ಪ್ರಯಾಣಿಕರ ಸಮಯ ಉಳಿಸಲು ನೈಋತ್ಯ ರೈಲ್ವೆಯಿಂದ ಹೊಸ ನಿರ್ಧಾರ

ಹುಬ್ಬಳ್ಳಿ ಜನವರಿ 20: ನೈಋತ್ಯ ರೈಲ್ವೆ ವಿಶ್ವದ ಅತಿದೊಡ್ಡ ರೈಲ್ವೆ ಪ್ಲಾಟ್ ಫಾರಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ವಲಯ. ಈ ವಲಯದ ಕಾರ್ಯವೈಖರಿ ಸಾಕಷ್ಟು ಜನಮನ್ನಣೆ ಪಡೆದಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರ ಸಮಯದ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸಲು ಮುಂದಾಗಿರುವ ರೈಲ್ವೆ ಇಲಾಖೆ ಈಗ ಹೊಸ ನಿರ್ಧಾರ ಮಾಡಿದೆ.

ಸಾಕಷ್ಟು ಜನಪರ ಕಾರ್ಯಗಳ ಮೂಲಕ ಮಾತ್ರವಲ್ಲದೆ ಜನರಿಗೆ ಗುಣಮಟ್ಟದ ಸೇವೆ ನೀಡುವ ಮೂಲಕ ಗುರುತಿಸಿಕೊಂಡಿರುವ ನೈಋತ್ಯ ರೈಲ್ವೆ ವಲಯ ಈಗ ಕಾಮಗಾರಿ ಚುರುಕುಗೊಳಿಸಿರುವುದು ಮಾತ್ರವಲ್ಲದೆ ಸಮಯಕ್ಕೆ ಹೆಚ್ಚಿನ ಆದ್ಯತೆ ನೀಡಲಿದೆ.

ಹುಬ್ಬಳ್ಳಿ-ಬೆಂಗಳೂರು ಸೇರಿದಂತೆ ಬಹುತೇಕ ಮಾರ್ಗದಲ್ಲಿ ರೈಲ್ವೆ ಮೂಲಕ ಸಂಚಾರ ನಡೆಸಬೇಕಾದವರು ದಿನಗಟ್ಟಲೇ ಸಂಚಾರ ಮಾಡಬೇಕಿತ್ತು. ಆದರೆ ಈಗ ನೈಋತ್ಯ ರೈಲ್ವೆ ವಲಯ ದ್ವೀಪಥ ಕಾಮಗಾರಿ, ಎಲೆಕ್ಟ್ರಿಪಿಕೇಶನ್, ಇಂಟರ್ ಲಾಕಿಂಗ್ ಸೇರಿದಂತೆ ಬಹುತೇಕ ಕಾಮಗಾರಿ ಚುರುಕುಗೊಳಿಸಿದೆ. ಈ ನಿಟ್ಟಿನಲ್ಲಿ ಪ್ರತಿಗಂಟೆಗೆ 130 ಕಿಲೋಮೀಟರ್ ಕ್ರಮಿಸುವ ಸಾಮರ್ಥ್ಯವನ್ನು ಅಳವಡಿಸುವ ಮೂಲಕ ಜನರಿಗೆ ಹುಬ್ಬಳ್ಳಿ-ಬೆಂಗಳೂರು, ಹುಬ್ಬಳ್ಳಿ- ಮೈಸೂರು, ಹುಬ್ಬಳ್ಳಿ-ಬೆಳಗಾವಿ, ಹುಬ್ಬಳ್ಳಿ-ದೆಹಲಿ ಸೇರಿದಂತೆ ಹಲವಾರು ಮಾರ್ಗಗಳಲ್ಲಿ ಶೀಘ್ರಗತಿಯಲ್ಲಿ ಪ್ರಯಾಣ ಮಾಡಬಹುದಾಗಿದೆ.

South Western Railway Speed Up Most Of The Pending Work

ಇನ್ನೂ ಈಗಾಗಲೇ ಹುಬ್ಬಳ್ಳಿ ಬೆಂಗಳೂರು ಮಾರ್ಗಮಧ್ಯದಲ್ಲಿ ಬಹುತೇಕ ದ್ವೀಪಥ ಕಾಮಗಾರಿ ಪೂರ್ಣಗೊಂಡಿದ್ದು, ಸ್ವಲ್ಪ ಪ್ರಮಾಣದ ಕಾಮಗಾರಿ ಬಾಕಿ ಇದೆ. ಹೀಗಿರುವಾಗಲೇ ನೈಋತ್ಯ ರೈಲ್ವೆ ವಲಯ ಟ್ರಾಯಲ್ ರನ್ ಕೂಡ ಮಾಡಿದ್ದು, ಪ್ರತಿ ಗಂಟೆಗೆ 130 ಕಿಲೋ ಮೀಟರ್ ಓಡುವ ಬಗ್ಗೆ ಪ್ರಾಯೋಗಿಕ ಕಾರ್ಯಾಚರಣೆ ಕೂಡ ಮಾಡಿದೆ. ಈಗಾಗಲೇ ಇಂಧನ ಉಳಿಸುವ ಮೂಲಕ ಪರಿಸರ ಸ್ನೇಹಿಯಾಗಿದ್ದ ನೈಋತ್ಯ ರೈಲ್ವೆ ಈಗ ಜನಸ್ನೇಹಿಯಾಗಿ ಕಾರ್ಯನಿರ್ವಹಿಸಲಿದೆ.

South Western Railway Speed Up Most Of The Pending Work

ಒಟ್ಟಿನಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಸಾರ್ವಜನಿಕರಿಗೆ ಗುಣಮಟ್ಟದ ಸೇವೆ ನೀಡುವ ಮೂಲಕ ಹೆಸರುವಾಸಿಯಾಗಿರುವ ನೈಋತ್ಯ ರೈಲ್ವೆ ಕಾರ್ಯ ಮತ್ತು ವಿಸ್ತರಿಸುವ ಮೂಲಕ ಜನರಿಗೆ ದೊರೆಯಲಿ. ಅಲ್ಲದೆ ಈಗಾಗಲೇ ನಿರೀಕ್ಷಿತ ಮಟ್ಟದಲ್ಲಿರುವ ಭರವಸೆ ಈಡೇರುವ ಮೂಲಕ ಜನರಿಗೆ ಗುಣಮಟ್ಟದ ಸೇವೆ ದೊರೆಯಲಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+