ಪ್ರಧಾನಿಗೆ ಪತ್ರ ಬರೆದರೂ ಸಿಗದ ಪರಿಹಾರ: ಬದುಕು ನಡೆಸಲಾಗದೇ ಸಂಕಷ್ಟದಲ್ಲಿ ಸಾರಿಗೆ ನಿವೃತ್ತ ನೌಕರರು
ರಾಜ್ಯ ಸರ್ಕಾರ ಸಾರಿಗೆ ಇಲಾಖೆ ನೌಕರರ ಬೇಡಿಕೆ ಇಡೇರಿಸುದಿರಲಿ, ಇಲಾಖೆಯಲ್ಲಿ ಕೆಲಸ ಮಾಡಿ ನಿವೃತ್ತರಾದವರಿಗೂ ಗ್ರ್ಯಾಚುಟಿ ಹಣ ನೀಡಿಲ್ಲ. ಸಾರಿಗೆ ಇಲಾಖೆಯ ನಡುವಳಿಕೆಯಿಂದ ಬೇಸತ್ತು ಸಾರಿಗೆ ನಿವೃತ್ತ ನೌಕರರೊಬ್ಬರು ಇದೀಗ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.
ಹುಬ್ಬಳ್ಳಿ, ಮಾರ್ಚ್ 14: ಸಾರಿಗೆ ಇಲಾಖೆ. ಸದಾ ಸುದ್ದಿಯಲ್ಲಿರೋ ಇಲಾಖೆ. ಕಳೆದ ಕೆಲ ದಿನಗಳಿಂದ ಇಲಾಖೆ ನೌಕರರ ಸಂಬಳ ವಿಚಾರವಾಗಿ ಇಲಾಖೆ ಸಾಕಷ್ಟು ಸುದ್ದಿಯಲ್ಲಿತ್ತು. ರಾಜ್ಯ ಸರ್ಕಾರ ತಮ್ಮ ಬಗ್ಗೆ ಹೊಂದಿರುವ ನಿರ್ಲಕ್ಷ್ಯದ ವಿರುದ್ಧ ಇದೀಗ ಮತ್ತೆ ಸಾರಿಗೆ ಇಲಾಖೆ ನೌಕರರು ಮುಷ್ಕರಕ್ಕೆ ಸಿದ್ಧರಾಗಿದ್ದಾರೆ.
ರಾಜ್ಯ ಸರ್ಕಾರ ಸಾರಿಗೆ ಇಲಾಖೆ ನೌಕರರ ಬೇಡಿಕೆ ಇಡೇರಿಸುದಿರಲಿ, ಇಲಾಖೆಯಲ್ಲಿ ಕೆಲಸ ಮಾಡಿ ನಿವೃತ್ತರಾದವರಿಗೂ ಗ್ರ್ಯಾಚುಟಿ ಹಣ ನೀಡಿಲ್ಲ. ಸಾರಿಗೆ ಇಲಾಖೆಯ ನಡುವಳಿಕೆಯಿಂದ ಬೇಸತ್ತು ಸಾರಿಗೆ ನಿವೃತ್ತ ನೌಕರರೊಬ್ಬರು ಇದೀಗ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

ಹುಬ್ಬಳ್ಳಿಯ ಗೋಕುಲ್ ರಸ್ತೆಯ ಕಿರ್ಲೋಸ್ಕರ್ ಲೇಔಟ್‌ನ ನಿವಾಸಿ ಹನುಮಂತ ಆರ್ ಅಂಕುಶ್ ತನಗೆ ಸಿಗಬೇಕಾದ ಗ್ರ್ಯಾಚುಟಿ ಹಣ ನೀಡದ ಸಾರಿಗೆ ಇಲಾಖೆ ಅಧಿಕಾರಿಗಳ ವಿರುದ್ಧ ರೋಸಿ ಹೋಗಿದ್ದಾರೆ. 36 ವರ್ಷಗಳಿಂದ ಸಾರಿಗೆ ಇಲಾಖೆಯಲ್ಲಿ ಕೆಲಸ ಮಾಡಿ ಕಳೆದ ವರ್ಷ ನಿವೃತ್ತರಾಗಿರೋ ಹನಮಂತ ಅವರಿಗೆ ಇಲಾಖೆಯಿಂದ ಬರಬೇಕಾರ ಗ್ರ್ಯಾಚುಟಿ ಹಾಗೂ ರಜೆ ನಗದೀಕರಣದ ಸುಮಾರು 18 ಲಕ್ಷ ಹಣ ಬಂದಿಲ್ಲ ಎನ್ನಲಾಗಿದೆ.
ಹುಬ್ಬಳ್ಳಿಯ ಸಾರಿಗೆ ಇಲಾಖೆ ಅಧಿಕಾರಿಗಳ ಬಳಿ ಅಲೆದಾಡಿ ಅಲೆದಾಡಿ ಸುಸ್ತಾಗಿರುವ ಹನುಮಂತ ಅವರು ಇದೀಗ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ₹18 ಲಕ್ಷದಲ್ಲಿ ನನಗೆ ₹6.5 ಲಕ್ಷ ಅವಶ್ಯಕತೆ ಇದೆ ಹಣ ಕೊಡಿ ಎಂದು ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ತನಗೆ ಸಿಗಬೇಕಾದ ಹಣಕ್ಕಾಗಿ ಹನುಮಂತ ಪ್ರಧಾನಿಗಳಿಗೆ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿದ್ದಾರೆ.

