ಬಂಡಾಯದ ನೆಲ ಯಮನೂರು ಗ್ರಾಮದಲ್ಲಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಪರ ಪ್ರಲ್ಹಾದ್‌ ಜೋಶಿ ಭರ್ಜರಿ ಮತಬೇಟೆ

ಅಣ್ಣಿಗೇರಿ, ಏಪ್ರಿಲ್‌, 30: ಬಂಡಾಯದ ನೆಲವಾದ ಯಮನೂರು ಗ್ರಾಮದಲ್ಲಿ ಸಚಿವ ಶಂಕರ್ ಪಾಟೀಲ ಮುನೇನಕೊಪ್ಪ ಹಾಗೂ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅವರು ಮನೆ ಮನೆಗೆ ತೆರಳಿ ಭರ್ಜರಿ ಮತಯಾಚನೆ ಮಾಡಿದರು.

ನಂತರ ಮಾತನಾಡಿದ ಪ್ರಲ್ಹಾದ್‌, ಮಹಾದಾಯಿ ವಿಷಯದಲ್ಲಿ ಲಾಠಿ ಚಾರ್ಜ್ ಮಾಡಿದ ಸರ್ಕಾರ ಬೇಕಾ ಅಥವಾ ಮಹಾದಾಯಿ ವಿಷಯದಲ್ಲಿ ಅನುಮೋದನೆ ನೀಡಿ ಟೆಂಡರ್ ಕರೆದಿರುವ ನಮ್ಮ ಬಿಜೆಪಿ ಬೇಕಾ? ಗೋಲಿಬಾರ್‌ ಮಾಡಿದ ಸರ್ಕಾರವನ್ನು ಕಿತ್ತು ಹಾಕಿ. ತುಪ್ಪರಿಹಳ್ಳದ ಸಮಸ್ಯೆ ಬಗೆಹರಿಸಿದರು ನಾವು. ಕರ್ನಾಟದ ಸರ್ವೋತೊಮುಖ ಅಭಿವೃದ್ಧಿ ಆಗಬೇಕು ಅಂದರೆ ನಿಮ್ಮ ಸಹಕಾರ ಅಗತ್ಯವಾಗಿದೆ. ಆದ್ದರಿಂದ ನೀವು ಬಿಜೆಪಿಗೆ ಮತ ಹಾಕಿ ಎಂದು ಮನವಿ ಮಾಡಿದರು.

Pralhad Joshi campaigned for Shankar Patil Munenakoppa in Yamanuru village

ನಮ್ಮ ಕಮಲವನ್ನು ಅರಳಿಸುವುದು ನಿಮ್ಮ ಕೈಯಲ್ಲಿದೆ. ಒಮ್ಮ ನಿಮ್ಮ ಶಂಕರ ಪಾಟೀಲ್ ಮುನೇನಕೊಪ್ಪ ಅವರನ್ನು ಗೆಲ್ಲಿಸಿ ಅಂತಾ ತೆರೆದ ವಾಹನದ ಮೇಲೆ ನಿಂತು ಪ್ರಲ್ಹಾದ್‌ ಜೋಶಿ ಜನರಲ್ಲಿ ಮನವಿ ಮಾಡಿಕೊಂಡರು.

ಬಂಡಾಯದ ಬೆಂಕಿ ನಂದಿಸಲು ಪ್ಲಾನ್‌

ಇನ್ನು ರಾಜ್ಯ ವಿಧಾನಸಭಾ ಚುನಾವಣಾ ಟಿಕೆಟ್‌ ಹಂಚಿಕೆಯಿಂದಾಗಿ ಬಿಜೆಪಿ ಪಾಳಯದಲ್ಲಿ ಬಂಡಾಯದ ಬೆಂಕಿ ಜೋರಾಗಿದೆ. ಟಿಕೆಟ್‌ ಕೈ ತಪ್ಪಿದ ಹಿನ್ನೆಲೆ ಕೆಲ ನಾಯಕರು ಪಕ್ಷಕ್ಕೆ ಗುಡ್‌ ಬೈ ಹೇಳಿದ್ರೆ, ಇತ್ತ ಕೆಲವು ನಾಯಕರು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ಇನ್ನೂ ರಾಜ್ಯ ಬಿಜೆಪಿಯಲ್ಲಿ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಈ ಹಿಂದೆ ಸಾಕಷ್ಟು ಬಿಜೆಪಿ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದು, ಕೇಸರಿ ಕೋಟೆಯಲ್ಲಿ ಬಿರುಕು ಮೂಡಿದೆ ಎಂದು ಹೇಳಿಲಾಗುತ್ತಿದ್ದು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇನೆ ಎಂದು ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.

ಈ ಕುರಿತು ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜೆ.ಪಿ ನಡ್ಡಾ ಅವರು ನನ್ನ ಮೇಲೆ‌ ಬಹಳಷ್ಟು ನಿರೀಕ್ಷೆ ಇಟ್ಟು ಒಳ್ಳೆಯ ಮಾತು ಹೇಳಿದ್ದಾರೆ. ಅಮಿತ್ ಶಾ ಅವರು ಬಂದಾಗ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು‌ ಹೋಗುವುದಾಗಿ ಹೇಳಿದ್ದೆ. ನಮ್ಮ ಪಕ್ಷದಲ್ಲಿ ಸ್ಪಷ್ಟ ನಿಲುವಿದೆ. ಸಿಎಂ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ.

