ಡಿ.23ರಂದು ಕ್ಷತ್ರೀಯ ಮರಾಠಾ ಸಮಾಜ ವತಿಯಿಂದ ಮೌನ ಪ್ರತಿಭಟನೆ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಡಿಸೆಂಬರ್, 12: ಕ್ಷತ್ರೀಯ ಮರಾಠಾ ಸಮಾಜವನ್ನು ಪ್ರವರ್ಗ 2ಎಗೆ ಸೇರಿಸುವಂತೆ ಒತ್ತಾಯಿಸಿ ಡಿಸೆಂಬರ್ 23ರಂದು ಧಾರವಾಡದಲ್ಲಿ ಬೃಹತ್ ಮೌನ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಮರಾಠಾ ಕ್ರಾಂತಿ ಮೋರ್ಚಾ ಅಧ್ಯಕ್ಷ ಸುನೀಲ್ ದಳವಿ ಹೇಳಿದರು.

ಸೋಮವಾರ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷತ್ರೀಯ ಮರಾಠಾ ಸಮಾಜವನ್ನು ಪ್ರವರ್ಗ 2ಎಗೆ ಸೇರಿಸಬೇಕು, ಛತ್ರಪತಿ ಶಿವಾಜಿ ಮಹಾರಾಜರ ಅಧ್ಯಯನ ಪೀಠ ಸ್ಥಾಪನೆ.

ದಾವಣಗೆರೆ ಜಿಲ್ಲೆಯಲ್ಲಿರುವ ಹೊದಿಗೆರೆ ಗ್ರಾಮದಲ್ಲಿರುವ ಶಹಾಜಿ ಮಹಾರಾಜರ ಸಮಾಧಿಯನ್ನು ರಾಷ್ಟ್ರೀಯ ಸ್ಮಾರಕ ಮಾಡಬೇಕು. ಹಾಗೂ ಮರಾಠಾ ಸಮಾಜದ ವಿವಿಧ ಬೇಡಿಕೆಗಳ ಕುರಿತು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುವುದು ಎಂದರು.

The Maratha community will protest on december 23 at Dharwad

ಈ ಮೌನ ಪ್ರತಿಭಟನೆಯಲ್ಲಿ ರಾಜ್ಯದಾದ್ಯಂತ ಸುಮಾರು 50 ಸಾವಿರಕ್ಕೂ ಹೆಚ್ಚು ಜನರು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಕೆ.ಸಿ.ವೀರೇಂದ್ರ ವಿಚಾರಣೆ: ಹವಾಲಾ ಹಗರಣ ಮತ್ತು ಕ್ಯಾಸಿನೋ ವ್ಯವಹಾರ ಮಾಡುತ್ತಿದ್ದ ಚಿತ್ರ ನಟ ದೊಡ್ಡಣ್ಣ ಅಳಿಯ ಚಳ್ಳಕೇರಿಯ ಕೆ.ಸಿ.ವೀರೇಂದ್ರ ಹಾಗೂ ನಗರದ ಸಮುಂದರಸಿಂಗ್ ಅವರನ್ನು ಸ್ಥಳೀಯ ಆದಾಯ ತೆರಿಗೆ ಇಲಾಖಾ ಕಚೇರಿಯಲ್ಲಿ ಸೋಮವಾರ ವಿಚಾರಣೆ ನಡೆಸಲಾಯಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Maratha community will protest on december 23 at Dharwad Maratha revolution Morcha president Sunil dalavi said on Monday in Hubballi.
Please Wait while comments are loading...