ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜ.25ರಿಂದ ಬೆಂಗಳೂರು-ಹುಬ್ಬಳ್ಳಿ-ತಿರುಪತಿ ವಿಮಾನ ಹಾರಾಟ

|
Google Oneindia Kannada News

ಹುಬ್ಬಳ್ಳಿ, ಜನವರಿ 13 : ಬೆಂಗಳೂರು-ಹುಬ್ಬಳ್ಳಿ-ತಿರುಪತಿ ನಡುವೆ ವಿಮಾನ ಸೇವೆಗೆ ಜನವರಿ 25ರಂದು ಚಾಲನೆ ಸಿಗಲಿದೆ. ಸ್ಟಾರ್ ಏರ್ ಮೂರು ನಗರಗಳ ನಡುವೆ ಪ್ರತಿದಿನ ವಿಮಾನ ಹಾರಾಟವನ್ನು ನಡೆಸಲಿದೆ.

ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕಿ ಆಹಿಲ್ಯಾ ಕಾಕ್ಕೋಡ್ಕರ್ ಈ ಕುರಿತು ಮಾಹಿತಿ ನೀಡಿದ್ದಾರೆ. ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ಹುಬ್ಬಳ್ಳಿ-ತಿರುಪತಿ ಮತ್ತು ಹುಬ್ಬಳ್ಳಿ-ಬೆಂಗಳೂರು ನಡುವೆ ಪ್ರತಿ ದಿನ ವಿಮಾನ ಹಾರಾಟ ಆರಂಭವಾಗಲಿದೆ ಎಂದರು.

ಹುಬ್ಬಳ್ಳಿ-ಬೆಂಗಳೂರು ನಡುವೆ ಸ್ಟಾರ್ ಏರ್ ವಿಮಾನ ಹಾರಾಟಹುಬ್ಬಳ್ಳಿ-ಬೆಂಗಳೂರು ನಡುವೆ ಸ್ಟಾರ್ ಏರ್ ವಿಮಾನ ಹಾರಾಟ

ಹುಬ್ಬಳ್ಳಿ-ತಿರುಪತಿ ಮತ್ತು ಬೆಂಗಳೂರು-ಹುಬ್ಬಳ್ಳಿ ನಡುವಿನ ಆರಂಭಿಕ ಪ್ರಯಾಣ ದರ 1,599 ಟಿಕೆಟ್ ದರ ನಿಗದಿಪಡಿಸಲಾಗಿದೆ. ವಿಮಾನ ಹಾರಾಟ ಜನವರಿ 25ರಿಂದ ಆರಂಭವಾಗಲಿದ್ದು, ಈಗಾಗಲೇ ಬುಕ್ಕಿಂಗ್ ಆರಂಭವಾಗಿದೆ.

ಹುಬ್ಬಳ್ಳಿ : ದುಬೈ, ದೋಹಾ, ಕುವೈತ್ ಮುಂತಾದ ಕಡೆಗೆ ವಿಮಾನ ಸೇವೆಹುಬ್ಬಳ್ಳಿ : ದುಬೈ, ದೋಹಾ, ಕುವೈತ್ ಮುಂತಾದ ಕಡೆಗೆ ವಿಮಾನ ಸೇವೆ

Star air to connect Bengaluru Hubballi Tirupati from January 25

ವೇಳಾಪಟ್ಟಿ : ವಿಮಾನವು ಬೆಳಗ್ಗೆ 7.35ಕ್ಕೆ ಬೆಂಗಳೂರಿನಿಂದ ಹೊರಡಲಿದೆ. 8.35ಕ್ಕೆ ಹುಬ್ಬಳ್ಳಿಗೆ ತಲುಪಲಿದೆ. ಬೆಳಗ್ಗೆ 8.55ಕ್ಕೆ ಹುಬ್ಬಳ್ಳಿಯಿಂದ ಹೊರಟು 10 ಗಂಟೆಗೆ ತಿರುಪತಿಗೆ ತಲುಪಲಿದೆ.

ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಕಾರ್ಗೋ ಸೇವೆ ಆರಂಭಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಕಾರ್ಗೋ ಸೇವೆ ಆರಂಭ

ತಿರುಪತಿಯಿಂದ 11.25ಕ್ಕೆ ಹೊರಡಲಿರುವ ವಿಮಾನ 11.25ಕ್ಕೆ ಹುಬ್ಬಳ್ಳಿಗೆ ತಲುಪಲಿದೆ. ಬೆಳಗ್ಗೆ 11.45 ಹುಬ್ಬಳ್ಳಿಯಿಂದ ಹೊರಡಲಿರುವ ವಿಮಾನ 12.45ಕ್ಕೆ ಬೆಂಗಳೂರು ತಲುಪಲಿದೆ.

English summary
Star Air will run daily flight between Bengaluru-Hubballi-Tirupati from January 25, 2019. 1, 599 basic fare fixed, online booking open now for public.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X