ಕೇಂದ್ರ ಸಂಸದೀಯ ಮಂಡಳಿ ಮತ್ತು ಶಾಸಕರು ಮುಖ್ಯಮಂತ್ರಿ ಆಯ್ಕೆ ಮಾಡುತ್ತಾರೆ. ನಡ್ಡಾ ಅವರು ಹೇಳಿದ ಮಾತಿಗೆ ನಾನು ಚಿರಋಣಿಯಾಗಿರುತ್ತೇನೆ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುತ್ತೇನೆ ಎಂದು ಹೇಳಿದರು.

ಪ್ರವಾಹದ ಸಂದರ್ಭದಲ್ಲಿ ಮೋದಿ ರಾಜ್ಯಕ್ಕೆ ಬಂದಿಲ್ಲ ಎನ್ನುವ ಪ್ರಿಯಾಂಕಾ ಗಾಂಧಿ ಹೇಳಿಕೆ ಕುರಿತು ಮಾತನಾಡಿ, ಪ್ರವಾಹ ಬಂದಾಗ ಹೆಚ್ಚಿನ ಅನುದಾನ ಕೊಟ್ಟಿದ್ದು ಮೋದಿ ಸರ್ಕಾರ. ಪ್ರಿಯಾಂಕಾ ಗಾಂಧಿಯವರ ಸರ್ಕಾರದ ಇದ್ದಾಗ ಮನೆ ಬಿದ್ದರೆ 2 ಸಾವಿರ ಕೊಡುತ್ತಿದ್ದರು. ಅತಿವೃಷ್ಟಿ ಪರಿಹಾರ ಮೋದಿ ಕಾಲದಲ್ಲಿ ಹೆಚ್ಚಿಸಲಾಗಿದೆ‌. ಅತಿಹೆಚ್ಚು ರೈತರ ಆತ್ಮಹತ್ಯೆ ಆಗಿದ್ದು ಸಿದ್ದರಾಮಯ್ಯ ಅವರು ಕಾಲದಲ್ಲಿ. ರೈತರು ಆತ್ಮಹತ್ಯೆ ಮಾಡಿಕೊಂಡಾಗ ಪ್ರಿಯಾಂಕಾ ರಾಹುಲ್ ಬಂದಿದ್ರಾ ? ಎಂದು ಪ್ರಶ್ನಿಸಿದ್ದಾರೆ.

ಯಾವುದು ಸೂಕ್ತವಲ್ಲವೋ ಅದನ್ನು ಮಾತನಾಡಿ ಜನರನ್ನು ಮರಳು ಮಾಡಲು ಸಾದ್ಯವಿಲ್ಲ. ಜನತೆಗೆ ಗೊತ್ತಿರುವ ಮಾಹಿತಿ ಪ್ರಕಾರ ಪ್ರಿಯಾಂಕಾ ಗಾಂಧಿಗೆ ಕಾಂಗ್ರೆಸ್ ಸರಿಯಾದ ಮಾಹಿತಿ ನೀಡಿಲ್ಲ ಎಂದರು.

ಹಾಗೆಯೆ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಕುರಿತು ಮಾತನಾಡಿ, ಇದೇ ವೇಳೆ ಜಗದೀಶ್ ಶೆಟ್ಟರ್ ಎಲ್ಲ ಹೇಳಿಕೆಗೆ ನಾನು ಪ್ರತಿಕ್ರಿಯಿಸಲ್ಲ ಎಂದು ಹೇಳಿದ ಅವರು, ಮೋದಿಯವರಿಗೆ ದಿನಕ್ಕೆ ಐದು ಕಡೆ ಪ್ರಚಾರ ಮಾಡುವ ಶಕ್ತಿ ಇದೆ ಮಾಡುತ್ತಾರೆ. ಎಐಸಿಸಿಯ ಅಧ್ಯಕ್ಷ ಖರ್ಗೆಯವರು ಸೀನಿಯರ್ ಲೀಡರ್. ಅವರ ಬಾಯಿಂದ ಇಂತ ಮಾತು ಬಂದಿದೆ ಅಂದಾಗ, ಉಳಿದವರಿಂದ ಪ್ರತಿಕ್ರಿಯೆ ಬರೋದು ಸಹಜ. ಇನ್ನೂ ದೇವೇಗೌಡರು ಯಾವ ರಾಷ್ಟ್ರೀಯ ಪಕ್ಷದವರು ಮೈತ್ರಿಗೆ ಮುಂದಾಗಿದ್ದಾರೆ ಬಹಿರಂಗವಾಗಿ ಹೇಳಲಿ ಎಂದರು.

ಬಂಡಾಯದ ನೆಲವಾದ ಯಮನೂರು ಗ್ರಾಮದಲ್ಲಿ ಸಚಿವ ಶಂಕರ್ ಪಾಟೀಲ ಮುನೇನಕೊಪ್ಪ ಹಾಗೂ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅವರು ಮನೆ ಮನೆಗೆ ತೆರಳಿ ಭರ್ಜರಿ ಮತಯಾಚನೆ ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+