Hubballi Junction: 50 ಎಲೆಕ್ಟ್ರಿಕ್ ಲೋಕೋಮೋಟಿವ್ಸ್ ನಿರ್ವಹಣಾ ಸಾಮರ್ಥ್ಯದ ವ್ಯವಸ್ಥೆಗೆ ಚಾಲನೆ, ಏನಿದು?
ಹುಬ್ಬಳ್ಳಿ, ಸೆಪ್ಟಂಬರ್ 04: ಕರ್ನಾಟಕದಾದ್ಯಂತ ನಿತ್ಯ ನೂರಾರು ರೈಲುಗಳು ಸಂಚರಿಸುತ್ತವೆ. ಪ್ರಯಾಣಿಕರಿಗೆ ಸುರಕ್ಷತೆಯ ಪ್ರಯಾಣ ನಿಡುತ್ತವೆ. ಇಂತಹ ರೈಲು ಕಾರ್ಯಾಚರಣೆಗಳನ್ನು ಖಚಿತಪಡಿಸಿಕೊಳ್ಳಲು ಹುಬ್ಬಳ್ಳಿ ಜಂಕ್ಷನ್‌ನಲ್ಲಿರುವ ಡೀಸೆಲ್ ಶೆಡ್‌ನಲ್ಲಿ ಎಲೆಕ್ಟ್ರಿಕ್ ಲೋಕೋಮೋಟಿವ್‌ಗಳ ನಿರ್ವಹಣೆಗಾಗಿ ಅತ್ಯಾಧುನಿಕ ಮೂಲಸೌಕರ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ. ಈ ವ್ಯವಸ್ಥೆಯನ್ನು ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅರವಿಂದ್ ಶ್ರೀವಾಸ್ತವ ಉದ್ಘಾಟಿಸಿದರು.
SWR ಪ್ರಧಾನ ವ್ಯವಸ್ಥಾಪಕ ಅರವಿಂದ್ ಶ್ರೀವಾಸ್ತವ ಮಾತನಾಡಿ, ನೈಋತ್ಯ ರೈಲ್ವೆಯ ವಿದ್ಯುದೀಕರಣದ ಹಾದಿಯಲ್ಲಿ ಮೂಲಭೂತ ಸೌಕರ್ಯಗಳ ಸೇರ್ಪಡೆಯು ಮಹತ್ವದ ಮೈಲಿಗಲ್ಲು ಆಗಿದೆ. ಸದ್ಯ ಹುಬ್ಬಳ್ಳಿ ವಿಭಾಗದಲ್ಲಿ ಎಲೆಕ್ಟ್ರಿಕ್ ಲೋಕೋ ಶೆಡ್ ಇಲ್ಲ. ರೂ.25.63 ಕೋಟಿ ಮೌಲ್ಯದ ಯೋಜನೆಯು ಸುರಕ್ಷಿತ ಮತ್ತು ವಿಶ್ವಾಸಾರ್ಹ ರೈಲು ಕಾರ್ಯಾಚರಣೆಗಳನ್ನು ಖಚಿತಪಡಿಸಿಕೊಳ್ಳಲು ನಿರ್ದಿಷ್ಟ ಮಧ್ಯಂತರಗಳಲ್ಲಿ ಎಲೆಕ್ಟ್ರಿಕ್ ಲೋಕೋಮೋಟಿವ್‌ಗಳ ನಿರ್ವಹಣೆ ಸಾಧ್ಯವಾಗಿದೆ ಎಂದು ತಿಳಿಸಿದರು.

