ಹುಬ್ಬಳ್ಳಿಯಲ್ಲಿ ರೋಜಗಾರ್ ಮೇಳ: 200ಕ್ಕೂ ಅಧಿಕ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಣೆ
ಹುಬ್ಬಳ್ಳಿ, ಮೇ 16: ಉದ್ಯೋಗ ಸೃಷ್ಟಿ ಹಾಗೂ ನಿರುದ್ಯೋಗ ಹೋಗಲಾಡಿಸುವ ಸದುದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ. ಈ ನಿಟ್ಟಿನಲ್ಲಿ ಹಲವಾರು ಇಲಾಖೆಯಿಂದ ನೂತನವಾಗಿ ನೇಮಕಗೊಂಡ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರವನ್ನು ನೀಡುವ ಮೂಲಕ ಉದ್ಯೋಗ ಕ್ರಾಂತಿ ಮಾಡಲು ಮುಂದಾಗಿದೆ.
ಅಂಚೆ ಇಲಾಖೆ, ಗೃಹ ಇಲಾಖೆ, ರೈಲ್ವೆ ಇಲಾಖೆ, ನಿಮಾನ್ಸ್ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಮಂತ್ರಾಲಯ ಸಹಯೋಗದಲ್ಲಿ ರೋಜಗಾರ್ ಮೇಳವನ್ನು ನರೇಂದ್ರ ಮೋದಿಯವರ ನೇತೃತ್ವದಲ್ಲಿ ಇಂದು ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.
ಹುಬ್ಬಳ್ಳಿಯ ಸವಾಯಿ ಗಂಧರ್ವ ಹಾಲ್ ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಆಯುಷ್ ಇಲಾಖೆಯ ಸಚಿವರಾದ ಡಾ.ಮುಂಜಪರಾ ಮಹೇಂದ್ರಭಾಯಿ ಕಲುಭಾಯಿ ಅವರು ಮೇಳವನ್ನು ಉದ್ಘಾಟಿಸಿದ್ದು, ವರ್ಚುವಲ್ ಮೂಲಕ ಮೋದಿಯವರು ಚಾಲನೆ ನೀಡಿದ್ದಾರೆ. ದೇಶದ 71,000 ಯುವ ಸಮುದಾಯಕ್ಕೆ ನೇಮಕಾತಿ ಪತ್ರ ಹಾಗೂ ಹುಬ್ಬಳ್ಳಿಯಲ್ಲಿ 200ಕ್ಕೂ ಅಧಿಕ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಣೆ ಮಾಡಲಾಯಿತು.

ಒಂದು ಲಕ್ಷ ಉದ್ಯೋಗ ಸೃಷ್ಟಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಭರವಸೆ
ಇನ್ನು ದೇಶದ ಅಭಿವೃದ್ಧಿಯ ಜೊತೆಗೆ ವಾರ್ಷಿಕವಾಗಿ ಒಂದು ಲಕ್ಷ ಉದ್ಯೋಗ ಸೃಷ್ಟಿಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. ಅಲ್ಲದೇ ಈಗಾಗಲೇ ರೈಲ್ವೆ, ವಿಮಾನಯಾನ, ಶಿಕ್ಷಣ, ಆರೋಗ್ಯದ ಬಗ್ಗೆ ಹೆಚ್ಚಿನ ಆದ್ಯತೆ ನೀಡಿದ್ದು, ಸ್ಟಾರ್ಟಫ್ ಕ್ರಾಂತಿಯ ಮೂಲಕವೇ ಭಾರತ ಸರ್ಕಾರ ಮಹತ್ವದ ಮೈಲಿಗಲ್ಲನ್ನು ಸೃಷ್ಟಿಸುವ ಬಗ್ಗೆ ನರೇಂದ್ರ ಮೋದಿಯವರು ಭರವಸೆ ನೀಡಿದ್ದಾರೆ.
ಒಟ್ಟಿನಲ್ಲಿ ರೋಜಗಾರ ಮೇಳ ಸಾಕಷ್ಟು ಯುವ ಸಮುದಾಯಕ್ಕೆ ಪ್ರೋತ್ಸಾಹ ನೀಡುವುದು ಮಾತ್ರವಲ್ಲದೆ ಆತ್ಮಸ್ಥೈರ್ಯ ತುಂಬುವ ಕಾರ್ಯವನ್ನು ಮಾಡಿದೆ. ಅಲ್ಲದೇ ಕೇಂದ್ರ ಸಚಿವರ ನೇತೃತ್ವದಲ್ಲಿ ಇಂತಹದೊಂದು ಕಾರ್ಯಕ್ರಮ ಹುಬ್ಬಳ್ಳಿಯಲ್ಲಿ ನಡೆದಿರುವುದು ನಿಜಕ್ಕೂ ವಿಶೇಷವಾಗಿದೆ.

