ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Republic Day Parade 2023: ಕರ್ನಾಟಕದ ಸ್ತಬ್ಧ ಚಿತ್ರಕ್ಕೆ ಅವಕಾಶ: ಪ್ರಲ್ಹಾದ್‌ ಜೋಶಿ ಹೇಳಿದ್ದೇನು?

ಜನವರಿ 26ರಂದು ನವದೆಹಲಿಯಲ್ಲಿ ನಡೆಯುವ ಗಣರಾಜೋತ್ಸವ ಪರೇಡ್‌ನಲ್ಲಿ ಕರ್ನಾಟಕದ ನಾರಿಶಕ್ತಿ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಅವಕಾಶ ಸಿಕ್ಕಿದೆ. ಈ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿಯವರು ಹೇಳಿದ್ದೇನು ಅಂತಾ ನೀವೆ ನೋಡಿ.

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಜನವರಿ, 25: ನವದೆಹಲಿಯಲ್ಲಿ ಜನವರಿ‌ 26 ರಂದು ನಡೆಯಲಿರುವ ಗಣರಾಜ್ಯೋತ್ಸವದ ಕಾರ್ಯಕ್ರಮದ ಪರೇಡ್‌ನಲ್ಲಿ ಭಾಗವಹಿಸಲು ಕರ್ನಾಟಕದ ಸ್ತಬ್ಧಚಿತ್ರಕ್ಕೆ ಕೊನೆ ಕ್ಷಣದಲ್ಲಿ ಅವಕಾಶ ನೀಡಲಾಗಿದೆ. ಪ್ರತಿ ವರ್ಷ ದೆಹಲಿಯ ರಾಜಪಥ್‍ನಲ್ಲಿ ನಡೆಯುವ ಗಣರಾಜ್ಯೋತ್ಸವ ದಿನಾಚರಣೆಯ ಪರೇಡ್‍ನಲ್ಲಿ ಕರ್ನಾಟಕದ ಸ್ತಬ್ಧಚಿತ್ರವನ್ನು ಪ್ರದರ್ಶನ ಮಾಡಲಾಗುತ್ತಿತ್ತು. ಆದರೆ, ಈ ವರ್ಷ ಅನುಮತಿ ದೊರಕದೆ ಇದ್ದದ್ದು ಸುದ್ದಿಯಾಗಿತ್ತು. ಆದರೆ ಇದೀಗ ಅನುಮತಿ ದೊರೆತಿದ್ದು, ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿಯವರು ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

ಕರ್ನಾಟಕದ ಸ್ತಬ್ಧಚಿತ್ರಕ್ಕೂ ಅವಕಾಶ

ಈ ಬಾರಿಯ ಗಣರಾಜ್ಯೋತ್ಸವದ ಸ್ತಬ್ಧಚಿತ್ರ ಪ್ರದರ್ಶನಕ್ಕೆ ತಮಿಳುನಾಡು, ಕೇರಳ ಸೇರಿ ಒಟ್ಟು 13 ರಾಜ್ಯಗಳ ಸ್ತಬ್ಧಚಿತ್ರಗಳನ್ನು ಆಯ್ಕೆ ಮಾಡಲಾಗಿತ್ತು. ಆದರೆ, ಕರ್ನಾಟಕದ ಟ್ಯಾಬ್ಲೊಗೆ ಅವಕಾಶ ದೊರಕಿರಲಿಲ್ಲ. ಬೇರೆ ರಾಜ್ಯಗಳಿಗೆ ಅವಕಾಶ ಮಾಡಿಕೊಡುವ ಸಲುವಾಗಿ ಕರ್ನಾಟಕದ ಸ್ತಬ್ಧಚಿತ್ರಕ್ಕೆ ಕೇಂದ್ರ ಆಯ್ಕೆ ಸಮಿತಿ ಅವಕಾಶ ನಿರಾಕರಿಸಿದೆ ಎನ್ನಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಅವಕಾಶ ದೊರೆತಿದ್ದು, ಈ ಬಾರಿಯ ಸ್ತಬ್ಧಚಿತ್ರ ಹೊಸ ಸಂದೇಶವನ್ನು ದೇಶಕ್ಕೆ ನೀಡಲಿದ್ದು, ಸಾಧಕರ ಸೇವೆಯನ್ನು ಸ್ಮರಿಸಲಿದೆ ಎಂದು ಜೋಶಿಯವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮರಳಿನಲ್ಲಿ ವರ್ಣರಂಜಿತ ಸ್ವಾಮಿ ವಿವೇಕಾನಂದ ಕಲಾಕೃತಿ ರಚಿಸಿದ ಕಲಾವಿದ ಮಂಜುನಾಥ ಹಿರೇಮಠಮರಳಿನಲ್ಲಿ ವರ್ಣರಂಜಿತ ಸ್ವಾಮಿ ವಿವೇಕಾನಂದ ಕಲಾಕೃತಿ ರಚಿಸಿದ ಕಲಾವಿದ ಮಂಜುನಾಥ ಹಿರೇಮಠ

