• search
  • Live TV
ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟಿಪ್ಪು ಜಯಂತಿಗೆ ಅವಕಾಶ ಕೇಳಿದ ಬೆನ್ನಲ್ಲೇ ಈದ್ಗಾ ಮೈದಾನಕ್ಕಾಗಿ ಸಂಘಟನೆಗಳ ಬೇಡಿಕೆ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ನವೆಂಬರ್9: ದಶಕಗಳ ಕಾಲ ವಿವಾದದ ಕೇಂದ್ರ ಬಿಂದುವಾಗಿದ್ದ ಹುಬ್ಬಳ್ಳಿಯ ಈದ್ಗಾ ಮೈದಾನ ಸುಪ್ರೀಂ ಕೋರ್ಟ್ ಆದೇಶದಿಂದ ತಣ್ಣಗಾಗಿ ಅವಳಿ ನಗರಗಳಾದ ಹುಬ್ಬಳ್ಳಿ ಧಾರವಾಡದ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿತ್ತು.

ಈದ್ಗಾ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಹಾಗೂ ರಾಷ್ಟ್ರೀಯ ಧ್ವಜ ಹಾರಿಸುವಂತೆ ಹಲವು ಹೋರಾಟಗಳು ನಡೆದಿದ್ದವು. ಇದರಿಂದ ಅವಳಿ ನಗರದ ಜನ ಹಾಗೂ ವಾಣಿಜ್ಯ ನಗರಿ ಹುಬ್ಬಳ್ಳಿಗೆ ಭೇಟಿ ನೀಡುತ್ತಿದ್ದ ಜನರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಈದ್ಗಾ ವಿವಾದದಲ್ಲಿ ಹಲವು ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾಗಿ ಜೈಲು ಪಾಲಾಗಿದ್ದರು.

ಕತಾರ್‌ನಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವ: ನಾಗಾಭರಣಗೆ 'ಕತಾರ್ ಕನ್ನಡ ಸಮ್ಮಾನ್' ಪ್ರಶಸ್ತಿಕತಾರ್‌ನಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವ: ನಾಗಾಭರಣಗೆ 'ಕತಾರ್ ಕನ್ನಡ ಸಮ್ಮಾನ್' ಪ್ರಶಸ್ತಿ

ನಿತ್ಯ ಪ್ರತಿಭಟನೆ ಲಾಠಿ ಚಾರ್ಜ್‌ಗೆ ಅವಳಿ ನಗರದ ಜನ ಬೇಸತ್ತು ಹೋಗಿದ್ದರು. ಬಳಿಕ ಸುಪ್ರೀಂ ಕೋರ್ಟ್ ಇದಕ್ಕೆಲ್ಲ ಫುಲ್ ಸ್ಟಾಪ್ ಹಾಕಿ ಈದ್ಗಾ ಮೈದಾನವನ್ನು ಪಾಲಿಕೆ ವಶಕ್ಕೆ ನೀಡಿತ್ತು. ಅಲ್ಲಿಂದ ಇಲ್ಲಿಯವರೆಗೆ ಶಾಂತವಾಗಿದ್ದ ಈದ್ಗಾ ಮೈದಾನ ವಿವಾದದ ಮತ್ತೆ ಆರಂಭಗೊಂಡಿದೆ.

ಈದ್ಗಾ ಮೈದಾನದಲ್ಲಿ ಗಣೇಶ ಚತುರ್ಥಿ ನಡೆಸಲು ಪಟ್ಟು ಹಿಡಿದಿದ್ದ ಹಿಂದೂಪರ ಸಂಘಟನೆಗಳು ಹಲವು ದಿನಗಳನ್ನು ಹೋರಾಟಗಳನ್ನು ನಡೆಸಿದ್ದರು. ಬಳಿಕ ಹಲವು ಜಟಾಪಟಿಗಳ ನಂತರ ಮೂರು ದಿನಗಳ ಕಾಲ ಗಣೇಶ ಪ್ರತಿಷ್ಠಾಪನೆಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅವಕಾಶ ನೀಡಿತ್ತು. ಹೀಗಾಗಿ ಈ ಬಾರಿ ಅದ್ಧೂರಿಯಾಗಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ನಡೆಸಲಾಯಿತು.

