ಹುಬ್ಬಳ್ಳಿ: ಸಂಚಾರ ಉಲ್ಲಂಘನೆ, ಒಂದೇ ದಿನ 2ಲಕ್ಷ ರೂ. ದಂಡ ವಸೂಲಿ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಫೆಬ್ರವರಿ, 14 : ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಪೊಲೀಸರು ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಸಾರಿರುವ ಸಮರದಿಂದಾಗಿ ಸೋಮವಾರ ಒಂದೇ ದಿನದಲ್ಲಿ 2 ಲಕ್ಷ ರೂಗಿಂತ ಹೆಚ್ಚು ದಂಡ ವಸೂಲಿ ಮಾಡಿದ್ದಾರೆ.

ಕಳೆದ ಹಲವಾರು ದಿನಗಳಿಂದ ಮೊಬೈಲ್ ಆಪ್ ಮೂಲಕ ಸಂಚಾರ ನಿಯಮ ಉಲ್ಲಂಘಿಸುವ ಸವಾರರ ಫೋಟೋ ತೆಗೆದು ನೇರವಾಗಿ ಪೊಲೀಸ್ ಕಂಟ್ರೋಲ್ ರೂಮ್ ನಿಂದ ವಾಹನ ಸವಾರರ ಮನೆಗೆ ನೋಟಿಸ್ ಕಳಿಸಲಾಗುತ್ತಿದೆ.[ಹುಬ್ಬಳ್ಳಿ ಸಂಚಾರಿ ಪೊಲೀಸ್ರ ಕಣ್ತಪ್ಪಿಸಿದ್ರೆ 'ಟ್ರಾಫಿಕ್ ಆಪ್' ಇದೆ ಜೋಕೆ!]

The Hubballi-Dharwad Traffic Police collected a Rs 2 lakh penalty from violators in 1 day

ಪ್ರತಿ ನಿತ್ಯವೂ ಕನಿಷ್ಠ ಒಂದು ಲಕ್ಷಕ್ಕಿಂತ ಹೆಚ್ಚು ದಂಡದ ಹಣ ವಸೂಲಿಯಾಗುತ್ತಿತ್ತು, ಆದರೆ, ಫೆಬ್ರವರಿ 13 ಸೋಮವಾರದಂದು ಅವಳಿ ನಗರದ ಸಂಚಾರಿ ಪೊಲೀಸರು 1799 ಕೇಸ್ ಗಳನ್ನು ದಾಖಲಿಸಿಕೊಂಡು 2,10,200 ರೂ. ದಂಡ ವಸೂಲಿ ಮಾಡಿದ್ದಾರೆ.

ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳುವುದನ್ನು ನಿಲ್ಲಿಸಬೇಡಿ ಎಂದು ಹು-ಧಾ ಪೊಲೀಸ್ ಕಮೀಷನರ್ ಪಾಂಡುರಂಗ ರಾಣೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.[ಹುಬ್ಬಳ್ಳಿ: ಇನ್ಮೇಲೆ ಪೊಲೀಸ್ ಠಾಣೆಗಳಲ್ಲಿಯೇ ದಂಡ ಕಟ್ಟಿ]

ಓಸಿ ಬುಕ್ಕಿಗಳ ಬಂಧನ: ನಗರದಲ್ಲಿ ಓಸಿ ಜೂಜಾಟ ನಡೆಸುತ್ತಿದ್ದ ಇಬ್ಬರನ್ನು ಬಂಧಿಸಿದ ಧಾರವಾಡ ಶಹರ ಪೊಲೀಸರು ಬಂಧಿತರಿಂದ ಹಣ ಮತ್ತು ಜೂಜಾಟದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಅಕ್ರಮ ಮದ್ಯ ಮಾರಾಟ: ಸ್ಥಳೀಯ ಹಳೇಹುಬ್ಬಳ್ಳಿ ಭಾಗದಲ್ಲಿ ಅಕ್ರಮವಾಗಿ ಮದ್ಯ ಮಾರುತ್ತಿದ್ದ ಪ್ರತ್ಯೇಕ ಪ್ರಕರಣಗಳಲ್ಲಿ ಮೂವರನ್ನು ಬಂಧಿಸಿರುವ ಪೊಲೀಸರು ಬಂಧಿತರಿಂದ ಅಕ್ರಮ ಮದ್ಯ ವಶಪಡಿಸಿಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The Hubballi-Dharwad Traffic Police in the last one day (Monday), have booked 1799 traffic violation cases and collected a whopping Rs 2 lakh penalty from violators.
Please Wait while comments are loading...