ನಿರ್ವಹಣಾ ವ್ಯವಸ್ಥೆಯಲ್ಲಿ ಏನೆಲ್ಲಾ ಇದೆ?
ಎಲೆಕ್ಟ್ರಿಕ್ ಲೋಕೋಮೋಟಿವ್‌ಗಳ ಸಂರಕ್ಷಣೆಯು ಟರ್ನ್ ಓವರ್‌ಹೌಲಿಂಗ್ (TOH)ಮತ್ತು ಇಂಟರ್ಮೀಡಿಯೇಟ್ ಓವರ್‌ಹೌಲಿಂಗ್ (IOH) ಅನ್ನು ಒಳಗೊಂಡಿದೆ. ಈ ನಿಗದಿತ ನಿರ್ವಹಣಾ ಚಟುವಟಿಕೆಗಳಿಗೆ ಹೆವಿ ಲಿಫ್ಟಿಂಗ್ ಬೇ ಗಳು, 25 ಟನ್ ಇಒಟಿ ಕ್ರೇನ್‌ನೊಂದಿಗೆ ಮಧ್ಯಮ ಲಿಫ್ಟಿಂಗ್ ಬೇಗಳು, ತಪಾಸಣೆ ಶೆಡ್, ಸೇವಾ ಕಟ್ಟಡ ಇತ್ಯಾದಿ ಮತ್ತು ಯಂತ್ರೋಪಕರಣ ಇನ್ನಿತರ ಮೂಲಸೌಕರ್ಯ ಸೌಲಭ್ಯಗಳ ಅಗತ್ಯವಾಗಿದೆ. ಅದೆಲ್ಲವನ್ನು ಇಲ್ಲಿ ಒಳಗೊಂಡ ಸೌಲಭ್ಯವನ್ನು ಕಲ್ಪಿಸಲಾಗಿದೆ.
ನೈಋತ್ಯ ರೈಲ್ವೆಯು ವಿದ್ಯುದೀಕರಣದ ಪರಿವರ್ತನೆಯ ಹಂತದಲ್ಲಿದೆ. ಡೀಸೆಲ್ ಶೆಡ್‌ನಲ್ಲಿ ಚಾಲ್ತಿಯಲ್ಲಿರುವ ಸೌಲಭ್ಯಗಳು ಎಲೆಕ್ಟ್ರಿಕ್ ಲೋಕೋಮೋಟಿವ್‌ಗಳ ನಿರ್ವಹಣೆಗೆ ಅಸಮರ್ಪಕವಾಗಿದೆ ಎಂದರು.
ಕಾರ್ಯ ವೈಶಿಷ್ಯತೆಗಳೇನು?
ಹುಬ್ಬಳ್ಳಿಯ ಲೊಕೊ-ಶೆಡ್‌ನಲ್ಲಿರುವ ಹೊಸ ಮೂಲಸೌಕರ್ಯ ಸೌಲಭ್ಯಗಳು 50 ಎಲೆಕ್ಟ್ರಿಕ್ ಲೋಕೋಮೋಟಿವ್‌ಗಳನ್ನು ದುರಸ್ತಿ ಮಾಡುವ ಸಾಮರ್ಥ್ಯವನ್ನು ಹೊಂದಿವೆ. ಡೀಸೆಲ್ ಲೊಕೊಮೊಟಿವ್ ಸಂಖ್ಯೆ 12128 ರಲ್ಲಿ ಘಾಟ್ ವಿಭಾಗಕ್ಕೆ ಹೊಸದಾಗಿ ಸೇರಿಸಲಾದ ಆಡಿಯೊ-ವಿಷುಯಲ್ ಇಂಡಿಕೇಶನ್ ಸಿಸ್ಟಮ್ ಅನ್ನು ಪರಿಶೀಲಿಸಿದರು.

ಶ್ರೀವಾಸ್ತವ ಅವರು ಶೆಡ್ ಮೇಲ್ವಿಚಾರಕರು, ಸಿಬ್ಬಂದಿ ಮತ್ತು ಮಹಿಳಾ ಉದ್ಯೋಗಿಗಳೊಂದಿಗೆ, ಅವರ ಅಗತ್ಯತೆಗಳು ಮತ್ತು ಅವರು ಎದುರಿಸುತ್ತಿರುವ ಸವಾಲುಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಲೊಕೊ ಶೆಡ್‌ನಲ್ಲಿ ಅವರ ಕೆಲಸದ ಪರಿಸ್ಥಿತಿಗಳಲ್ಲಿ ಮತ್ತಷ್ಟು ಸುಧಾರಣೆಗಳಿಗಾಗಿ ಸಿಬ್ಬಂದಿ ಜೊತೆಗೆ ಒಂದಷ್ಟು ಮಾತುಕತೆ ನಡೆಸಿದರು.
ಲೊಕೊಮೊಟಿವ್ ಸಿಮ್ಯುಲೇಟರ್ ತರಬೇತಿ ಪಡೆಯುತ್ತಿರುವ ಲೊಕೊಮೊಟಿವ್ ಪೈಲಟ್‌ಗಳೊಂದಿಗೆ ಸಂವಾದ ನಡೆಸಿದರು ಮತ್ತು ರೈಲುಗಳ ಸುರಕ್ಷಿತ ಕಾರ್ಯಾಚರಣೆಯನ್ನು ಖಾತ್ರಿಪಡಿಸುವಲ್ಲಿ ಅವರ ನಿರ್ಣಾಯಕ ಪಾತ್ರವನ್ನು ಒತ್ತಿ ಹೇಳಿದರು.
ಈ ಸಂದರ್ಭದಲ್ಲಿ ಪ್ರಧಾನ ಮುಖ್ಯ ಎಲೆಕ್ಟ್ರಿಕಲ್ ಇಂಜಿನಿಯರ್ ಇಶಾಕ್ ಖಾನ್, ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಹರ್ಷ ಖರೆ ಮತ್ತು ಸಂಜಯ್ ಕುಮಾರ್, ಮುಖ್ಯ ಯೋಜನಾ ವ್ಯವಸ್ಥಾಪಕರು ಸಂತೋಷ್ ಕೆ. ವರ್ಮಾ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು, ಸೌರಭ್ ಸಿಂಗ್ ಲೋಧಿ, ಹಿರಿಯ ವಿಭಾಗೀಯ ಮೆಕ್ಯಾನಿಕಲ್ ಇಂಜಿನಿಯರ್, ಡೀಸೆಲ್ ಶೆಡ್, ನೈಋತ್ಯ ರೈಲ್ವೆಯ ವಿಭಾಗದ ಮುಖ್ಯಸ್ಥರು ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
-
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ












Click it and Unblock the Notifications