ಈಗ ಮತ್ತೆ ಈದ್ಗಾ ಮೈದಾನದ ವಿಚಾರ ಮುನ್ನೆಲೆಗೆ ಬಂದಿದ್ದು, ಗಣೇಶೋತ್ಸವದಂತೆ. ಟಿಪ್ಪು ಜಯಂತಿ ಆಚರಣೆ ಮಾಡಲು ಅವಕಾಶ ನೀಡುವಂತೆ ಎಐಎಂಐಎಂ ಕಾರ್ಯಕರ್ತರು ಆಗ್ರಹಿಸಿದ್ದಾರೆ. ಅಲ್ಲದ ಈದ್ಗಾ ಮೈದಾನದಲ್ಲಿ ಒನಕೆ ಓಬವ್ವ, ರತಿ ಮನ್ಮಥ ಪ್ರತಿಷ್ಠಾಪನೆಗೆ ಸಹ ಮನವಿ ಮಾಡಲಾಗಿದೆ. ಹುಬ್ಬಳ್ಳಿ ಧಾರಾವಾಡ ಮಹಾನಗರ ಪಾಲಿಕೆ ಪೌರಾಯುಕ್ತರಿಗೆ ಮತ್ತೆರಡು ಮನವಿ ಸಲ್ಲಿಕೆ ಮಾಡಲಾಗಿದೆ. ಅಷ್ಟೇ ಅಲ್ಲದೇ ಗಜಾನನ ಮಹಾಮಂಡಳಿ ಹೋಳಿ ಆಚರಣೆಗೆ ಅವಕಾಶ ಕೇಳಿ ಮನವಿ ಸಲ್ಲಿಸಿದ್ದಾರೆ.

ಮಾರ್ಚ್‌ನಲ್ಲಿ ರತಿ ಮನ್ಮಥ ಪ್ರತಿಷ್ಠಾಪನೆಗೆ ಎರಡು ದಿನ ಅವಕಾಶ ಕೇಳಿ ಮನವಿ ಸಲ್ಲಿಸಿರುವ ಸಲ್ಲಿಸಲಾಗಿದೆ. ಮತ್ತೊಂದು ಕಡೆ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಒನಕೆ ಓಬವ್ಬ ಜಯಂತಿಗೆ ಅವಕಾಶ ಕೇಳಿ ಮನವಿ‌ ಸಲ್ಲಿಸಿದ್ದಾರೆ. ಇದೇ ತಿಂಗಳು 11ರಂದು ವೀರ ವನಿತೆ ಒನಕೆ ಓಬವ್ವ ಜಯಂತಿ ಆಚರಿಸಲು ಸಂಘಟಕರು ಅವಕಾಶ ಕೇಳಿದ್ದಾರೆ.

ಟಿಪ್ಪು ಜಯಂತಿಗೆ ಅವಕಾಶ ಕೇಳಿದ ಬೆನ್ನಲ್ಲೇ ವಿವಿಧ ಸಂಘಟಕರಿಂದ ಈದ್ಗಾ ಮೈದಾನದಲ್ಲಿ ಅವಕಾಶಕ್ಕಾಗಿ ಆಗ್ರಹಿಸುತ್ತಿದ್ದಾರೆ. ಗಣೇಶೋತ್ಸವ ಆಚರಣೆ ಬಳಿಕ ಟಿಪ್ಪು ಜಯಂತಿಗೂ ಅವಕಾಶ ಕೇಳಿ ಮಹಾನಗರ ಪಾಲಿಕೆ ಇಕ್ಕಟ್ಟಿನಲ್ಲಿ ಸಿಲುಕಿಸುವಂತೆ ಮಾಡಲಾಗಿತ್ತು. ಇದರ ಬೆನ್ನಲ್ಲೆ ನಮಗೂ ಈದ್ಗಾ ಮೈದಾನದಲ್ಲಿ ವಿವಿಧ ಆಚರಣೆಗಳಿಗೆ ಬೇಕು ಎಂದು ವಿವಿಧ ಸಂಘಟನೆಗಳು ಪಟ್ಟು ಹಿಡಿದಿದ್ದು ಪಾಲಿಕೆಯೊಂದಿಗೆ ಅವಳಿ ನಗರಗಳಾದ ಹುಬ್ಬಳ್ಳಿ ಧಾರವಾಡ ಜನರಿಗೆ ಪ್ರಾಣ ಸಂಕಟವನ್ನು ತಂದೊಡ್ಡಿದೆ. ಮತ್ತೆ ದಶಕಗಳ ಹಿಂದೆ ನಡೆದಿದ್ದ ಕರಾಳ ದಿನಗಳು ಮರುಕಳಿಸುತ್ತವೆಯೇ ಎನ್ನುವ ಆತಂಕ ಎದುರಾಗಿದೆ.

English summary
Organization seeks Permission To Celebrate onake obavva jayanthi and holi At Hubballi Idgah Maidan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X