ಭರದಿಂದ ಸಾಗಿದ ಸ್ತಬ್ಧಚಿತ್ರದ ತಾಲೀಮು

ಇನ್ನೂ ದೆಹಲಿಯಲ್ಲಿ ಜನವರಿ 26ರಂದು ನಡೆಯುವ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಕರ್ನಾಟಕ ರಾಜ್ಯದ ನಾರಿಶಕ್ತಿ ಹೆಸರಿನ ಸ್ತಬ್ಧಚಿತ್ರದ ತಾಲೀಮು ಭರದಿಂದ ಸಾಗಿದೆ. ರಾಜ್ಯದ ಮಾದರಿ ಮಹಿಳೆಯರಾದ ಸೂಲಗಿತ್ತಿ ನರಸಮ್ಮ, ತುಳಸೀ ಗೌಡ ಹಾಗೂ ಸಾಲು ಮರದ ತಿಮ್ಮಕ್ಕನವರ ಪ್ರತಿಕೃತಿಗಳನ್ನು ಹೊಂದಿದ ಆಕರ್ಷಕ ಸ್ತಬ್ಧಚಿತ್ರವನ್ನು ಹೊತ್ತ ವಾಹನ ಸೋಮವಾರ ಕರ್ತವ್ಯಪಥ ಮಾರ್ಗದಲ್ಲಿ ಸಾಗಿತ್ತು. ಗಣರಾಜ್ಯೋತ್ಸವ ತಾಲೀಮಿನಲ್ಲಿ ಪಾಲ್ಗೊಂಡಿರುವ ಈ ಆಕರ್ಷಕ ಚಿತ್ರಗಳ ದೃಶ್ಯ ಮನೋಹರವಾಗಿದೆ.

Pralhad Joshi What did says about Karnataka nari shakti tableau

ಟ್ಯಾಬ್ಲೋದಲ್ಲಿ ಇರಲಿರುವ ಪ್ರತಿಮೆಗಳು

8,000 ಗಿಡಗಳನ್ನು ನೆಟ್ಟಿರುವ ತುಮಕೂರಿನ ಗುಬ್ಬಿಯ ಹಸಿರು ಯೋಧೆ ಸಾಲುಮರದ ತಿಮ್ಮಕ್ಕ, 30,000 ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ತುಳಸಿಗೌಡ ಹಾಗೂ 70 ವರ್ಷಗಳಲ್ಲಿ ಉಚಿತವಾಗಿ 2,000ಕ್ಕೂ ಹೆಚ್ಚು ಸಾಂಪ್ರದಾಯಿಕ ಹೆರಿಗೆ ಮಾಡಿಸಿರುವ ಸೂಲಗಿತ್ತಿ ಪಾವಗಡದ ನರಸಮ್ಮ ಅವರ ಪ್ರತಿಮೆಗಳನ್ನು ಟ್ಯಾಬ್ಲೋ ಹೊಂದಿದೆ. ಈ ಕುರಿತು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿಯವರು ಅಭಿನಂದನೆ ಸಲ್ಲಿಸಿದ್ದಾರೆ.

English summary
Republic Day Parade 2023: Union Minister Pralhad Joshi What did say about Karnataka nari shakti tableau, here see details, know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X