ಹನಿಟ್ರ್ಯಾಪ್: ಮುಜುಗರ, ನಾಚಿಕೆಗೇಡಿನ ಸಂಗತಿ!
ಹುಬ್ಬಳ್ಳಿ, ಮಾರ್ಚ್ 23: ಸಚಿವ ಕೆ.ಎನ್. ರಾಜಣ್ಣ ಅವರು ಪ್ರಸ್ತಾಪಿಸಿದ ಹನಿಟ್ರ್ಯಾಪ್ ಪ್ರಕರಣ ವಿಚಾರದಲ್ಲಿ ರಾಜ್ಯ ಬಿಜೆಪಿಯು ಟಿವಿಯಲ್ಲಿ ಪ್ರಚಾರ ಪಡೆಯಲು ಹೀಗೆ ಹೋರಾಟ ಮಾಡುತ್ತಿದೆ. ಇದರ ಅಗತ್ಯತೆ ಇತ್ತಾ. ಬಿಜೆಪಿ ನಾಯಕರು ಯಾವ ಕಾರಣಕ್ಕೆ ಅಮಾನತು ಆದರೂ ಎಂಬುದು ಎಲ್ಲರಿಗೂ ಗೊತ್ತಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ದೂರಿದರು.
ಭಾನುವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಸದನದಲ್ಲಿ ಹನಿಟ್ರ್ಯಾಪ್ ವಿಚಾರ ಚರ್ಚೆ ನಡೆದಿತ್ತು. ಈ ವೇಳೆ ಬಿಜೆಪಿ ಅವರು ಹನಿಟ್ರ್ಯಾಪ್ ವಿಷಯವನ್ನು ಪ್ರಮುಖವಾಗಿ ತೆಗೆದುಕೊಳ್ಳುವಂತೆ ಹೇಳಿ ಬಿಜೆಪಿ ಹೋರಾಟ ನಡೆಸಿತು. ಈ ಬಗ್ಗೆ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸ್ವತಃ ತನಿಖೆ ಬಗ್ಗೆ ತಿಳಿಸಿದ್ದಾರೆ. ಇಷ್ಟಾದರೂ ಸರ್ಕಾರ ಇನ್ನೇನು ಹೇಳಬೇಕು. ಇವರಿಗೆ ಸಿಎಂ ಉತ್ತರ ಕೇಳುವ ವ್ಯವದಾನ ಇರಲಿಲ್ಲ.

ಹನಿಟ್ರ್ಯಾಪ್ ವಿರುದ್ಧ ಹೋರಾಟ ನಾಟಕ, ಅಮಾನತು
ಸರ್ಕಾರವ ಪ್ರಕರಣ ಬಗ್ಗೆ ಸ್ಪಷ್ಟವಾಗಿ ಹೇಳಿದ ಮೇಲೂ ಸದನಲ್ಲಿ ಹೋರಾಟ ಮಾಡಿ ಸ್ಪೀಕರ್ ಹತ್ತಿರ ಗಲಾಟೆ ಮಾಡುವ ಅವಶ್ಯಕತೆ ಇತ್ತಾ?. ಪೇಪರ್ ಎಸೆಯುವ ಅಗತ್ಯವೇನಿತ್ತು? ರೈತರ ವಿಷಯಗಳು ಸೇರಿ ಸಾಕಷ್ಟು ವಿಷಯ ಕುರಿತು ಕೇಳ ಬಹುದಿತ್ತು. ಅದೆಲ್ಲ ಬಿಟ್ಟು ಹನಿಟ್ರ್ಯಾಪ್ ನಾಟಕ ಮಾಡಿ ಹೋರಾಟಕ್ಕೆ ಇಳಿದು ಪ್ರಚಾರ ಗಿಟ್ಟಿಸಿಕೊಳ್ಳಲು ಹೋಗಿ ಅಮಾನತು ಆಗಿದ್ದಾರೆ. ಅವರ ಸಾಧನೆ ಏನು? ಎಂದು ಖಾರವಾಗಿ ಸಚಿವರು ಪ್ರಶ್ನೆ ಮಾಡಿದರು.
