ಹುಬ್ಬಳ್ಳಿ: ಆಸ್ತಿಗಾಗಿ ಸಹೋದರಿ ಕೊಲೆ ಯತ್ನ, ಪೊಲೀಸರ ಅತಿಥಿಯಾದ ಸಹೋದರ

Posted By: Basavaraj
Subscribe to Oneindia Kannada

ಹುಬ್ಬಳ್ಳಿ, ಜುಲೈ 20: ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಇತ್ತೀಚಿಗೆ ಇಲ್ಲಿನ ಶಾಂತಿ ಕಾಲೊನಿ ಬಳಿ ಹೆಲ್ಮೆಟ್ ಹಾಕಿಕೊಂಡು ತನ್ನ ಸಹೋದರಿಯ ಕೊಲೆಗೆ ಯತ್ನಿಸಿದ್ದ ರಾಮಣ್ಣ ಮಣ್ಣೂರ ಎಂಬಾತ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಅಶೋಕನಗರ ಠಾಣೆ ಪೊಲೀಸರು ಬೆಳಗಾವಿಯ ಸವದತ್ತಿ ತಾಲೂಕಿನ ಕಗದಾಳ ಗ್ರಾಮದ ರಾಮಣ್ಣ ಮಣ್ಣೂರ ಎಂಬುವನನ್ನು ಬಂಧಿಸಿದ್ದಾರೆ. ನವಲಗುಂದದ ಹೆಬ್ಬಾಳ ಕ್ರಾಸ್ ಬಳಿ ರಾಮಣ್ಣನನ್ನು ಬಂಧಿಸಿರುವ ಪೊಲೀಸರು, ಆತನಿಂದ ಹಲ್ಲೆ ಮಾಡಲು ಬಳಸಿದ್ದ ಮಚ್ಚನ್ನು ವಶಕ್ಕೆ ಪಡೆದಿದ್ದಾರೆ.

Police has arrested Ramanna Mannur, who attacked his own sister

ರಾಮಣ್ಣನ ಸಹೋದರಿಯಾಗಿರುವ ಯಲ್ಲವ್ವ ಆಸ್ತಿಯಲ್ಲಿ ಪಾಲು ಕೊಡುವಂತೆ ಪೀಡಿಸುತ್ತಿದ್ದಳು. ಇದಕ್ಕಾಗಿ ಆಕೆಯ ಕೊಲೆಗೆ ರಾಮಣ್ಣ ಸಂಚು ರೂಪಿಸಿದ್ದ. ಈತ ಜುಲೈ 18 ರಂದು ಹೆಲ್ಮೆಟ್ ಹಾಕಿಕೊಂಡು ಮಚ್ಚಿನಿಂದ ಯಲ್ಲವ್ವ ಮೇಲೆ ಹಲ್ಲೆ ಮಾಡಿದ್ದ. ಹಲ್ಲೆಯನ್ನು ತಡೆಯಲು ಬಂದ ಮಗಳು ಭಾರತಿ, ಆಕೆಯ ಮೈದುನ ಪ್ರದೀಪ್ ಅವರ ಮೇಲೂ ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದ.

Hubballi - Varanasi train starts from May 28th

ಇದೀಗ ಆತನನ್ನು ಬೆನ್ನತ್ತಿ ಪೊಲೀಸರು ಬಂಧಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The police has been arrested Ramanna Mannur, who is accused of attempt to murder of his sister near Shanthi Nagar colony on July 18. He was attacked her by wearing helmet, after he escaped to somewhere. Now he is under police custody.
Please Wait while comments are loading...