• search
 • Live TV
ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆಪರೇಷನ್ ಕಮಲ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿ: ಸಿದ್ದರಾಮಯ್ಯ

|
   ಯಡಿಯೂರಪ್ಪಗೆ ಸವಾಲು ಹಾಕಿದ ಸಿದ್ದು..? | Oneindia Kannada

   ಹುಬ್ಬಳ್ಳಿ, ಆಗಸ್ಟ್ 19: "ಫೋನ್ ಕದ್ದಾಲಿಕೆ ಪ್ರಕರಣವನ್ನುನನ್ನ ಮನವಿ ಮೇರೆಗೆ ಸಿಬಿಐಗೆ ಒಪ್ಪಿಸಲಾಗಿದೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಇತ್ತೀಚಿನ 'ಆಪರೇಷನ್ ಕಮಲ'ದಲ್ಲಿಯೂ ಕೋಟ್ಯಂತರ ರೂ.ಗಳ ದುರ್ವ್ಯವಹಾರ ನಡೆದಿದೆ ಎಂಬ ಆರೋಪ‌ ಇದೆ. ಅದರ ಬಗ್ಗೆಯೂ ಸಿಬಿಐನಿಂದ ತನಿಖೆ ನಡೆಸಬೇಕೆಂದು ಕರ್ನಾಟಕದ ಮುಖ್ಯಮಂತ್ರಿಗಳನ್ನುಆಗ್ರಹಿಸುತ್ತೇನೆ" ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

   ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, 'ಫೋನ್ ಕದ್ದಾಲಿಕೆ ವಿಚಾರವಾಗಿ ನಾನು ಯಡಿಯೂರಪ್ಪ ಜೊತೆ ಮಾತನಾಡಿಯೂ ಇಲ್ಲ, ಸಿಬಿಐಗೆ ವಹಿಸಿ ಅಂತ ಹೇಳಿಯೂ ಇಲ್ಲ' ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

   ಫೋನ್ ಕದ್ದಾಲಿಕೆ : ಸಿಬಿಐ ತನಿಖೆ ಬಗ್ಗೆ ಅನುಮಾನವಿದೆ!

   "ಯಡಿಯೂರಪ್ಪ ನನ್ನ ಸಲಹೆ ಕೇಳುವುದಾದರೆ ಅಪರೇಷನ್ ಕಮಲ ಪ್ರಕರಣವನ್ನೂ ಸಿಬಿಐಗೆ ವಹಿಸಲಿ. ಅಪರೇಶನ್ ಕಮಲದ ಮೂಲಕ ಶಾಸಕರನ್ನು ಕೊಂಡುಕೊಳ್ಳುವುದಕ್ಕೆ ಬಿಜೆಪಿಯವರು ಕೋಟ್ಯಂಟರ ರೂ. ಖರ್ಚು ಮಾಡಿದ್ದಾರೆ. ಇದರಲ್ಲಿ ಕೋಟ್ಯಂತರ ರೂ. ಕಪ್ಪು ಹಣದ ವ್ಯವಹಾರ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಯಡಿಯೂರಪ್ಪರ ಆಡಿಯೋಗಳು ಅಲ್ಲದೆ ಶ್ರೀನಿವಾಸ ಗೌಡ ಸಹಿತ ಕೆಲವು ಶಾಸಕರು ತಮಗೆ ಹಣದ ಆಮಿಷವೊಡ್ಡಲಾಗಿತ್ತು ಎಂದು ಆರೋಪ ಕೂಡಾ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಸಿಬಿಐಗೆ ವಹಿಸುವುದು ಉತ್ತಮ ಎಂಬುದು ಯಡಿಯೂರಪ್ಪರಿಗೆ ನನ್ನ ಸಲಹೆ" ಎಂದು ಸಿದ್ದರಾಮಯ್ಯ ಹೇಳಿದರು

   ಕೇಂದ್ರ ತನಿಖಾ ಸಂಸ್ಥೆ ಮೇಲೆ ಈಗೇಕೆ ನಂಬಿಕೆ

   ಕೇಂದ್ರ ತನಿಖಾ ಸಂಸ್ಥೆ ಮೇಲೆ ಈಗೇಕೆ ನಂಬಿಕೆ

   "ರಾಜ್ಯದಲ್ಲಿ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ನಮ್ಮ ಪಕ್ಷದ ಸತತ ಒತ್ತಾಯದ ಹೊರತಾಗಿಯೂ ಒಂದೇ ಒಂದು ಹಗರಣವನ್ನು ಸ್ವಯಂಪ್ರೇರಿತರಾಗಿ ಸಿಬಿಐ ತನಿಖೆಗೆ ಒಪ್ಪಿಸದೆ ಇದ್ದ ಬಿಜೆಪಿ ಕರ್ನಾಟಕ‌ಕ್ಕೆ ಈಗ ಇದ್ದಕ್ಕಿದ್ದಂತೆ ಕೇಂದ್ರ ತನಿಖಾ ಸಂಸ್ಥೆಯ ಮೇಲೆ ನಂಬಿಕೆ ಹುಟ್ಟಿರುವುದು ಆಶ್ಚರ್ಯಕರ ಬೆಳವಣಿಗೆ' ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.

