನಮಗೆ ಸಿಕ್ಕಿದ್ದು ನಮ್ಮ ಹೆಮ್ಮೆ ಎಂದು ಸಂತಸ ವ್ಯಕ್ತಪಡಿಸಿದರು.

ನಮ್ಮ ದೇಶದಲ್ಲಿ ರಾಗಿ, ಆಹಾರ ಧಾನ್ಯ ಪದಾರ್ಥಗಳನ್ನು, ಸಿರಿ ಧಾನ್ಯಗಳನ್ನು ಪೋಕಸ್ ಮಾಡಲಿಕ್ಕೆ ಅವಕಾಶ ಸಿಕ್ಕಿದೆ. ಅದನ್ನು ಸದುಪಯೋಗ ಪಡಿಸಿಕೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದವಸ ಧಾನ್ಯಗಳನ್ನು ಪರಿಚಯ ಮಾಡಿಕೊಡಲಾಗುತ್ತದೆ. ಕೃಷಿ ಆಹಾರ ಧಾನ್ಯಗಳನ್ನ ಹೆಚ್ಚು ಹೆಚ್ಚು ಉತ್ಪಾದನೆಗೆ ಹಾಗೂ ಅವುಗಳಿಂದ ರೈತರಿಗಾಗುವ ಸಹಾಯಕ್ಕೆ ರಪ್ತು ಹಾಗೂ ಆಮುದು ಒಂದೇ ದಾರಿಯಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರದ್ಲಾಜೆ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+