ಹುಬ್ಬಳ್ಳಿ-ಚಿಕ್ಕಬೆಣಕಲ್ ರೈಲು ವೇಳಾಪಟ್ಟಿ ಬದಲಾವಣೆ, ನ.15ರಿಂದ ಜಾರಿಗೆ

Posted By:
Subscribe to Oneindia Kannada

ಹುಬ್ಬಳ್ಳಿ, ನವೆಂಬರ್ 07: ಸಾರ್ವಜನಿಕರ ಅನುಕೂಲಕ್ಕಾಗಿ ಹುಬ್ಬಳ್ಳಿ-ಚಿಕ್ಕಬೆಣಕಲ್ ರೈಲ್ವೆ ವೇಳಾಪಟ್ಟಿಯನ್ನು ಬದಲಾಯಿಸುವಂತೆ ಸಲ್ಲಿಸಲಾಗಿದ್ದ ಮನವಿಯನ್ನು ನೈರುತ್ಯ ರೈಲ್ವೆ ಇಲಾಖೆ ಪುರಸ್ಕರಿಸಿದೆ.

ಶಿವಮೊಗ್ಗ : ಇಂಟರ್‌ಸಿಟಿ ರೈಲು ವೇಳಾಪಟ್ಟಿ, ದರ ಬದಲಾವಣೆ

ಗಂಗಾವತಿ ತಾಲೂಕು ಚಿಕ್ಕಬೆಣಕಲ್-ಹುಬ್ಬಳ್ಳಿ ನಡುವೆ ಸಂಚರಿಸುತ್ತಿದ್ದ ರೈಲಿನ ವೇಳಾಪಟ್ಟಿಯನ್ನು ಪ್ರಯಾಣಿಕರ ಅನುಕೂಲಕ್ಕಾಗಿ ಬದಲಾಯಿಸುವಂತೆ ಮನವಿ ಸಲ್ಲಿಸಲಾಗಿತ್ತು. ಅದರಂತೆ ನೈರುತ್ಯ ರೈಲ್ವೆ ಇಲಾಖೆ ಹುಬ್ಬಳ್ಳಿ-ಚಿಕ್ಕಬೆಣಕಲ್ ರೈಲು ಗಾಡಿ ಸಂಖ್ಯೆ 56927/56928 ವೇಳಾಪಟ್ಟಿ ಬದಲಾಯಿಸಿದೆ.

South western railway has changed Hubbli-Chikkabenakal daily train timings

ನಿತ್ಯ ಬೆಳಿಗ್ಗೆ 10 ಗಂಟೆಗೆ ಹುಬ್ಬಳ್ಳಿಯಿಂದ ಹೊರಡುವ ರೈಲು ಕೊಪ್ಪಳಕ್ಕೆ ಮಧ್ಯಾಹ್ನ 12-30ಕ್ಕೆ ಹಾಗೂ ಚಿಕ್ಕಬೆಣಕಲ್ ಗೆ ಮಧ್ಯಾಹ್ನ 1.30ಕ್ಕೆ ತಲುಪಲಿದೆ.

ಚಿಕ್ಕಬೆಣಕಲ್ ನಿಂದ ಮಧ್ಯಾಹ್ನ 02 ಗಂಟೆಗೆ ಹೊರಡುವ ರೈಲು ಕೊಪ್ಪಳಕ್ಕೆ 2.45, ಹುಬ್ಬಳ್ಳಿಗೆ ಸಂಜೆ 5-50 ಗಂಟೆಗೆ ತಲುಪಲಿದೆ. ನೂತನ ವೇಳಾಪಟ್ಟಿ ನವೆಂಬರ್ 15 ರಿಂದ ಜಾರಿಗೆ ಬರಲಿದೆ.

ಮಧ್ಯಾಹ್ನದ ಅವಧಿಯಲ್ಲಿ ಕೊಪ್ಪಳದಿಂದ ಹುಬ್ಬಳ್ಳಿಗೆ ತೆರಳಲು ನೂತನ ವೇಳಾಪಟ್ಟಿ ಅನುಕೂಲವಾಗಲಿದೆ. ಮನವಿಗೆ ಸ್ಪಂದಿಸಿ, ವೇಳಾಪಟ್ಟಿ ಬದಲಾವಣೆ ಮಾಡಿಕೊಟ್ಟಿದ್ದಕ್ಕಾಗಿ ರೈಲ್ವೆ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಕೊಪ್ಪಳ ಸಂಸದ ಕರಡಿ ಸಂಗಣ್ಣ ಅಭಿನಂದನೆ ಸಲ್ಲಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
South western railway has changed Hubbli-Chikkabenakal daily train timings. The new schedule come to effect from November 15th, 2017

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