• search
  • Live TV
ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹುಬ್ಬಳ್ಳಿ-ಮುಂಬೈ ಏರ್ ಇಂಡಿಯಾ ಸೇವೆಗೆ ಚಾಲನೆ

|

ಹುಬ್ಬಳ್ಳಿ, ಡಿಸೆಂಬರ್. 12 : ಅಭಿವೃದ್ಧಿಗೊಂಡ ಹುಬ್ಬಳ್ಳಿ ವಿಮಾನ ನಿಲ್ದಾಣ ಸೋಮವಾರ ಲೋಕಾರ್ಪಣೆಗೊಂಡಿದೆ. ಏರ್ ಇಂಡಿಯಾದ ಹುಬ್ಬಳ್ಳಿ-ಮುಂಬೈ ವಿಮಾನ ಸೇವೆಗೂ ಚಾಲನೆ ಸಿಕ್ಕಿದೆ.

ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಅವರು ಮಂಗಳವಾರ ಹುಬ್ಬಳ್ಳಿ-ಮುಂಬೈ (ಏರ್ ಬಸ್ 319) ಸೇವೆಗೆ ಚಾಲನೆ ನೀಡಿದರು. ಹುಬ್ಬಳ್ಳಿ ವಿಮಾನ ನಿಲ್ದಾಣದ ವಿಸ್ತರಣೆಗೊಂಡ ರನ್‌ ವೇಯನ್ನು ಇಂದು ಉದ್ಘಾಟಿಸಲಾಯಿತು.

ಏರ್‌ ಇಂಡಿಯಾದಿಂದ ಹುಬ್ಬಳ್ಳಿ-ಮುಂಬೈ ನಡುವೆ ವಿಮಾನ ಸೇವೆ

ಬೆಂಗಳೂರಿನಿಂದ ಬಂದ ಏರ್ ಇಂಡಿಯಾದ ವಿಮಾನಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ವಾಟರ್ ಸೆಲ್ಯೂಟ್ ಸ್ವಾಗತ ಕೋರಲಾಯಿತು. ಹುಬ್ಭಳ್ಳಿಯಿಂದ 34 ಪ್ರಯಾಣಿಕರು ಮುಂಬೈಗೆ ಮೊದಲ ದಿನ ಪ್ರಯಾಣಿಸಿದರು.

ಮುಂಬೈನಿಂದ ವಿಮಾನ ಸಂಜೆ ಹುಬ್ಬಳ್ಳಿಗೆ ವಾಪಸ್ ಆಗಲಿದ್ದು, 37 ಜನರು ಬೆಂಗಳೂರಿಗೆ ತೆರಳಲು ಟಿಕೆಟ್ ಬುಕ್ ಮಾಡಿದ್ದಾರೆ. ಈ ವಿಮಾನ ಸಂಚಾರದ ಮೂಲಕ ಉತ್ತರ ಕರ್ನಾಟಕ ಭಾಗದ ಜನರ ಬಹು ದಿನದ ಕನಸು ನನಸಾಗಿದೆ.

ಬಳ್ಳಾರಿ-ಹೈದರಾಬಾದ್ ನಡುವಿನ ವಿಮಾನ ಸೇವೆಗೆ ಚಾಲನೆ

ವಿಮಾನದ ವೇಳಾಪಟ್ಟಿ : ಬೆಂಗಳೂರು-ಹುಬ್ಬಳ್ಳಿ-ಮುಂಬೈ ವಿಮಾನ ವಾರದಲ್ಲಿ ಮೂರು ದಿನ (ಮಂಗಳವಾರ, ಬುಧವಾರ, ಶನಿವಾರ) ಸಂಚಾರ ನಡೆಸಲಿದೆ.

ಬೆಂಗಳೂರಿನಿಂದ ಮಧ್ಯಾಹ್ನ 12 ಗಂಟೆಗೆ ಹೊರಡುವ ವಿಮಾನ 12.50ಕ್ಕೆ ಹುಬ್ಬಳ್ಳಿ ತಲುಪಲಿದೆ. 1.25ಕ್ಕೆ ಹೊರಟು, 2.30ಕ್ಕೆ ಮುಂಬೈ ತಲುಪಲಿದೆ.

3.25ಕ್ಕೆ ಮುಂಬೈನಿಂದ ಹೊರಡಲಿರುವ ವಿಮಾನ 4.35ಕ್ಕೆ ಹುಬ್ಬಳ್ಳಿಗೆ ಬರಲಿದೆ. 6.10ಕ್ಕೆ ಹುಬ್ಬಳ್ಳಿಯಿಂದ ಹೊರಟು ರಾತ್ರಿ 7.30ಕ್ಕೆ ಬೆಂಗಳೂರು ತಲುಪಲಿದೆ.

English summary
Air India's newest Hubballi-Mumbai flight service (air bus 319) launched on December 12, 2017. Dharwad BJP MP Prahlad Joshi flagged off for the service in Hubballi air port. ಹುಬ್ಬಳ್ಳಿ-ಮುಂಬೈ ಏರ್ ಇಂಡಿಯಾ ಸೇವೆಗೆ ಚಾಲನೆ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X