ಸಂಸದ ಜೋಶಿಗೆ ಬೆದರಿಕೆ ಪತ್ರ: ತನಿಖೆಗೆ ಪೊಲೀಸ್ ಆಯುಕ್ತ ಆದೇಶ
ಹುಬ್ಬಳ್ಳಿ, ಫೆಬ್ರವರಿ 03 : ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ ಹಾಗೂ ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಅವರಿಗೆ ಬೆದರಿಕೆ ಪತ್ರ ಬಂದಿರುವ ಕುರಿತಂತೆ ತನಿಖೆ ನಡೆಸಲು ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಎಂ. ನಾಗರಾಜ್ ಸೂಚಿಸಿದ್ದಾರೆ.
ಶನಿವಾರ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಸಂಸದ ಪ್ರಹ್ಲಾದ್ ಜೋಶಿ ಅವರಿಗೆ ಲಷ್ಕರ್ ತೋಯಿಬಾ ಸಂಘಟನೆಯಿಂದ ಬೆದರಿಕೆ ಎದುರಾಗಿತ್ತು ಆ ವೇಳೆಯೇ ಅವರಿಗೆ ಸೂಕ್ತ ಭದ್ರತೆ ಒದಗಿಸಲಾಗಿದೆ. ಈಗಲೂ ಅವರಿಗೆ ಭದ್ರತೆಯನ್ನು ಮುಂದುವರೆಸಲಾಗುವುದು ಎಂದರು.

ಈ ಹಿಂದೆ ಬಸವರಾಜ ಹೊರಟ್ಟಿ ಸೇರಿದಂತೆ ಹಲವರಿಗೆ ಈ ತರಹದ ಪತ್ರಗಳು ಬಂದಿವೆ. ಡಿಸಿಪಿ ರೇಣುಕಾ ಸುಕುಮಾರ್ ಅವರಿಗೆ ತನಿಖೆ ಬಹಿಸಲಾಗಿದೆ. ಕುಮಾರ್ ಪಿಳ್ಳೈ ಹತ್ಯೆ ಪ್ರಕರಣದ ಆರೋಪಗಳ ವಿಚಾರಣೆ ನಡೆಯುತ್ತಿದೆ. ಸೈಂಟಿಸ್ಟ್ ಮಂಜ ಮತ್ತು ಸಹಚರರಿಂದ ಕಂಟ್ರಿಮೇಡ್ ಎರಡು ಪಿಸ್ತೂಲು, 8 ಜೀವಂತ ಗುಂಡುಗಳನ್ನು ವಶಪಡೆಯಲಾಗಿದೆ ಎಂದು ತಿಳಿಸಿದರು.












Click it and Unblock the Notifications