Siddaramaiah: ಜವಾಬ್ದಾರಿಯಿಂದ ನುಣುಚಿಕೊಳ್ಳುವ ರಾಜ್ಯ ಸರ್ಕಾರ FIR ಹಾಕಲು ತಡ ಮಾಡಿದ್ದೇಕೆ? ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ, ಮೇ 02: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಕುರಿತು ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಈ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಯತ್ನ ಮಾಡುತ್ತಿದೆ ಎಂದು ಧಾರವಾಡ ಬಿಜೆಪಿ ಅಭ್ಯರ್ಥಿ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದರು.

ಪ್ರಜ್ವಲ್ ರೇವಣ್ಣ ಅವರನ್ನು ಕರ್ನಾಟಕ ಕರೆ ತರುವ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಈ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಗುರುವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ರಾಜ್ಯ ಸರ್ಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಯತ್ನಿಸುತ್ತಿದೆ. ಬೇರಯವರ ಮೇಲೆ ತಪ್ಪು ಹೊರೆಸುವ ಪ್ರಯತ್ನ ನಡೆಯುತ್ತಿದೆ.

Pralhad Joshi Questions Congress Govt Why Did You Delay For Filing FIR Against Prajwal Revanna

ಬೇಗ FIR ಏಕೆ ಹಾಕಲಿಲ್ಲ: ರಾಜ್ಯ ಸರ್ಕಾರಕ್ಕೆ ಜೋಶಿ ಪ್ರಶ್ನೆ

ನನ್ನ ಹಾಗೂ ಬಿಜೆಪಿ ಪ್ರಮುಖರ ಪ್ರಶ್ನೆಗೆ ರಾಜ್ಯ ಸರ್ಕಾರ ಇಲ್ಲವೇ ಮುಖ್ಯಮಂತ್ರಿಗಳು ಈವರೆಗೆ ಒಂದೇ ಒಂದು ಉತ್ತರ ನೀಡಿಲ್ಲ. ಪ್ರಜ್ವಲ್ ರೇವಣ್ಣನ ರಾಸಲೀಲೆ ವಿಡಿಯೋ ಕ್ಲಿಪ್ ಏಪ್ರಿಲ್ 21 ಕ್ಕೆ ಹೊರಗೆ ಬಂದಿದೆ. ಏಪ್ರಿಲ್ 28ರಂದು ಎಪ್‌ಐಆರ್ ಮಾಡಲಾಗಿದೆ. ಅಲ್ಲಿಯವರೆಗೆ ಏನು ಮಾಡಿದ್ದೀರಿ? ಎಂದು ಪ್ರಶ್ನಿಸಿದರು.

ಈಗ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡು ಬಿಜೆಪಿಯವರನ್ನು ಪ್ರಶ್ನೆ ಮಾಡುವ ಕಾಂಗ್ರೆಸ್‌ಗೆ ಗೊತ್ತಿರಲಿ ಇದು ಆರು ತಿಂಗಳು, ಒಂದು ವರ್ಷದ ಹಳೆಯದು ವಿಡಿಯೋಗಳಲ್ಲ. 2018 ರಿಂದಲೂ ಇರುವ ಪ್ರಕರಣವಾಗಿದ್ದು, ಈಗ ಹೊರ ಬಂದಿದೆ.

Pralhad Joshi Questions Congress Govt Why Did You Delay For Filing FIR Against Prajwal Revanna

ಅಂದು ಕಾಂಗ್ರೆಸ್‌-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದವು

ಅಂದು 2018 ರಲ್ಲಿ ಕಾಂಗ್ರೆಸ್ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡಿತ್ತು. ಸಾಕಷ್ಟು ಪ್ರಚಾರ ಮಾಡಿ ಮತಯಾಚಿಸಿದ್ದರು. ಇದು ಕಾಂಗ್ರೆಸ್‌ಗೆ ನೆನಪಿರಲಿ. ಪ್ರಕರಣ ಗೊತ್ತಾದ ಬಳಿಕ ನೀವು ಯಾವ ಕಾರಣಕ್ಕಾಗಿ ಎಫ್ ಐ ಆರ್. ಮಾಡಲಿಲ್ಲ, ತಡ ಮಾಡಿದ್ದೇಕೆ?. ಇದೆಲ್ಲ ನೋಡಿದರೆ ಕಾಂಗ್ರೆಸ್‌ನವರ ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿರುವುದು ಸ್ಪಷ್ಟವಾಗುತ್ತದೆ ಎಂದು ದೂರಿದರು.

ಅಮಿತ್ ಶಾ ಆಗಮನದಿಂದ ಕ್ಷೇತ್ರದಲ್ಲಿ ಶಕ್ತಿ

ಇಡೀ ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಗಾಳಿ ಪ್ರಚಂಡ ಗಾಳಿ ಬೀಸುತ್ತಿದೆ. ಕೇಂದ್ರ ಗೃಹ ಸಚಿವ ಅಮಿತಾ ಶಾ ಅವರು, ಹಾವೇರಿ ಕ್ಷೇತ್ರದಲ್ಲಿ, ಧಾರವಾಡದಲ್ಲಿ ನಡೆದ ಸಮಾವೇಶ ಅದ್ಭುತವಾದ ಶಕ್ತಿ ಕೊಟ್ಟಿದೆ.

ಉತ್ತರ ಕರ್ನಾಟಕ ಭಾಗದ 14 ಕ್ಷೇತ್ರಗಳಲ್ಲಿ ಎಲ್ಲವನ್ನು ಬಿಜೆಪಿ ಗೆಲ್ಲಲಿದೆ. ಹುಬ್ಬಳ್ಳಿಯ ನೇಹಾ ಕುಟುಂಬದವರು ಗೃಹ ಸಚಿವ ಅಮಿತಾ ಶಾ ಭೇಟಿ ಆಗಿದ್ದಾರೆ. ಸಿಐಡಿ ಮೇಲೆ ನಂಬಿಕೆ ಇಲ್ಲಾ ಎಂದು ನಿರಂಜನ್ ಹಿರೇಮಠ್ ಕುಟುಂಬದವರು ಹೇಳಿದ್ದಾರೆ. ನಮಗೆ ನ್ಯಾಯ ಬೇಕು ಎಂದು ಕೇಳಿದ್ದಾರೆ. ಆದಷ್ಟು ತ್ವರಿತ ನ್ಯಾಯ ಕೊಡಿಸಿ ಎಂದು ಕೇಳಿದ್ದಾರೆ. ತನಿಖೆ ಸಿಬಿಐಗೆ ಕೊಡಿಸಬೇಕು, ಆರೋಪಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಮನವಿ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+