   ಯಡಿಯೂರಪ್ಪ ಅವರ ನಿರ್ಧಾರ ಸ್ವಾಗತಾರ್ಹ

   ಯಡಿಯೂರಪ್ಪ ಅವರ ನಿರ್ಧಾರ ಸ್ವಾಗತಾರ್ಹ

   ಇದಕ್ಕೂ ಮುನ್ನ "ಪೋನ್ ಕದ್ದಾಲಿಕೆ ಹಗರಣದ ತನಿಖೆಯನ್ನು ಸಿಬಿಐ‌ಗೆ ಒಪ್ಪಿಸುವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ನಿರ್ಧಾರ ಸ್ವಾಗತಾರ್ಹ. ಆದರೆ ಬಿಜೆಪಿ ಸಿಬಿಐಯನ್ನು ಕೈಗೊಂಬೆ ಮಾಡಿಕೊಂಡು ರಾಜಕೀಯ ಸೇಡಿಗಾಗಿ ದುರ್ಬಳಕೆ ಮಾಡಿಕೊಳ್ಳುತ್ತಾ ಬಂದಿರುವುದನ್ನು ದೇಶ ಕಂಡಿದೆ. ಇಂತಹ ದುಷ್ಟ ಆಲೋಚನೆ ಬಿಜೆಪಿ ನಾಯಕರಿಗಿಲ್ಲ‌‌‌ ಎಂದು ನಂಬಿದ್ದೇನೆ' ಎಂದು ಸಿದ್ದರಾಮಮಯ್ಯ ಟ್ವೀಟ್ ಮಾಡಿದ್ದರು.

   ಯಾರು ತಪ್ಪು ಮಾಡಿದ್ದಾರೆ ಅನ್ನೋದು ಗೊತ್ತಾಗತ್ತೆ

   ಫೋನ್ ಕದ್ದಾಲಿಕೆ ತನಿಖೆ ಆಗಬೇಕು ಅಂತ ಮೊನ್ನೆ ನೀವೇ ಹೇಳಿದ್ರಲ್ಲ, ಈಗ ಯಡಿಯೂರಪ್ಪ ಅವರು ಆದೇಶ ಕೊಟ್ಟರೆ ಯಾಕೆ ಆಶ್ಚರ್ಯ ಪಡುತ್ತೀರಿ, ಹೆಗಲು ಮುಟ್ಟಿಕೊಳ್ಳೋರು ಬೇರೆ ಇದ್ದಾರೆ, ಯಾರು ತಪ್ಪು ಮಾಡಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತಾಗಲಿ ಎಂದ ಪ್ರಕಾಶ್ ಹೆಗಡೆ.

   ನೆರೆ ಪರಿಹಾರ ತರದ ಯಡಿಯೂರಪ್ಪ ವಿರುದ್ಧ ಗರಂ

   ನೆರೆ ಪರಿಹಾರ ತರದ ಯಡಿಯೂರಪ್ಪ ವಿರುದ್ಧ ಗರಂ ಆಗಿರುವ ಸೋಮ್ ಪ್ರಕಾಶ್ ಎಂಬುವವರು, ಕರ್ನಾಟಕದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ ಯಡಿಯೂರಪ್ಪ ಅವರು ಈಗ ಹೈಕಮಾಂಡ್ ಹೆಸರಿನಲ್ಲಿ ಗುಜರಾತಿಗಳಿಗೆ ಜೈ ಎನ್ನುವ ಪರಿಸ್ಥಿತಿ ಬಂದಿದೆ ಎಂದು ಟ್ವೀಟ್ ಮಾಡಿದ್ದಾರೆ.

   ನೆರೆ ಪರಿಹಾರ ತರದ ಯಡಿಯೂರಪ್ಪ ವಿರುದ್ಧ ಗರಂ

   ನೆರೆ ಪರಿಹಾರ ತರದ ಯಡಿಯೂರಪ್ಪ ವಿರುದ್ಧ ಗರಂ ಆಗಿರುವ ಸೋಮ್ ಪ್ರಕಾಶ್ ಎಂಬುವವರು, ಕರ್ನಾಟಕದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ ಯಡಿಯೂರಪ್ಪ ಅವರು ಈಗ ಹೈಕಮಾಂಡ್ ಹೆಸರಿನಲ್ಲಿ ಗುಜರಾತಿಗಳಿಗೆ ಜೈ ಎನ್ನುವ ಪರಿಸ್ಥಿತಿ ಬಂದಿದೆ ಎಂದು ಟ್ವೀಟ್ ಮಾಡಿದ್ದಾರೆ.

   ಡಿಕೆ ರವಿ ಸಾವು ಸಿಬಿಐ ತನಿಖೆಯಾಗಲಿ

   ಐಎಎಸ್ ಅಧಿಕಾರಿ ಡಿಕೆ ರವಿ ಸಾವು, ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನ ಬಂಡೆ, ಡಿವೈಎಸ್ಪಿ ಗಣಪತಿ ಅವರ ಸಾವಿನ ತನಿಖೆಯನ್ನು ಸಿಬಿಐಗೆ ವಹಿಸಿ ಎಂದ ಸತೀಶ್ ಕುಮಾರ್.

   ದುಬಾರಿ ವಾಚು ಪ್ರಕರಣವು ಮರು ತನಿಖೆಯಾಗಲಿ

   ನಿಮ್ಮ ದುಬಾರಿ ಸುಂದರ ಯುಬ್ಲೆಟ್ ಗಡಿಯಾರ ನಿಮಗೆ ಯಾರು ಕೊಟ್ಟರು ಮತ್ತೆ ಯಾಕೆ ಕೊಟ್ಟರು ಎಂಬುದು ಸಿಬಿಐ ತನಿಖೆಗೆ ವಹಿಸಲಿ ಎಂದ ಶಂಕರ್ ಲಿಂಗೇಗೌಡ.

   English summary
   "I welcome the decision of BS Yediyurappa to hand over the phone tapping case to CBI. I urge BS Yediyurappa to order CBI investigation into alleged Operation Kamala also" tweeted former CM Siddaramaiah.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X