ಕಾರ್ ಚಾಲಕನಿಗೂ ಹೆಲ್ಮೆಟ್ ಕಡ್ಡಾಯ; ಹುಬ್ಬಳ್ಳಿಯಲ್ಲಿ ಮಾತ್ರ!

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada
   Hubballi : 100 Rs Fine For Car Driver For Not Wearing Helmet..! | Oneindia Kannada

   ಹುಬ್ಬಳ್ಳಿ, ಅಕ್ಟೋಬರ್ 9: ಬೈಕ್ ಸವಾರರು ಹೆಲ್ಮೆಟ್ ಹಾಕಲಿಲ್ಲ ಅಂದರೆ ದಂಡ ಹಾಕುವುದು ಸಾಮಾನ್ಯ. ಆದರೆ ಹುಬ್ಬಳ್ಳಿ ಸಂಚಾರಿ ಪೊಲೀಸರು ಕಾರು ಚಾಲಕನೊಬ್ಬನಿಗೆ ಹೆಲ್ಮೆಟ್ ಹಾಕಿಲ್ಲವೆಂದು 100 ರೂ. ದಂಡ ಹಾಕುವ ಮೂಲಕ ಯಡವಟ್ಟು ಮಾಡಿಕೊಂಡು ಸುದ್ದಿಯಾಗಿದ್ದಾರೆ.

   ಇಂಥಹದೊಂದು ಯಡವಟ್ಟನ್ನು ಹುಬ್ಬಳ್ಳಿಯ ಉತ್ತರ ಸಂಚಾರಿ ಪೊಲೀಸರು ಮಾಡಿದ್ದಾರೆ. ನಿನ್ನೆ ಸಂಜೆ ರವಿ ಕಾಂಬ್ಳೆ ಎಂಬುವರು ತಮ್ಮ ಕಾರಿನಲ್ಲಿ ಹಳೆಯ ಬಸ್ ನಿಲ್ದಾಣದ ಬಳಿ ಬರುತ್ತಿದ್ದ ಸಂದರ್ಭದಲ್ಲಿ ಉತ್ತರ ಸಂಚಾರಿ ಪೊಲೀಸರು ರವಿಯವರ ಕಾರನ್ನು ನಿಲ್ಲಿಸಿದ್ದರು. ಈ ವೇಳೆ ವಿಚಾರಣೆ ನಡೆಸಿ, ಹೆಲ್ಮೆಟ್ ಧರಿಸಿಲ್ಲವೆಂದು ಪೊಲೀಸರು ನೋಟಿಸ್ ನೀಡಿದ್ದಲ್ಲದೆ, ನೂರು ರೂಪಾಯಿಯ ದಂಡವನ್ನು ಸಹ ಹಾಕಿದ್ದಾರೆ.

   Rs 100 fine for car driver for not wearing helmet in Hubblli!

   ಅಲ್ಲದೆ ಕಾರಿನ ನಂಬರನ್ನೂ ಸಹಿತ ನೋಟಿಸ್ ನಲ್ಲಿ ನಮೂದಿಸಲಾಗಿದೆ. ಇನ್ನು ರವಿ ಅವರು ಓಲಾ ಕಾರ್ ಚಾಲಕರಾಗಿದ್ದು, ಕಾರಿಗೆ ಸಂಬಂಧಪಟ್ಟ ಎಲ್ಲ ದಾಖಲಾತಿ ಮತ್ತು ಚಾಲನಾ ಪರವಾನಗಿ ಪತ್ರವನ್ನು ಪೊಲೀಸರಿಗೆ ತೋರಿಸಿದರೂ ಈ ರೀತಿಯ ಎಡವಟ್ಟನ್ನ ಮಾಡಿದ್ದಾರೆ ಹುಬ್ಬಳ್ಳಿಯ ಉತ್ತರ ಸಂಚಾರಿ ಠಾಣೆಯ ಪೊಲೀಸರು.

   Rs 100 fine for car driver for not wearing helmet in Hubblli!

   ಈ ವಿಷಯ ತಿಳಿದ ಕೆಲ ಸಾರ್ವಜನಿಕರು, ಕಾರು ಚಾಲಕರೂ ಹೆಲ್ಮೆಟ್ ಹಾಕಬೇಕಾ ಅಂತ ಒಂದು ಕ್ಷಣ ಅಚ್ಚರಿಯಾದರೆ, ಸಾರ್ವಜನಿಕರು ಪೊಲೀಸರ ಕಾರ್ಯವೈಖರಿ ವಿರುದ್ಧ ಆಕ್ರೋಶಗೊಂಡಿದ್ದಾರೆ.

   ಯಾರಿಗೆ ನೋಟಿಸ್ ನೀಡಬೇಕು ಎಂಬ ಪರಿಜ್ಞಾನ ನಮ್ಮ ಸಂಚಾರಿ ಪೊಲೀಸರಿಗಿಲ್ಲವೇ ಎಂಬ ಮಾತನ್ನು ಸಾರ್ವಜನಿಕರು ಕೇಳುತ್ತಿದ್ದಾರೆ. ಎಲ್ಲಾ ದಾಖಲೆಗಳು ಪಕ್ಕಾ ಇದ್ದರೂ, ಸಮವಸ್ ಧರಿಸಿ ಚಾಲನೆ ಮಾಡುತ್ತಿದ್ದರೂ ಈ ರೀತಿ ದಂಡ ವಿಧಿಸಿರುವ ಪೊಲೀಸರ ನಡತೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Hubblli traffic police have fined Rs 100 for a car driver for not wearing helmet.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