• search
  • Live TV
ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹೈದರಾಬಾದ್ ಎನ್ ಕೌಂಟರ್: ಪ್ರಮೋದ್ ಮುತಾಲಿಕ್ ಮಾತುಗಳಿವು

By ಹುಬ್ಬಳ್ಳಿ ಪ್ರತಿನಿಧಿ
|

ಹುಬ್ಬಳ್ಳಿ, ಡಿಸೆಂಬರ್ 6: "ಹೈದರಾಬಾದ್ ಪಶು ವೈದ್ಯೆ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗಳನ್ನು ಪೊಲೀಸರು ಎನ್ ಕೌಂಟರ್ ಮಾಡಿದ್ದು ಸ್ವಾಗತಾರ್ಹ. ಹೈದರಾಬಾದ್ ಪೊಲೀಸ್ ಅಧಿಕಾರಿ ವಿಶ್ವನಾಥ್ ಸಜ್ಜನರ್ ಕಾರ್ಯ ಶ್ಲಾಘನೀಯ" ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅಭಿನಂದನೆ ಸಲ್ಲಿಸಿದ್ದಾರೆ.

ಎನ್ ಕೌಂಟರ್ ನಲ್ಲಿ ಭಾಗಿಯಾದ ಅಧಿಕಾರಿಗಳಿಗೆ ಅಭಿನಂದನಾ ವಿಡಿಯೋ‌ವನ್ನು ಅವರು ಬಿಡುಗಡೆ ಮಾಡಿದ್ದಾರೆ. "ಪೊಲೀಸರು ಅತ್ಯಾಚಾರಿಗಳಿಗೆ ಭಯ ಹುಟ್ಟುವಂತೆ ಮಾಡಿದ್ದಾರೆ. ಇದೊಂದು‌ ಉತ್ತಮ ಹೆಜ್ಜೆ.‌ ಮಾನವ ಹಕ್ಕುಗಳ ಹೆಸರಿನಲ್ಲಿ ಪೊಲೀಸರ ‌ಮೇಲೆ ಒತ್ತಡ ಹಾಕಬಾರದು" ಎಂದು ಹೇಳಿದ್ದಾರೆ.‌

ತೆಲಂಗಾಣ ಎನ್‌ಕೌಂಟರ್‌: ಸಮರ್ಥಿಸಿಕೊಂಡ ಪೊಲೀಸ್ ಆಯುಕ್ತತೆಲಂಗಾಣ ಎನ್‌ಕೌಂಟರ್‌: ಸಮರ್ಥಿಸಿಕೊಂಡ ಪೊಲೀಸ್ ಆಯುಕ್ತ

"ಅತ್ಯಾಚಾರಿಗಳಿಗೆ ಶಿಕ್ಷೆಯಾಗಬೇಕು. ನ್ಯಾಯಾಲಯ ಕೂಡ ದೀರ್ಘವಾಗಿ ಅತ್ಯಾಚಾರ ಪ್ರಕರಣಗಳ ವಿಚಾರಣೆ ನಡೆಸುವುದರಿಂದ ಇಂಥ ಘಟನೆಗಳು‌ ಮರುಕಳಿಸುತ್ತಿವೆ. ಈ‌ ಕಾರ್ಯ ‌ಮಾಡಿದ ಹುಬ್ಬಳ್ಳಿಯ ಪೊಲೀಸ್ ಅಧಿಕಾರಿ ವಿಶ್ವನಾಥ ಸಜ್ಜನರ್ ಹಾಗೂ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ" ಎಂದರು.

ಇದೇ ಸಂದರ್ಭ, ಹುಬ್ಬಳ್ಳಿ ಧಾರವಾಡ ಮಹಾನಗರ ಮಹಿಳಾ ಕಾಂಗ್ರೆಸ್ ವತಿಯಿಂದ ಅತ್ಯಾಚಾರಿ ಆರೋಪಿಗಳ ಎನ್ ಕೌಂಟರ್ ನಡೆದಿರುವುದನ್ನು ಸ್ವಾಗತಿಸಿ ದೀಪಾ ಗೌರಿ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಲಾಯಿತು. ಕಾಂಗ್ರೆಸ್ ಮುಖಂಡರಾದ ದೀಪಾ ಗೌರಿ, "ದೇಶದಲ್ಲಿ ನಡೆಯುತ್ತಿರುವ ಇಂತಹ ಅಮಾನವೀಯ ಕೃತ್ಯಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಸ್ವಾಗತಾರ್ಹ. ಅಮಾನವೀಯವಾಗಿ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಹಂತಕರಿಗೆ ಹುಬ್ಬಳ್ಳಿ ಹುಲಿ ವಿಶ್ವನಾಥ ಸಜ್ಜನವರು ಎನ್ ಕೌಂಟರ್ ಮಾಡಿರುವುದು ನಮ್ಮ ಹುಬ್ಬಳ್ಳಿ ಹೆಮ್ಮೆ" ಎಂದರು.

English summary
Srirama sena Pramod muthalik thanked hyderabad police by releasing video for encountering rape accused,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X