ನಿವೃತ್ತಿಯಾದ ಬಳಿಕ ಹನುಮಂತ ಅವರಿಗೆಗೆ ಜೀವನ ನಡೆಸುವುದು ತುಂಬಾ ಕಷ್ಟವಾಗಿದೆ. ಅಲ್ಲದೇ ಕಿವಿ ಆಪರೇಶನ್ ಹಾಗೂ ಮಕ್ಕಳ ಶಿಕ್ಷಣಕ್ಕಾಗಿ ಹಣದ ಅವಶ್ಯಕತೆ ಇದೆ. ಇದೆ ಕಾರಣಕ್ಕೆ ಹುಬ್ಬಳ್ಳಿ ಸಾರಿಗೆ ಇಲಾಖೆ ವ್ಯವಸ್ಥಾಪಕ ನಿರ್ದೇಶಕ ಭರತ್‌ಗೆ ಹನುಮಂತ ಅಂಕುಶ್ ಹಲವಾರು ಬಾರಿ ಹಣ ಕೊಡಿ ಎಂದು ಮನವಿ ಮಾಡಿಕೊಂಡಿದ್ದ. ಆದರೆ ಇದುವರೆಗೂ ನಯಾಪೈಸೆ ಹಣ ಬಿಡುಗಡೆ ಮಾಡಿಲ್ಲ. ಇನ್ನು ತಾನು ದುಡಿದ ಹಣ ಕಷ್ಟಕಾಲದಲ್ಲಿ ಸಿಗದೆ ಇರೋದಕ್ಕೆ ನಿವೃತ್ತ ನೌಕರ ಬಿಜೆಪಿ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ.
ಹನುಮಂತ ಕಳೆದ 36 ವರ್ಷಗಳಿಂದ ಹುಬ್ಬಳ್ಳಿಯ ಸಾರಿಗೆ ವಿಭಾಗೀಯ ಕಚೇರಿಯಲ್ಲಿ ಕೆಲಸ ಮಾಡಿ ಕಳೆದ ವರ್ಷ ನಿವೃತ್ತರಾಗಿದ್ದಾರೆ. ಇತ್ತ ನೌಕರಿಯೂ ಇಲ್ಲದೆ, ಅತ್ತ ದುಡಿದ ಹಣವೂ ಇಲ್ಲದೆ ನಿವೃತ್ತ ನೌಕರಿಗೆ ಮನೆ ನಡೆಸುವುದು ತುಂಬಾ ಕಷ್ಟದ ಕೆಲಸವಾಗಿದೆ. ಒಂದು ಕಡೆ ತನ್ನ ಆರೋಗ್ಯ ಸಮಸ್ಯೆ ,ಇನ್ನೊಂದು ಕಡೆ ಮಕ್ಕಳ ಶಿಕ್ಷಣಕ್ಕೆ ಹಣದ ಅವಶ್ಯಕತೆ ಇದೆ ಎಂದು ಗೋಗರೆದರೂ ಅಧಿಕಾರಿಗಳು ಹಣ ಕೊಡುತ್ತಿಲ್ಲ.

ಇದು ಕೇವಲ ಹನುಮಂತ ಅವರ ಒಬ್ಬರ ಕಥೆಯಲ್ಲ. ವಾಯುವ್ಯ ಕರ್ನಾಟಕ ಸಾರಿಗೆ ವ್ಯಾಪ್ತಿಯ ಒಟ್ಟು 1,764 ಜನ ನಿವೃತ್ತ ನೌಕರರಿಗೆ ಸಾರಿಗೆ ಇಲಾಖೆ ಹಣ ನೀಡಬೇಕಾಗಿದೆ. 2021 ರಿಂದ 2023ರ ವರೆಗೂ ಸುಮಾರು 240 ಕೋಟಿಗೂ ಅಧಿಕ ಹಣ ಸಾರಿಗೆ ಇಲಾಖೆ ಬಾಕಿ ಉಳಿಸಿಕೊಂಡಿದೆ. ಇದೀಗ ಎನ್‌ಡಬ್ಲ್ಯೂಕೆಎಸ್‌ಆರ್‌ಟಿಸಿ ವ್ಯಾಪ್ತಿಯ 1764 ಜನ ನಿವೃತ್ತ ನೌಕರರು ಬೀದಿಗೆ ಬಿದ್ದಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಹಾಗೂ ಸರ್ಕಾರ ಕ್ಯಾರೇ ಎನ್ನುತ್ತಿಲ್ಲ ಎನ್ನುವುದು ನಿವೃತ್ತ ನೌಕರರ ಅಳಲಾಗಿದೆ.
ಒಟ್ಟಾರೆ ಸಾರಿಗೆ ಇಲಾಖೆ ಆರ್ಥಿಕ ಸಂಕಷ್ಟದ ನೆಪ ಹೇಳಿ ನಿವೃತ್ತ ನೌಕರರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ. ಪ್ರಧಾನಿಗೆ ಪತ್ರ ಬರೆದರೂ ಸಂಕಷ್ಟದಲ್ಲಿರುವ ನಿವೃತ್ತ ನೌಕರನಿಗೆ ಸಹಾಯ ಸಿಕ್ಕಿಲ್ಲ. ಸರ್ಕಾರವೂ ಸಾರಿಗೆ ಇಲಾಖೆ ಕೆಲಸ ಮಾಡಿಸಿಕೊಂಡು ನಡು ನೀರಿನಲ್ಲಿ ಕೈ ಬಿಟ್ಟಿದೆ ಎನ್ನುವುದು ಹಲವರ ಅಭಿಪ್ರಾಯವಾಗಿದೆ.
-
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್












Click it and Unblock the Notifications