ಹುಬ್ಬಳ್ಳಿಯಲ್ಲಿ ಉಚಿತ ಮನೆಪಾಠ: ಬೇಸಿಗೆ ರಜೆಯಲ್ಲಿ ಶಿಕ್ಷಣಕ್ಕೆ ಆದ್ಯತೆ...!
ಹುಬ್ಬಳ್ಳಿ: ಬೇಸಿಗೆ ರಜೆ ಅಂದಾಗ ಮಕ್ಕಳಲ್ಲಿ ಮಜವಾಗಿ ಕಳೆಯಬೇಕು ಎಂಬುವಂತ ಆಸೆ ಇರುತ್ತದೆ. ಆದರೆ ಪಾಲಕರಲ್ಲಿ ಮಕ್ಕಳ ಬಗ್ಗೆ ಕೆಲವೊಂದು ಆತಂಕ ಇರುತ್ತದೆ. ಈ ನಿಟ್ಟಿನಲ್ಲಿ ಬೆಳಗಾವಿ ಪ್ರಾಂತಿಕ ಸೇವಾ ಸಮಾಜ ಸೌಂಸ್ಥೆ ಹಾಗೂ ಸರಸ್ವತಿ ಸಮಾಜ ಸೇವಾ ಸಂಸ್ಥೆಯು ವಿನೂತನ ಕಾರ್ಯಕ್ರಮದ ಮೂಲಕ ಮಕ್ಕಳಿಗೆ ಶಿಕ್ಷಣ ನೀಡಲು ಮುಂದಾಗಿದೆ.
ಹುಬ್ಬಳ್ಳಿಯ ಮಂಗಳವಾರ ಪೇಟೆಯ ರುದ್ರಾಕ್ಷಿ ಮಠದಲ್ಲಿ ಉಚಿತ ಮನೆಪಾಠ (ಟ್ಯೂಷನ್) ಶಾಲೆಯನ್ನು ಆರಂಭಿಸಿದ್ದು, ಶಾಲೆಯನ್ನು ರುದ್ರಾಕ್ಷಿ ಮಠದ ಬಸವಲಿಂಗ ಮಹಾಸ್ವಾಮಿಗಳು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸರಸ್ವತಿ ಸಮಾಜ ಸೇವಾ ಸಂಸ್ಥೆಯ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ಮಹಾನಗರ ಪಾಲಿಕೆ ಸದಸ್ಯ ನಿರಂಜನ ಹೀರೆಮಠ, ಬಸವರಾಜ ಕುಸುಗಲ್, ಸಿದ್ದಲಿಂಗಪ್ಪ, ಗಿರಿಜಾ ಬಿ, ಬಸವರಾಜಪ್ಪ ಸರಸ್ವತಿ ಸಮಾಜ ಸೇವಾ ಸಂಸ್ಥೆಯ ಸದಸ್ಯರು ಹಾಗೂ ಪಾಲಕರು ಮಕ್ಕಳು ಹಾಜರಿದ್ದು, ಉಚಿತ ಮನೆಪಾಠ ಅಭಿಯಾನಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು.
ಇನ್ನೂ ಬೇಸಿಗೆ ರಜೆಯನ್ನು ಮತ್ತಷ್ಟು ಅರ್ಥಪೂರ್ಣವಾಗಿ ಕಳೆಯುವ ನಿಟ್ಟಿನಲ್ಲಿ ಇಂತಹದೊಂದು ಕಾರ್ಯಕ್ರಮಕ್ಕೆ ಮುಂದಾಗಿದ್ದು, ಬೇಸಿಗೆ ರಜೆಯಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡಿರುವುದು ವಿಶೇಷವಾಗಿದೆ.












Click it and Unblock the Notifications