ಹನಿಟ್ರ್ಯಾಪ್ ಬಗ್ಗೆ ಅವಸರ ಏನಿದೆ? ಈ ಪ್ರಕರಣ ಬಗ್ಗೆ ಕಾಂಗ್ರೆಸ್‌ನವರಿಗೆ ಮಾತ್ರವಲ್ಲದೇ ಬಿಜೆಪಿ ಸೇರಿದಂತೆ ಎಲ್ಲ ನಾಯಕರಲ್ಲೂ ಬೇಸರ ಇದೆ. ಈಗಾಗಲೇ ಸರ್ಕಾರ ಉತ್ತರ ನೀಡಿದೆ. ಇನ್ನೇನು ಮಾತನಾಡಬೇಕು. ಲಿಖಿತ ದೂರು ನೀಡುವುದು ಬೇಡ ಸರ್ಕಾರವೆ ಸುಮೋಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಲು ಸಿದ್ದವಿದೆ. ಇವರೇನು ಸಿಬಿಐ ತನಿಖೆಗೆ ಬೇರಾವ ತನಿಖೆಗೆ ಆಗ್ರಹಿಸಿಬೇಕು. ಅದನ್ನು ಬಿಟ್ಟು ಸದನದಲ್ಲಿ ಹೀಗೆ ನಡೆದುಕೊಂಡಿದ್ದು ಎಷ್ಟು ಸರಿ ಎಂದರು.
ಜಪಾನ್ ದೇಶ ಸೇರಿದಂತೆ ಬೇರೆ ಬೇರೆ ದೇಶಗಳಲ್ಲಿ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಲಾಗುತ್ತದೆ. ಆದರೆ ನಾವು ಬರೀ ಹನಿ ಟ್ರ್ಯಾಪ್ ಬಗ್ಗೆ ಮಾತನಾಡುತ್ತೇವೆ. ಎಷ್ಟು ನಾಚಿಕೇಡು. ನಮ್ಮ ಸಚಿವರೇ ಈ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಇಂತಹ ವ್ಯವಸ್ಥೆಯಲ್ಲಿ ನಾವಿದ್ದೇವೆ ಎಂದು ಹೇಳಿದರು.
ಹನಿಟ್ರ್ಯಾಪ್ ವಿಚಾರದಿಂದ ರಾಜ್ಯದ ಜನರಿಗೆ ಮುಜುಗರ!
ಹನಿಟ್ರ್ಯಾಪ್ ಪ್ರಕರಣದಲ್ಲಿ ರಾಜಕೀಯ ಇದೆ. ಹನಿಟ್ರ್ಯಾಪ್ ಪದ ಬಳಕೆ ಕಡಿಮೆ ಬಳಸಿ. ಪದೇ ಪದೆ ಹೇಳುವುರಿಂದ ಏನು ಆಗುವುದಿಲ್ಲ. ಮುಜುಗರ ಉಂಟಾಗುತ್ತದೆ. ಬಿಜೆಪಿ ನಾಯಕರು ಮಾತ್ರ ಸಾರ್ವಜನಿಕರಿಗೆ ಅನ್ಯಾಯವಾಗದೆ ಎಂಬಂತೆ ಹೋರಾಟ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿದ್ದೆ ನಮ್ಮ ಸರ್ಕಾರ, ನಮ್ಮ ಸಚಿವರು. ಈ ಬಗ್ಗೆ ಬಿಜೆಪಿಯವರು ಮಾತನಾಡುತ್ತಿಲ್ಲ ಎಂದು ಟೀಕಿಸಿದರು.
ಹನಿಟ್ರ್ಯಾಪ್ ಎಂಬುದು ಸಾರ್ವಜನಿಕರಿಗೆ ಒಳಿತಾಗುವ ವಿಷಯವಲ್ಲ. ಇದರಿಂದ ಇದರಿಂದ ಮುಜುಗರ ಆಗುತ್ತಿದೆ. ಇದನ್ನೇ ಹೈಲೆಟ್ ಮಾಡುವ ಅಗತ್ಯವಿಲ್ಲ ಎಂದು ಅವರು ತಿಳಿಸಿದರು.












Click it and Unblock the Notifications